ಚಿಕ್ಕನಾಯಕನಹಳ್ಳಿ : ಕೊಬ್ಬರಿಗೆ ಬೆಂಬಲ ಬೆಲೆ ಹಾಗೂ ಸಹಾಯಧನ ನೀಡಿ ಸರ್ಕಾರವೇ ಖರೀದಿಸುವಂತೆ ಒತ್ತಾಯಿಸಿ ವಕೀಲರ ಸಂಘ ತಹಸೀಲ್ದಾರ್ ಅರ್ಚನಾ ಭಟ್ ರವರಿಗೆ ಮನವಿ ಸಲ್ಲಿಸಿತು.
ಮಾರುಕಟ್ಟೆಯಲ್ಲಿ ಒಣಕೊಬ್ಬರಿ ಬೆಲೆ ಪಾತಾಳಕ್ಕೆ ಕುಸಿದಿದೆ. ಅಗತ್ಯ ವಸ್ತುಗಳಾದ ಗೊಬ್ಬರ ಮತ್ತಿತರ ಪರಿಕರಗಳು ದುಬಾರಿಯಾಗಿ ಕೃಷಿ ಉತ್ಪನ್ನ ಹಾಗೂ ಕೊಬ್ಬರಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ 20 ಸಾವಿರ ರೂ. ಕನಿಷ್ಠ ಬೆಲೆ ನಿಗದಿಪಡಿಸಿ ಕೊಬ್ಬರಿ ಖರೀದಿ ಮಾಡಬೇಕು ಎಂದು ಒತ್ತಾಯಿಸಿದರು.
ವಕೀಲರ ಸಂಘದ ತಾ.ಅಧ್ಯಕ್ಷ ಎಂ.ಎನ್. ಶೇಖರಯ್ಯ, ಉಪಾಧ್ಯಕ್ಷ ಡಿ.ಎಂ. ಸ್ವಾಮಿ, ಕಾರ್ಯದರ್ಶಿ ಟಿ. ರವೀಂದ್ರಕುಮಾರ್, ಜಂಟಿ ಕಾರ್ಯದರ್ಶಿ ಜಿ.ವಿ. ಯತೀಶ್ಕುಮಾರ್, ಖಜಾಂಚಿ ಕೆ.ಎಸ್. ಗುರು ಚನ್ನವಬಸವಯ್ಯ, ವಕೀಲರಾದ ಪರಮೇಶ್ವರಯ್ಯ,ದಿಲೀಪ್, ಜ್ಞಾನಮೂರ್ತಿ, ರಮೇಶ್ ಬಾಬು,ಸಿ. ರಾಜಶೇಖರ್, ಕೆ.ಎಂ. ರಾಜಶೇಖರ್, , ಚಿಕ್ಕಣ್ಣ ಇದ್ದರು.
ಕೊಬ್ಬರಿಗೆ 20ಸಾವಿರ ರೂ. ಕನಿಷ್ಠ ಬೆಲೆ ನಿಗದಿಗೆ ಒತ್ತಾಯಿಸಿ ವಕೀಲರ ಸಂಘದ ಸದಸ್ಯರು ತಹಸೀಲ್ದಾರ್‌ಗೆ ಹಕ್ಕೋತ್ತಾಯ ಮಂಡಿಸಿದರು.
ವರದಿ ಚಿಕ್ಕನಾಯಕನಹಳ್ಳಿ ಚಂದ್ರು.
