ಮಾ. 9 ಕ್ಕೆ ಕಾಂಗ್ರೆಸ್ ಬೂತ್ ಮಟ್ಟದ ಮಹಿಳಾ ಮುಖಂಡರ ಸಮಾವೇಶ.

 ಮಧುಗಿರಿ : ತಾಲೂಕು ಮಹಿಳಾ ಕಾಂಗ್ರೆಸ್ ಸಮಿತಿಯ ಬೂತ್ ಮಟ್ಟದ ಮಹಿಳಾ ಮುಖಂಡರ ಸಮಾವೇಶವನ್ನು ಮಾ.9ರಂದು ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಮಹಿಳಾ ಕಾಂಗ್ರೆಸ್ ಸಮಿತಿಯ ನಗರದ ಅಧ್ಯಕ್ಷೆ ಚಂದ್ರಮ್ಮ ತಿಳಿಸಿದರು.   



ಪಟ್ಟಣದ ಎಂ ಎನ್ ಕೆ ಸಮುದಾಯದ ಭವನದಲ್ಲಿ ಮಹಿಳಾ ಘಟಕದಿಂದ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು. ಮಾ.9 ರ ಗುರುವಾರದಂದು ಎಪಿಎಂಸಿ ಹಿಂಭಾಗದಲ್ಲಿ ಬೂತ್ ಮಟ್ಟದ ಮಹಿಳಾ ಮುಖಂಡರ ಸಮಾವೇಶ ಹಮ್ಮಿಕೊಳ್ಳಲಾಗಿದ್ದು ಸುಮಾರು ಒಂಭತ್ತು ಸಾವಿರ ಮಹಿಳೆಯರು ಭಾಗವಹಿಸುವ ನೀರೀಕ್ಷೆ ಇದ್ದು ಮುಂದಿನ ವಿಧಾನ ಸಭೆಯ ಚುನಾವಣೆಗೆ ಕೆ.ಎನ್ ರಾಜಣ್ಣನವರ ಪರವಾಗಿ ಬೆಂಬಲ ಸೂಚಿಸಲಿದ್ದಾರೆ ಎಂದರು.


ಗ್ರಾಮಾಂತರ ಬ್ಲಾಕ್ ಮಹಿಳಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷೆ ಪ್ರಮೀಳಾ ಮಾತನಾಡಿ ಕಾರ್ಯ ಕ್ರಮದ ಉದ್ಘಾಟನೆಯನ್ನು ಮಧುಗಿರಿಯ ಸೂಸೆ ಹಾಗೂ ಕೆಜಿಎಫ್ ವಿಧಾನ ಸಭಾ ಕ್ಷೇತ್ರದ ಶಾಸಕಿಯಾಗಿರುವ ರೂಪಶಶಿಧರ್ ರವರು ನೇರವೇರಿಸಲಿದ್ದಾರೆ. ಶಾಂತಲಾ ರಾಜಣ್ಣರವರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೆಪಿಸಿಸಿ ಉಪಾಧ್ಯಕ್ಷರಾದ ಕೆ.ಎನ್ ರಾಜಣ್ಣ , ವಿಧಾನ ಪರಿಷತ್ ಸದಸ್ಯರಾದ ರಾಜೇಂದ್ರರಾಜಣ್ಣ , ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಜಿ.ಚಂದ್ರಶೇಖರ್ ಗೌಡ , ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ.ನಾಗಲಕ್ಷ್ಮೀ , ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷೆ ದೀಪಿಕಾರೆಡ್ಡಿ , ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷೆ ಗೀತ ರಾಜಣ್ಣ ಸೇರಿದಂತೆ ಮತ್ತಿತರರು ಆಗಮಿಸಲಿದ್ದಾರೆಂದರು. 


ಜೆಡಿಎಸ್ ಪಕ್ಷ ತ್ಯಜಿಸಿ ಇತ್ತೀಚೆಗೆ ಕಾಂಗ್ರೆಸ್ ಸೇರ್ಪಡೆಗೊಂಡ ತಿಂಗಳೂರಿನ ಸರಸ್ವತಿ ಮಾತನಾಡಿ ವೀರಭದ್ರಯ್ಯ ನವರು ಅಧಿಕಾರ ಹಿಡಿಯುವಾಗ ನಮ್ಮ ಅವಶ್ಯಕತೆ ಇತ್ತು ಅವರು ಶಾಸಕರಾದ ನಂತರ ನಮಗೆ ನೀಡಿದ ಕನಿಷ್ಠ ಭರವಸೆಗಳನ್ನು ಇದೂವರೆವಿಗೂ ಈಡೇರಿಸಲಿಲ್ಲ ಗ್ರಾಮಕ್ಕೆ ಬೇಕಾದ ಸೌಕರ್ಯ ಗಳನ್ನು ಕೊಡಲಿಲ್ಲ , ಐದು ವರ್ಷಗಳಿಂದ ಪಕ್ಷದ ಸಂಘಟನೆ ಯಲ್ಲಿ ತೊಡಗಿಸಿಕೊಂಡರು ಗೌರವಯುತವಾಗಿ ನಡೆಸಿಕೊಳ್ಳಲಿಲ್ಲ , ಆ ಪಕ್ಷದಲ್ಲಿ ಮಹಿಳೆಯರಿಗೆ ಸೂಕ್ತವಾದ ಪ್ರಾಧಾನ್ಯತೆಯನ್ನು ನೀಡುತ್ತಿಲ್ಲ ಆದ್ದರಿಂದ ಮನನೊಂದ ಕೆ.ಎನ್.ರಾಜಣ್ಣನವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಕಾಂಗ್ರೆಸ್ ಸೇರ್ಪೆಯಾಗಿದ್ದು ಮುಂದಿನ ದಿನಗಳಲ್ಲಿ ಎಲ್ಲಾರ ಸಹಕಾರಗಳೊಂದಿಗೆ ಕಾಂಗ್ರೆಸ್ ಪಕ್ಷವನ್ನು ಸಧೃಡಗೊಳಿಸುತ್ತೇನೆಂದರು.  


ಜಿ.ಪಂ ಮಾಜಿ ಸದಸ್ಯೆ ಮಂಜುಳ ಆದಿನಾರಾಯಣ ರೆಡ್ಡಿ , ಪುರಸಭೆಯ ಮಾಜಿ ಸದಸ್ಯರಾದ ಜುಬೇದಾಬಾನು , ಭಾಗ್ಯಮ್ಮ ರಾಜಣ್ಣ , ವಿವಿಧ ಮಹಿಳಾ ಘಟಕದ ಪದಾಧಿಕಾರಿಗಳಾದ , ಕಾಂಚನ , ಪುಷ್ಪ , ಫಸೀಹಾ , ಕೌಸಲ್ಯ , ಸಾವಿತ್ರಿ ನಾಗರಾಜು , ವೀಣಾ ತಿಮ್ಮರೆಡ್ಡಿ , ಎನ್ ಜಯಮ್ಮ , ಮುದ್ದಗಂಗಮ್ಮ , ನಾಗರತ್ನಮ್ಮ , ಭಾಗ್ಯಮ್ಮ , ಪಾವರ್ತಮ್ಮ ಹಾಗೂ ಮತ್ತಿತರರು ಇದ್ದರು.


ವರದಿ ಮಧುಗಿರಿ ಬಾಲು ಪಣಿಂದ್ರ.

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು