ಅಪ್ರಾಪ್ತ ಹೆಣ್ಣು ಮಕ್ಕಳು ಮತ್ತು ಮಹಿಳೆಯರು ವಂಚನೆ ಹಾಗೂ ದೌರ್ಜನ್ಯ ಕ್ಕೆ ಒಳಗಾದಾಗ ತಕ್ಷಣ ಕಾನೂನು ಸೇವಾ ಪ್ರಾಧಿಕಾರ , ಮಹಿಳಾ ಮತ್ತು ಮಕ್ಕಳ ರಕ್ಷಣಾ ಆಯೋಗದ ಸಹಕಾರ ಪಡೆದುಕೊಳ್ಳಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ನಾರಾಯಣ್ .

 ಪಾವಗಡ: ಅಪ್ರಾಪ್ತ ಹೆಣ್ಣು ಮಕ್ಕಳು ಮತ್ತು ಮಹಿಳೆಯರು ವಂಚನೆ ಹಾಗೂ ದೌರ್ಜನ್ಯ ಕ್ಕೆ ಒಳಗಾದಾಗ ತಕ್ಷಣ ಕಾನೂನು ಸೇವಾ ಪ್ರಾಧಿಕಾರ , ಮಹಿಳಾ ಮತ್ತು ಮಕ್ಕಳ ರಕ್ಷಣಾ ಆಯೋಗದ ಸಹಕಾರ ಪಡೆದುಕೊಳ್ಳಬೇಕು ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ನಾರಾಯಣ್ ತಿಳಿಸಿದರು.



 ಪಟ್ಟಣದ ಗುರುಭವನದಲ್ಲಿ ಮಂಗಳವಾರ ತಾಲ್ಲೂಕು ಆಡಳಿತ, ಪಂಚಾಯತ್, ಹಾಗೂ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪಾವಗಡ , ಸಹಭಾಗಿತ್ವದಲ್ಲಿ ಬಾಲ್ಯ ವಿವಾಹ ನಿಷೇಧ ಕುರಿತು ಯುವಜನಾಂಗದಲ್ಲಿ ಅರಿವು ಮೂಡಿಸಲು ತಾಲ್ಲೂಕು ಮಟ್ಟದ ಯುವ ಮೇಳ ಕಾಯ೯ಕ್ರಮ ಉದ್ಘಾಟಿಸಿ ಮಾತನಾಡಿದ ಅವರು 


ವರದಕ್ಷಿಣೆ ಕಿರುಕುಳ, ಅತ್ಯಾಚಾರ, ಲೈಂಗಿಕ ಕಿರುಕುಳ, ಕೌಟುಂಬಿಕ ದೌರ್ಜನ್ಯ ಮುಂತಾದ ವಿವಿಧ ರೀತಿಯ ದೌರ್ಜನ್ಯಕ್ಕೆ ಒಳಪಟ್ಟ ಮಹಿಳೆಯರಿಗೆ ಸಾಂತ್ವನ ಕೇಂದ್ರಗಳ ಮೂಲಕ ಕಾನೂನು ಸಲಹೆ, ಆರ್ಥಿಕ ಪರಿಹಾರ , ತಾತ್ಕಾಲಿಕ ಆಶ್ರಯ ರಕ್ಷಣೆ, ಸೂಕ್ತ ಮಾರ್ಗದರ್ಶನ ಸಮಾಲೋಚನೆ ಇನ್ನಿತರ ಸೌಲಭ್ಯಗಳನ್ನು ಪಡೆಯಬಹುದು, ಸಾಂತ್ವನ ಕೇಂದ್ರಕ್ಕೆ ದೂರು ನೀಡಿದವರ ಹೆಸರನ್ನು ಗೌಪ್ಯವಾಗಿಡಲಾಗುವುದು ಎಂದು ತಿಳಿಸಿದರು 


ಸರ್ಕಲ್ ಇನ್ಸ್‌ಪೆಕ್ಟರ್ ಅಜಯ್ ಸಾರಥಿ ಮಾತನಾಡಿ ಸಂಕಷ್ಟದ ಸಮಯದಲ್ಲಿ ಪೋಲಿಸರ ಸಹಾಯವನ್ನು ಪಡೆಯಬಹುದು ಯುಕ್ತಿ ಮತ್ತು ದೈರ್ಯದೊಂದಿಗೆ ಸಂಕಷ್ಟದಿಂದ ಪಾರಾಗುವುದನ್ನು ಕಲಿಯಬೇಕು ಎಂದು ತಿಳಿಸಿದರು 


ಪೌಷ್ಟಿಕ ಆಹಾರಗಳ ಮೇಳ ಸಹ ಕಾರ್ಯಕ್ರಮದ ಭಾಗವಾಗಿದ್ದು ವಿಶೇಷವಾಗಿತ್ತು, ಸಹಾಯಕಿ ಶಾರದಮ್ಮ ಮಾತನಾಡಿ ಮಕ್ಕಳಿಗೆ ವಿವಿಧ ಬಗೆಯ ಪೌಷ್ಟಿಕಾಂಶ ಉಳ್ಳ ಆಹಾರಗಳ ಪರಿಚಯ ಮಾಡುವ ಸಲುವಾಗಿ ಇವುಗಳ ಪ್ರದರ್ಶನ ಮಾಡಲಾಗುತ್ತಿದೆ ಎಂದು ಆಮೋಘ್ ನ್ಯೂಸ್ ಗೆ ತಿಳಿಸಿದರು  


ಕಾಯ೯ಕ್ರಮದಲ್ಲಿ ಪುರಸಭೆ ಅಧ್ಯಕ್ಷೆ ಧನಲಕ್ಷ್ಮಿ ,  

 ವೈದ್ಯಾಧಿಕಾರಿ ತಿರುಪತಯ್ಯ, ಸಿಬ್ಬಂದಿಯವರಾದ ಅಖ್ವೀಬ್ ಸಾಭ್, ನಾಗರಾಜು, ಜಯಲಕ್ಷ್ಮಿ, ಶಿವಮೂರ್ತಿ, ರವಿಕುಮಾರ್ ಇತರರು ಹಾಜರಿದ್ದರು.


ವರದಿ ಪಾವಗಡ ಶ್ರೀನಾಥ್.

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು