ಮಧುಗಿರಿ :ತಾಲ್ಲೂಕಿನಲ್ಲಿ ಕಳೆದ ಬಾರಿ ಸುರಿದ ಭಾರಿ ಮಳೆಯಿಂದ ಅಪಾರ ಹಾನಿ ಸಂಭವಿಸಿದ್ದು, ಜನರು ಓಡಾಡುವ ಸೇತುವೆಗಳಿಗೆ ಕಾಯಕಲ್ಪ ನೀಡಲು ಮುಂದಾಗಿದ್ದು 80 ಲಕ್ಷ ವೆಚ್ಚದಲ್ಲಿ 2 ಸೇತುವೆಗಳಿಗೆ ಕಾಯಕಲ್ಪ ನೀಡಿದ್ದೇವೆ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.
ತಾಲೂಕಿನ ದೊಡ್ಡೇರಿ ಹೋಬಳಿಯ ನಾಗೇನಹಳ್ಳಿ ಹಾಗೂ ತೊಣಚಗೊಂಡನಹಳ್ಳಿಯಲ್ಲಿ ತಲಾ 40 ಲಕ್ಷದ 2 ನೂತನ ಸೇತುವೆಗಳ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಭಾರಿ ಮಳೆಯಿಂದಾಗಿ ಬೆಲ್ಲದಮಡುಗು ಕೆರೆ ಒಡೆದಿದ್ದು ಆ ನೀರು ನುಗ್ಗಿದ ರಭಸಕ್ಕೆ ಈ ಎರಡೂ ಸೇತುವೆಗಳು ಹಾಳಾಗಿದ್ದು, ಮಳೆ ನಿಂತು 15 ದಿನ ಕಳೆದರೂ ಜನರು ಈ ರಸ್ತೆಯಲ್ಲಿ ಓಡಾಡಲು ಹರಸಾಹಸ ಪಡುತ್ತಿದ್ದ ಕಾರಣ ನನ್ನ ಅನುದಾನದಲ್ಲೇ ಎರಡೂ ಗ್ರಾಮದಲ್ಲಿ 80 ಲಕ್ಷ ವೆಚ್ಚದಲ್ಲಿ ನೂತನ ಸೇತುವೆ ನಿರ್ಮಾಣ ಮಾಡಲು ಮುಂದಾಗಿದ್ದೆ. ಅದರಂತೆ ಈ ಭಾಗದಲ್ಲಿನ ಜನರಿಗೆ ನೀಡಿದ ಭರವಸೆಯಂತೆ ಈ ನೂತನ ಸೇತುವೆಗೆ ಚಾಲನೆ ನೀಡಿದ್ದೇನೆ ಎಂದರು.
ಈ ಸಂದರ್ಭದಲ್ಲಿ ದೆಬ್ಬೆಗಟ್ಟ ಗ್ರಾ.ಪಂ. ಮಾಜಿ ಅಧ್ಯಕ್ಷ ರಂಗನಾಥ್ ಗೌಡ, ಮಾಜಿ ಉಪಾಧ್ಯಕ್ಷ ವೆಂಕಟೇಶ್, ಹಾಲಿ ಸದಸ್ಯರಾದ ಶ್ರೀಧರ್, ರಂಗನಾಥ್, ಶ್ರೀನಿವಾಸ್, ಮಾಜಿ ಸದಸ್ಯರಾದ ರಾಮಚಂದ್ರ, ಮುಖಂಡರಾದ ತಿಮ್ಮೇಗೌಡ, ಕಂಬಣ್ಣ, ತಿಮ್ಮಾರೆಡ್ಡಿ, ಸಂಜೀವರೆಡ್ಡಿ, ರಂಗನಾಥ್, ಗುತ್ತಿಗೆದಾರರು ಹಾಗೂ ಇತರರು ಇದ್ದರು.
ವರದಿ ಮಧುಗಿರಿ ಬಾಲು ಪಣಿಂದ್ರ.
