ಶಿರಾ: ಕಾರ್ಮಿಕ ಇಲಾಖೆಯ ವತಿಯಿಂದ ವಿವಿಧ ಸಂಸ್ಥೆಗಳ ಮೇಲೆ ಬಾಲ ಹಾಗೂ ಕಿಶೋರ ಕಾರ್ಮಿಕ ಇಲಾಖೆ ದಾಳಿ ಮಾಡಲಾಗಿದ್ದು, 5 ಜನ ಕಿಶೋರ ಕಾರ್ಮಿಕರು ಪತ್ತೆಯಾಗಿದ್ದು 4 ಜನ ಕಿಶೋರ ಕಾರ್ಮಿಕರನ್ನು ಬಾಲಮಂದಿರಕ್ಕೆ ದಾಖಲಿಸಲಾಯಿತು ಹಾಗೂ ಒಬ್ಬ ಕಿಶೋರ ಕಾರ್ಮಿಕನನ್ನು ಕಾಲೇಜಿಗೆ ದಾಖಲಿಸಲಾಗಿದೆ.
ಕಿಶೋರ ಕಾರ್ಮಿಕರನ್ನು ನೇಮಿಸಿಕೊಂಡ ಮಾಲೀಕರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಮಧುಗಿರಿ ಉಪವಿಭಾಗ ಕಾರ್ಮಿಕ ಅಧಿಕಾರಿ ತೇಜಾವತಿ ತಿಳಿಸಿದರು.
ಕಿಶೋರ ಕಾರ್ಮಿಕರನ್ನು ಬಾಲಮಂದಿರಕ್ಕೆ ದಾಕಲಿಸಲು ಶಿರಾ ತಹಶಿಲ್ದಾರ್ ನಾಗಮಣಿ ವಾಹನ ವ್ಯವಸ್ಥೆ ಮಾಡಿಕೊಡುವ ಮೂಲಕ ಸಹಕರಿಸಿದರು
ಈ ಸಂಧರ್ಭದಲ್ಲಿ ಶಿರಾ ತಾಲ್ಲೂಕು ತಹಸಿಲ್ದಾರ್, ಸಿಡಿಪಿಒ, ಪೋಲಿಸ್ ಅಧಿಕಾರಿಗಳು, ಕೃಷಿ ಇಲಾಖೆ ಅಧಿಕಾರಿ,ಶಿಕ್ಷಣ ಇಲಾಖೆಯ BRP ಬಿಆರ್ ಪಿ ಕಾರ್ಮಿಕ ಇಲಾಖೆಯ ನಿರೀಕ್ಷಕರು, ಬಾಲಕಾರ್ಮಿಕ ಯೋಜನಾ ಸೊಸೈಟಿ ಪ್ರಾಜೆಕ್ಟ್ ಡೈರೆಕ್ಟರ್ ಹಾಗೂ ಮುಂತಾದವರು ಇದ್ದರು.