ರಂಗಾಪುರ ಗ್ರಾ.ಪಂ.ನ ಆಡಳಿತ ಈ ಬಾರಿ ಜೆಡಿಎಸ್ ತೆಕ್ಕೆಗೆ.

 ಮಧುಗಿರಿ : ರಂಗಾಪುರ ಗ್ರಾ.ಪಂ.ನ ಆಡಳಿತ ಈ ಬಾರಿ ಜೆಡಿಎಸ್ ತೆಕ್ಕೆಗೆ ಬಿದ್ದಿದೆ.

ತಾಲೂಕಿನ ದೊಡ್ಡೇರಿ ಹೋಬಳಿಯ ರಂಗಾಪುರ ಗ್ರಾ.ಪಂ.ನಲ್ಲಿ ಎರಡನೇ ಅವ„ಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್‍ನ ನಾಗೇಶ್ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಕಾಂಗ್ರೆಸ್‍ನ ಮಂಜುಳಾ ಆಯ್ಕೆಯಾದರು. 

ಆಯ್ಕೆಯಾದ ನಂತರ ಮಾತನಾಡಿದ ನೂತನ ಅಧ್ಯಕ್ಷ ನಾಗೇಶ್, ನನ್ನ ಆಯ್ಕೆಗೆ ಸಹಕರಿಸಿದ ಎಲ್ಲರಿಗೂ ಅಭಿನಂದನೆಗಳು. ಮುಂದಿನ 30 ತಿಂಗಳ ಅವ„ಯಲ್ಲಿ ಗ್ರಾ.ಪಂ.ನ ವ್ಯಾಪ್ತಿಯ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಕ್ಕೆ ಮೊದಲ ಆದ್ಯತೆ ನೀಡಲಿದ್ದು, ಶಾಲೆ, ಅಂಗನವಾಡಿ ಹಾಗೂ ಸರ್ಕಾರದ ಸ್ವತ್ತುಗಳ ರಕ್ಷಣೆಗೆ ಮುಂದಾಗುತ್ತೇನೆ. ಸಚಿವರ ಸಹಕಾರದಿಂದ ಗ್ರಾ.ಪಂ. ಅನುದಾನದಲ್ಲಿ ನಮ್ಮ ವ್ಯಾಪ್ತಿಯ ಎಲ್ಲ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತವಾಗಿ ನೋಟ್‍ಬುಕ್ ವಿತರಣೆ ಮಾಡುತ್ತಿದ್ದೇವೆ. ಅಲ್ಲದೆ ಶಿಕ್ಷಣಕ್ಕೆ ಹೆಚ್ಚಿನ ಕಾಳಜಿ ನೀಡಲಿದ್ದು, ನರೇಗಾ ಯೋಜನೆಯಲ್ಲಿ ಅಗತ್ಯ ಕಾಮಗಾರಿಗಳನ್ನು ಪರಿಣಾಮಕಾರಿ ಅನುಷ್ಠಾನಕ್ಕೆ ಎಲ್ಲ ಸದಸ್ಯರ ಸಹಕಾರದಿಂದ ಹೆಜ್ಜೆ ಇಡುತ್ತೇನೆ ಎಂದರು. 

ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಮಂಜುಳಾ, ಸದಸ್ಯರಾದ ರಾಧಮ್ಮ, ಶ್ರೀನಿವಾಸ್, ಜ್ಯೋತಿ, ಮಂಜುಳಾ ಪ್ರಶಾಂತ್, ಮುದ್ದು ಹೋಬಳಯ್ಯ, ಗೋವಿಂದಪ್ಪ, ಪೂಜಾ, ಮಹಾಲಕ್ಷ್ಮೀ, ಮಂಜುನಾಥ್, ಕಾಮರಾಜ್, ಸಾಕಮ್ಮ, ದೇವರಾಜ್, ಪಿಡಿಓ ಜುಂಜೇಗೌಡ, ಚುನಾವಣಾ„ಕಾರಿ ಚಿತ್ತಯ್ಯ, ಮುಖಂಡರಾದ ಸಿಡಿದರಗಲ್ಲು ಶ್ರೀನಿವಾಸ್, ಬೋರ್‍ವೆಲ್ ಕುಮಾರ್ ಹಾಗೂ ಇತರರು ಇದ್ದರು. 

ವರದಿ ಮದುಗಿರಿ ಬಾಲುಪಣಿಂದ್ರ.

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು