ಗುಬ್ಬಿ (ಎಂ ಎನ್ ಕೋಟೆ) : ಗ್ರಾಮೀಣ ಭಾಗದಲ್ಲಿ ಕ್ರೀಡೆ ಎಂಬುಂದು ಕಣ್ಮೇರೆಯಾಗುತ್ತಿದೆ ಪ್ರತಿಯೊಬ್ಬರ್ ಸಹ ಕ್ರೀಡೆಯಲ್ಲಿ ಭಾಗವಹಿಸಬೇಕು ಎಂದು ತೇವಡೆಹಳ್ಳಿ ಅಡಿಕೆ ಮಾಲೀಕರಾದ ಟಿ.ಎ.ದಕ್ಷೀಣಾಮೂರ್ತಿ ತಿಳಿಸಿದರು.
ಗುಬ್ಬಿ ತಾಲ್ಲೂಕಿನ ಹೊಸಕೆರೆಯಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಕ್ರಿಕೇಟ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ಅವರು ಸರ್ಕಾರ ಗ್ರಾಮೀಣ ಬಾಗದಲ್ಲಿ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕ್ರೀಡಾಂಗಣ ಮಾಡಬೇಕು ತಾಲ್ಲೂಕ್ ಕೇಂದ್ರದಲ್ಲಿ ಬಿಟ್ಟರೆ ಹೋಬಳಿ ಮಟ್ಟದಲ್ಲಿ ಎಲ್ಲೂ ಸಹ ಕ್ರೀಡೆಗಳು ಆಯೋಜನೆ ಮಾಡಲು ಜಾಗದ ಕೊರತೆ ಇರಿವುದರಿಂದ ಸರ್ಕಾರ ತುರ್ತಾಗಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕ್ರೀಡೆಗೆ ಜಾಗ ನೀಡಬೇಕು ಇದ್ದರಿಂದ ಕ್ರೀಡಾಪಟುಗಳಿಗೆ ಅನುಕೂಲವಾಗುತ್ತದೆ ಎಂದರು.
ಕ್ರೀಡೆಯಲ್ಲಿ ಸೋಲು ಗೆಲುವು ಸಹಜ ಎಲ್ಲರೂ ಸಹ ಒಗ್ಗೂಡಿ ಅಡಿದಾಗ ಮಾತ್ರ ಗೆಲುವು ಸಾಧ್ಯವಾಗುತ್ತದೆ. ಗ್ರಾಮೀಣ ಭಾಗದವರು ಯುವಕರು ರಾಜ್ಯ ರಾಷ್ವ್ರಮಟ್ಟದಲ್ಲಿ ಆಡಬೇಕು ಗ್ರಾಮೀಣ ಭಾಗದವರೇ ಹೆಚ್ಚು ಪ್ತಶಸ್ತಿಗಳನ್ನು ಗಳಿಸಬೇಕು ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಂದಿನಿ ನವೀನ್ ಮಾತನಾಡಿ ಕ್ರೀಡೆ ಎಂಬುಂದು ಎಲ್ಲರಿಗೂ ಮಾದರಿಯಾಗಬೇಕು. ಕ್ರೀಡೆಯಲ್ಲಿ ಸೋಲುವುದು ಗೆಲ್ಲವುದು ಮುಖ್ಯವಲ್ಲ ಕ್ರೀಡೆಯಲ್ಲಿ ಭಾಗವಹಿಸವುದು ಮುಖ್ಯ ಎಲ್ಲರೂ ಸಹ ಗೆಲ್ಲಲ್ಲು ಸಾಧ್ಯವಿಲ್ಲ ಆದ್ದರಿಂದ ಪ್ರತಿಯೊಬ್ಬರ್ ಕ್ರೀಡೆಯಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಗಳನ್ನು ಗುರುತಿಸಿಕೊಳಬೇಕು ಎಂದ ಅವರು ಕ್ರೀಡೆಗಳು ಗ್ರಾಮೀಣ ಭಾಗದಲ್ಲಿ ಹೆಚ್ಷು ಹೆಚ್ಚು ಆಡಬೇಕು ಇತ್ತಿಚಿನ ದಿನಗಳಲ್ಲಿ ದೇಶಿಯ ಕ್ರೀಡೆಗಳನ್ನು ಉಳಿಸಿ ಬೆಳೆಸಬೇಕು ಎಂದು ತಿಳಿಸಿದರು.
ಇದೇ ಸಂಧರ್ಭದಲ್ಲಿ ಬಿಜೆಪಿ ತಾಲ್ಲೂಕ್ ಉಪಾಧ್ಯಕ್ಷ ಎಕೆಪಿರಾಜು , ಗ್ರಾಮ ಪಂಚಾಯಿತಿ ಸದಸ್ಯ ಮಹಾರದ್ರಸ್ವಾಮಿ , ಬೆಸ್ಕಾಂ ಮೇಲ್ವಿಚಾರ ವಸಂತ್ , ಮುಖಂಡರಾದ ಸಂತೋಷ್ , ಚೇತನ್ ದೀಲೀಪ್ , ತಿರ್ಥೇಶ್ ,ಲೋಹೀತ್ ತರುಣ್ ಭಾಗವಹಿಸಿದ್ದರು.
ವರದಿ : ಎಂ ಎನ್ ಕೋಟೆ ಮೋಹನ್.
