ಮೇಲ್ಮನವಿ ಸಲ್ಲಿಸುವ ಮುನ್ನವೇ ರಾಹುಲ್ ಗಾಂಧಿ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿರುವುದು ಪ್ರಜಾಪ್ರಭುತ್ವಕ್ಕೆ ಮರಣಶಾಸನವಾಗಿದೆ ಜಿಲ್ಲಾ ಕಾಂಗ್ರೆಸ್ ಮುಖಂಡ ಸಿ.ಡಿ.ಚಂದ್ರಶೇಖರ್

 ಚಿಕ್ಕನಾಯಕನಹಳ್ಳಿ: ಮೇಲ್ಮನವಿ ಸಲ್ಲಿಸುವ ಮುನ್ನವೇ ರಾಹುಲ್ ಗಾಂಧಿ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿರುವುದು ಪ್ರಜಾಪ್ರಭುತ್ವಕ್ಕೆ ಮರಣಶಾಸನವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಮುಖಂಡ ಸಿ.ಡಿ.ಚಂದ್ರಶೇಖರ್ ಆರೋಪಿಸಿದರು.



ಪಟ್ಟಣದ ನೆಹರು ವೃತ್ತದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಲೋಕಸಭೆ ಸದಸ್ಯತ್ವ ಸ್ಥಾನದಿಂದ ಅನರ್ಹಗೊಳಿಸಿದ್ದನ್ನು ಖಂಡಿಸಿ ಬ್ಲಾಕ್,ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಹಮ್ಮಿಕೊಂಡು ಬಿಜೆಪಿ ಸರ್ಕಾರ ದ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕಪಡಿಸಿದರು.


ಬಿಜೆಪಿಯ ಸೇಡಿನ ರಾಜಕಾರಣದ ನಿರಂಕುಶ ಪ್ರಭುತ್ವದ ರೂಪಾಂತರವು ಆತಂಕಕಾರಿ ವೇಗದಲ್ಲಿ ನಡೆಯುತ್ತಿದೆ. ಇತಿಹಾಸವನ್ನು ಗಮನಿಸಿದರೆ, ಅಂತಹ ನಿರಂಕುಶಾಧಿಕಾರಿಗಳಿಗೆ ಏನಾಗುತ್ತದೆ ಎಂಬುದು ಸ್ಪಷ್ಟವಾಗುತ್ತದೆ.


ರಾಹುಲ್ ಗಾಂಧಿ ಯ ಧ್ವನಿ ಯನ್ನ ಅಡಗಿಸಿದರೆ,ಬಂಧಿಸಿದರೆ ಕಾಂಗ್ರೆಸ್ನವರು ಹೆದರುತ್ತಾರೆ ಎಂದು ತಿಳಿದುಕೊಂಡಿದ್ದರೆ ಅದು ಸುಳ್ಳು.



ರಾಹುಲ್ಗಾಂಧಿ ವಿಚಾರದಲ್ಲಿ ಕಟುವಾಗಿ ವರ್ತಿಸಿರುವ ಬಿಜೆಪಿ ಇಬ್ಬಗೆ ನೀತಿ ಅನುಸರಿಸುತ್ತಿದೆ. ಶಿಕ್ಷೆಗೆ ಗುರಿಯಾಗಿರುವ ಬಿಜೆಪಿಯ ಇಬ್ಬರು ಶಾಸಕರ ಬಗ್ಗೆ ಮೌನವಹಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.


ಮುಖಂಡ ಡಾ. ವಿಜಯ ರಾಘವೇಂದ್ರ ಮಾತನಾಡಿ, ಮಾನಹಾನಿ ಪ್ರಕರಣದಲ್ಲಿ ರಾಹುಲ್ ಗಾಂಧಿ ಅವರಿಗೆ ಸೂರತ್ ಜೆಎಂಎಫ್ ಸಿ ಕೋರ್ಟ್ ಶಿಕ್ಷೆ ಪ್ರಕಟಿಸಿ ಒಂದು ತಿಂಗಳು ಕಾಲಾವಕಾಶ ಕೊಟ್ಟಿದ್ದರೂ, ಲೋಕಸಭೆಯಲ್ಲಿ ತರಾತುರಿಯಲ್ಲಿ ರಾಹುಲ್ ಗಾಂಧಿ ಅವರ ಲೋಕಸಭಾ ಸ್ಥಾನ ಕ್ಕೆ ಅನರ್ಹತೆ ನಿರ್ಧಾರ ಕೈಗೊಳ್ಳಲಾಗಿರುವುದು ವಿರೋಧ ಪಕ್ಷದ ಧ್ವನಿಯನ್ನು ಹತ್ತಿಕ್ಕುವ ಎಲ್ಲಾ ದುರ್ಮಾರ್ಗಗಳನ್ನು ಬಳಸುವ ಬಿಜೆಪಿ ಸರ್ಕಾರದ ನೀತಿಗಳು ಹಿಟ್ಲರ್ ನನ್ನು ನಾಚಿಸುವಂತಿವೆ ಎಂದು ಆಕ್ರೋಶ ವ್ಯಕಪಡಿಸಿದರು.


ಯುವ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಸಾಸಲು ಮಂಜುನಾಥ್ ಮಾತನಾಡಿ ಪ್ರಜಾಪ್ರಭುತ್ವದ ಕಗ್ಗೊಲೆ ಯಾಗಿದೆ ಭಾರತದ ಪ್ರಜಾಪ್ರಭುತ್ವಕ್ಕೆ ಇಂದು ಬಿಜೆಪಿ ಸರ್ಕಾರ ಕಪ್ಪು ಚುಕ್ಕೆ ಇಟ್ಟಿದೆ,


ಕಾಂಗ್ರೆಸ್ ಪಕ್ಷ ಅಂದು ಸ್ವತಂತ್ರಕ್ಕಾಗಿ ಬ್ರಿಟಿಷರ ವಿರುದ್ಧ ಮಾಡಿದ್ದು ಹೋರಾಟ ಮಾಡಿದ್ದು, ಇಂದು ಸಂವಿಧಾನವನ್ನು ಉಳಿಸುವುದಕ್ಕಾಗಿ ಬಿಜೆಪಿ ವಿರುದ್ದ ಹೋರಾಟ ಮಾಡುವ ಸಂಧರ್ಭ ಬಂದಿದೆ ಎಂದರು.



 ಈ ಸಂದರ್ಭದಲ್ಲಿ ಸೇವಾದಳದ ರಾಜ್ಯ ಜಂಟಿ ಕಾರ್ಯದರ್ಶಿ ಕೆ.ಜೆ . ಕೃಷ್ಣೇಗೌಡ, ತಾಲೂಕು ಬ್ಲಾಕ್ ಅಧ್ಯಕ್ಷ ಬಸವರಾಜು, ಪ್ರಧಾನ ಕಾರ್ಯದರ್ಶಿ ಬ್ರಹ್ಮಾನಂದ್, ಮಹಿಳಾ ಘಟಕದ ಅಧ್ಯಕ್ಷೆ ರಾಧಾ ವಿಜಯರಾಘವೇಂದ್ರ, ಕವಿತಾ ಕಿರಣ್ ಕುಮಾರ್, ಎಸ್ಸಿ ಘಟಕದ ಅಧ್ಯಕ್ಷಅಗಸರಹಳ್ಳಿ ನರಸಿಂಹಮೂರ್ತಿ, ಜಿಲ್ಲಾ ಸೇವಾದಾಳ ಅಧ್ಯಕ್ಷ ಕಿರಣ್ ನಿಶಾನಿ, ಕಾರ್ಯದರ್ಶಿ ತರಬೇನಹಳ್ಳಿ ಚಿದಾನಂದ್, ಸೇವಾದಳದ ತಾಲೂಕು ಅಧ್ಯಕ್ಷ ಕಾತ್ರಿಕೆಹಾಳ್ ಗೊವಿಂದರಾಜು, ಬಸವರಾಜ್, ಆಟೋ ಶ್ರೀನಿವಾಸ್,ಬ್ಲಾಕ್ ಉಪಾಧ್ಯಕ್ಷ ಸುರೇಶನಾಯ್ಕ್, ಗೋಡೆಕೆರೆ ಜಗದೀಶ್, ಜಿಪಂ ಮಾಜಿ ಸದಸ್ಯ ಪಂಚಾಕ್ಷರಿ, ಪುರಸಭೆ ಸದಸ್ಯೆ ಉಮಾ ಇತರರಿದ್ದರು.

ವರದಿ ಚಿಕ್ಕನಾಯಕನಹಳ್ಳಿ ಚಂದ್ರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು