ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕರಾದ ಬಳ್ಳಾರಿಯ ಜನಾರ್ದನ ರೆಡ್ಡಿ ಇದೇ ಭಾನುವಾರ ಪಾವಗಡಕ್ಕೆ ಆಗಮನ : ನೇರಳೆಕುಂಟೆ ನಾಗೇಂದ್ರ.

 ಪಾವಗಡ: ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕರಾದ ಬಳ್ಳಾರಿಯ ಜನಾರ್ದನ ರೆಡ್ಡಿ ಇದೇ ಭಾನುವಾರ ಪಾವಗಡಕ್ಕೆ ಆಗಮಿಸಲಿದ್ದಾರೆ ಎಂದು ಪಕ್ಷದ ಟಿಕೆಟ್ ಆಕಾಂಕ್ಷಿ ನೇರಳೆಕುಂಟೆ ನಾಗೇಂದ್ರ ತಿಳಿಸಿದರು.


ಪಟ್ಟಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ತಾಲ್ಲೂಕಿನಲ್ಲಿ ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷವನ್ನು ತಾಲ್ಲೂಕಿನಾದ್ಯಂತ ಸಂಘಟಿಸಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಬೇಕೆಂಬ ಉದ್ದೇಶದಿಂದ ಜನಾರ್ದನ ರೆಡ್ಡಿ ಅವರು ಆಗಮಿಸುವರು ಹಾಗೂ ಪಕ್ಷದ ಕಛೇರಿಯನ್ನು ಸಹ ಅಧಿಕೃತವಾಗಿ ಉದ್ಘಾಟನೆ ಮಾಡಲಿದ್ದಾರೆ  


 ಈಗಾಗಲೇ ಕಾಯ೯ಕ್ರಮದ ರೂಪುರೇಷೆಗಳನ್ನು ರಚಿಸಿದ್ದು ಎಲ್ಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ 


ಜನಾರ್ಧನ ರೆಡ್ಡಿಯವರು ಮಂತ್ರಿಯಾಗಿದ್ದಾಗ ಅವರು ಮಾಡಿದ ಜನಸೇವೆಯೇ ಪಕ್ಷದ ಶ್ರೀರಕ್ಷೆಯಾಗಲಿದೆ,  


ಗಾಲಿ ಜನಾರ್ಧನ ರೆಡ್ಡಿಯವರು ಸಮಾಜ ಸೇವೆಯಿಂದ ರಾಜಕೀಯಕ್ಕೆ ಬಂದವರು , ಅವರಲ್ಲಿ ಉತ್ತಮ ಸಾಮಾಜಿಕ ಕಳಕಳಿ ಬದ್ದತೆ ಇದೆ , ಈ ದೃಷ್ಟಿಯಿಂದ ಪಕ್ಷ ಹೆಚ್ಚು ಸ್ಥಾನ ಪಡೆಯುವುದರಲ್ಲಿ ಅನುಮಾನವೇ ಬೇಡ ಎಂದು ತಿಳಿಸಿದರು 


ಗೋಷ್ಠಿಯಲ್ಲಿ ಕರಿಯಣ್ಣ, ಹನುಮಂತರಾಯಪ್ಪ, ಬಿ.ಎಸ್.ಪಿ. ಮಂಜು, ಕಿರಣ್ ಇತರ ಮುಖಂಡರು ಹಾಜರಿದ್ದರು


ವರದಿ : ಪಾವಗಡ ಶ್ರೀನಾಥ್.


ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು