ಮಧುಗಿರಿ - ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ತಾಲ್ಲೂಕಿನ ಜನರುಸದುಪಯೋಗಪಡಿಸಿಕೊಳ್ಳಬೇಕು ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.
ಪಟ್ಟಣದ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಕರುನಾಡ ವಿಜಯ ಸೇನೆ ತಾಲೂಕು ಘಟಕ ವತಿಯಿಂದ ಹಮ್ಮಿಕೊಂಡಿದ್ದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಜನರು ವೈದ್ಯರು ನೀಡುವ ಸಲಹೆ ಸೂಚನೆಗಳನ್ನು ಸರಿಯಾಗಿ ಪಾಲಿಸಿ ತಮ್ಮ ಆರೋಗ್ಯವನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಬೇಕು, ಹೆಚ್ಚಿನ ಚಿಕಿತ್ಸೆ ಬೇಕಾದಲ್ಲಿ ತಜ್ಞರ ಸೂಚನೆ ಮೇರೆಗೆ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದು ತಿಳಿಸಿದ ಅವರು, ಕರುನಾಡ ವಿಜಯ ಸೇನೆ ವತಿಯಿಂದ ನಡೆಯುತ್ತಿರುವ ಈ ಆರೋಗ್ಯ ಶಿಬಿರ ಶ್ಲಾಘನೀಯ ಎಂದು ತಿಳಿಸಿದರು.
ಪುರಸಭಾ ಅಧ್ಯಕ್ಷ ತಿಮ್ಮರಾಜು , ಜೆಡಿಎಸ್ ತಾಲೂಕು ಅಧ್ಯಕ್ಷ ಬಸವರಾಜ, ಮುಖಂಡರಾದ ಭಾವಿಮನೆ ಕಾಂತರಾಜು, ಗುಂಡಗಲ್ಲು ಶಿವಣ್ಣ, ವೈದ್ಯರಾದ ವಿಕಾಸ್, ಭಾನು ಪ್ರಕಾಶ್, ಸೇನೆಯ ತಾಲೂಕು ಅಧ್ಯಕ್ಷ ತಿಮ್ಮರಾಜು ಪದಾಧಿಕಾರಿಗಳಾದ ರಾಜು, ಲತಾ ನಾರಾಯಣ್, ಲತಾ ಗೋವಿಂದರಾಜು, ಮಂಜುಳ, ನಾಗಭೂಷಣ್, ಶೈಲಜಾ, ಸವಿತ, ಶಾರದ, ಅಶೋಕುಮಾರ ಅನ್ಸರ್ವಅಹಮದ್, ರಾಘು, ದಾದಾಪೀರ್, ರಮೇಶ್, ಮಹೇಶ್ ಬಾಬು, ಷರೀಫ್, ನವೀನ್ ಕುಮಾರ್, ಹನುಮಂತರಾಯಪ್ಪ, ತಿಪ್ಪೇಸ್ವಾಮಿ, ಶ್ರೀಧರ್, ಮಂಜುನಾಥ್, ರಂಗನಾಥ್ ಹಾಗೂ ಮುಂತಾದವರಿದ್ದರು.
