ಮಧುಗಿರಿ: ಮಹಾಪುರುಷರು ತೋರಿದ ದಾರಿಯಲ್ಲಿ ನಡೆದಾಗ ಮಾತ್ರ ಮನುಷ್ಯನ ಜೀವನ ಸುಖರವಾಗಿರುತ್ತದೆ ಎಂದು ಉಪವಿಭಾಗಾದಿಕಾರಿ ರಿಷಿ ಆನಂದ್ ತಿಳಿಸಿದರು.
ಪಟ್ಟಣದ ತಾಲೂಕು ಕಚೇರಿಯಲ್ಲಿ ತಾಲೂಕು ಆಡಳಿತ, ಕವಿ ಸರ್ವಜ್ಞ ವೇದಿಕೆ ಹಾಗೂ ತಾಲೂಕು ಕುಂಬಾರರ ಕ್ಷೇಮಾಭಿವೃದ್ದಿ ಸಂಘಗಳ ಸಂಯುಕ್ತಾಶ್ರಯದಲ್ಲಿ ಸೋಮುವಾರ ಏರ್ಪಡಿಸಿದ್ದ ಕವಿ ಸರ್ವಜ್ಞ ಜಯಂತಿ ಹಾಗೂ ಕುಂಬಾರ ಸಮುದಾಯದಲ್ಲಿನ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸರ್ವಜ್ಞ ವೇದಿಕೆ ಅಧ್ಯಕ್ಷ ವೆಂಕಟರವಣಪ್ಪ ಮಾತನಾಡಿ ಪಟ್ಟಣದಲ್ಲಿ ನೆನೆಗುದಿಗೆ ಬಿದ್ದಿರುವ ಕವಿ ಸರ್ವಜ್ಞ ಸರ್ಕಲ್ ನಾಮಕರಣವನ್ನು ಸರಕಾರ ತಕ್ಷಣ ಕೈಗೆತ್ತಿಕೊಳ್ಳ ಬೇಕು ಹಾಗೂ ಪ್ರತ್ಯೇಕ ಕುಂಬಾರ ಅಭಿವೃದ್ದಿ ನಿಗಮವನ್ನು ಸ್ಥಾಪಿಸಿ ತಳಸಮುದಾಯಗಳಲ್ಲಿ ಒಂದಾದ ಕುಂಬಾರ ಸಮುದಾಯಕ್ಕೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು.
ತಹಶೀಲ್ದಾರ್ ಸಿಗಬತುಲ್ಲಾ ಮಾತಾನಾಡಿ ಕುಂಬಾರ ಸಮುದಾಯವು ಸೇರಿದಂತೆ ಎಲ್ಲಾ ಸಮುದಾಯಗಳೂ ಕೂಡ ಸರಕಾರದ ಸವಲತ್ತುಗಳನ್ನು ಬಳಸಿಕೊಂಡು ಮುಖ್ಯವಾಹಿನಿಗೆ ಬರುವತ್ತಪ್ರತ್ನಿಸ ಬೇಕೆಂದು ಕಿವಿ ಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಗ್ರೇಡ್-೨ ತಹಶೀಲ್ದಾರ್ ತಿಪ್ಪೇಸ್ವಾಮಿ, ಪುರಸಭಾ ಮುಖ್ಯಾಧಿಕಾರಿ ನಜ್ಮಾ, ಕಸಾಪ ಅಧ್ಯಕ್ಷೆ ಸಹನಾ ನಾಗೇಶ್, ಶಸಾಪ ಅಧ್ಯಕ್ಷೆ ಉಮಾಮಲ್ಲೇಶ್, ನೌಕರರ ಸಂಘದ ಮಾಜಿ ಅಧ್ಯಕ್ಷ ಮಹಾಲಿಂಗೇಶ್, ತಾಲೂಕು ಕುಂಬಾರರ ಸಂಘದ ಕಾರ್ಯದರ್ಶಿ ಶಿವಾನಂದ, ಖಜಾಂಚಿ ಅಶ್ವಥ್ತಪ್ಪ, ಸರ್ವಜ್ಞವೇದಿಕೆ ಖಜಾಂಚಿ ಬಸವರಾಜು,ಸಮಾಜದ ಮುಖಂಡರಾದ ಎಂ.ಜಿ.ರಾಮು, ಸುಬ್ರಹ್ಮಣ್ಯ, ಮೋಹನ್, ಹನುಮಂತರಾಯಪ್ಪ, ಪಿಕೆ ರಂಗಸ್ವಾಮಿ, ಗೋಪಾಲ್, ಜಗದೀಶ್, ಡಾ. ದ್ರೇಹಾಚಾರ್, ಸಿದ್ದಲಿಂಗಮೂರ್ತಿ ಮತ್ತಿತರರಿದ್ದರು.
ವರದಿ : ಮಧುಗಿರಿ ಬಾಲುಪಣಿಂದ್ರ.
