ಶ್ರೀ ಲಕ್ಷ್ಮೀ ರಾಯಮ್ಮ ದೇವಿಯ ಅದ್ದೂರಿ ಜಾತ್ರಾ ಮಹೋತ್ಸವ.

 ಮಧುಗಿರಿ : ಶಕ್ತಿ ದೇವತೆ ರಾಯಮ್ಮ ದೇವಿಯ ದೇವಾಲಯಕ್ಕೆ ಅಗತ್ಯ ವಿರುವ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಕೊಡಲು ಬದ್ಧನಾಗಿದ್ದೇನೆಂದು ಮಾಜಿ ಶಾಸಕರಾದ ಕೆ.ಎನ್ ರಾಜಣ್ಣ ತಿಳಿಸಿದರು.



ತಾಲೂಕಿನ ಕಸಬ ವ್ಯಾಪ್ತಿಯ ಗಂಜಗುಂಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮುದ್ದೇನಹಳ್ಳಿಯ ಗ್ರಾಮ ದೇವತೆ ಯಾದ ಶ್ರೀ ಲಕ್ಷ್ಮೀ ರಾಯಮ್ಮ ದೇವಿಯ ಜಾತ್ರಾ ಮಹೋತ್ಸದಲ್ಲಿ ಭಾಗವಹಿಸಿ ಮಾತನಾಡಿದರು. ನಿರ್ಜನ ಪ್ರದೇಶದಲ್ಲಿ ಸೃಷ್ಟಿಯಾಗಿರುವ ಈ ದೇವಿಗೆ ವಿಶೇಷ ವಾದ ಶಕ್ತಿ ಇರುವುದರಿಂದಲೇ ಸಾವಿರಾರು ಭಕ್ತರು ಪ್ರತಿ ವರ್ಷ ದರ್ಶನಕ್ಕಾಗಿ ಇಲ್ಲಿಗೆ ಆಗಮಿಸುತ್ತಾರೆ ಇಲ್ಲಿನ ರಸ್ತೆಯು ಕೊರಕಲು ಹಾಗೂ ಗುಂಡಿಗಳಿಂದ ಕೂಡಿದೆ ದೇವಾಲಯಕ್ಕೆ ಹೋಗಿ ಬರಲು ಭಕ್ತರಿಗೆ ವಾಹನ ಸವಾರರಿಗೆ ತುಂಬಾ ಕಷ್ಟಕರವಾಗಿದೆ. ಮುಂದಿನ ವರ್ಷದ ಜಾತ್ರೆ ಆಯೋಜನೆಯ ವೇಳೆಗೂ ಮುನ್ನಾವೇ ನಿಮ್ಮೆಲ್ಲಾರ ಸಹಕಾರದಿಂದ ದೇವಾಲಯದ ಚಿತ್ರಣವನ್ನೆ ಬದಲಾಯಿಸಿ ಅಗತ್ಯ ಸೌಕರ್ಯಗಳನ್ನು ಕಲ್ಪಿಸಿ ಕೊಡುವ ಭರವಸೆ ನೀಡಿದರು.


ನನ್ನ ಅವಧಿಯಲ್ಲಿ ಯಾರೊಬ್ಬರು ಸಹ ನಮ್ಮ ಕ್ಷೇತ್ರಕ್ಕೆ ನೀವು ಏನೂ ಕೊಡುಗೆಗಳನ್ನು ನೀಡಿದ್ದೀರಾ ಎಂದು ಪ್ರಶ್ನಿಸಲು ಆಗದಂತೆ ಕೆಲಸ ಕಾರ್ಯಗಳನ್ನು ಮಾಡಿದ್ದೇನೆ ಮುಂದಿನ ಚುನಾವಣೆಯಲ್ಲಿ ಯಾವುದೇ ರೀತಿಯ ಆಸೆ ಅಮಿಷ ಗಳಿಗೆ ಅಪ ಪ್ರಚಾರಗಳಿಗೆ ಒಳಗಾಗದೆ ಕಾಂಗ್ರೆಸ್ ಪಕ್ಷದ ಪರವಾಗಿ ಮತನೀಡಬೇಕೆಂದರು.  


ಪೋಷಕರು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು , ತಾಲೂಕಿನ ಸಮಗ್ರ ಅಭಿವೃದ್ಧಿಗಾಗಿ ಮತ್ತೊಮ್ಮೆ ಬೆಂಬಲಿಸುವಂತೆ ಮನವಿ ಮಾಡಿದರು.


ಟಿಡಿಡಿಸಿ ಬ್ಯಾಂಕ್ ಉಪಾಧ್ಯಕ್ಷ ಜಿ.ಜೆ.ರಾಜಣ್ಣ ಮಾತನಾಡಿ ಈ ಭಾಗದಲ್ಲಿ ರಾಯಮ್ಮದೇವಿ ಶಕ್ತಿ ದೇವತೆಯಾಗಿದ್ದು ತಾಲೂಕಿನ ವಿವಿಧ ಗ್ರಾಮಗಳ ಜನರು ಹಲವಾರು ದಶಕಗಳಿಂದ ನಡೆದು ಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ದೇವಾಲಯಕ್ಕೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸಿಕೊಡಬೇಕು , ಗ್ರಾಮಗಳಲ್ಲಿ ವೈಷಮ್ಯಗಳನ್ನು ಮರೆತು ಗ್ರಾಮದ ಅಭಿವೃದ್ಧಿ ಗಾಗಿ ಮತ್ತೊಮ್ಮೆ ಕೆ.ಎನ್. ರಾಜಣ್ಣ ರವರನ್ನು ಬೆಂಬಲಿಸುವಂತೆ ಮನವಿ ಮಾಡಿದರು.


ಟಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ನಾಗೇಶ್ ಬಾಬು ಮಾತನಾಡಿ ಈ ಹಿಂದೆ ವಿ.ಪ ಸದಸ್ಯ ರಾಜೇಂದ್ರ ರಾಜಣ್ಣ ನವರು ದೇವಾಲಯಕ್ಕೆ ಭೇಟಿ ನೀಡಿದಾಗ ದೇವಾಲಯದ ಬಳಿ ಅನ್ನ ಸಂತರ್ಪಣೆ ಗಾಗಿ ಅಡುಗೆ ಕೋಣೆಯ ಕಟ್ಟಡವನ್ನು ತಮ್ಮ ಅನುದಾನದಲ್ಲಿ ನಿರ್ಮಾಣ ಮಾಡಿ ಕೊಡುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಇಂದೂ 5 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಿದ ಕೊಠಡಿಯನ್ನು ಲೋಕಾರ್ಪಣೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ದೇವಾಲಯವನ್ನು ಕೋಟೆ ಕಲ್ಲಪ್ಪನ ದೇವಾಲಯದ ಮಾದರಿಯಲ್ಲಿ ಸಮಗ್ರ ಅಭಿವೃದ್ಧಿ ಪಡಿಸಲಿದ್ದಾರೆಂದರು.   


ಗ್ರಾ.ಪಂ. ಅಧ್ಯಕ್ಷೆ ಸಾವಿತ್ರಮ್ಮ , ಸದಸ್ಯರಾದ ವಿರೇಶ್ , ಸಿದ್ದಗಂಗಮ್ಮ , ಮಾಲ , ಮುಖಂಡರಾದ ಎಂ.ಬಿ.ಮರಿಯಣ್ಣ , ಪಿ.ಸಿ.ಕೃಷ್ಣರೆಡ್ಡಿ , ಎಂ.ಜಿ.ಶ್ರೀನಿವಾಸಮೂರ್ತಿ , ಡಿ.ಹೆಚ್.ನಾಗರಾಜು , ಪಟೇಲ್ ರಾಯಣ್ಣ , ಯಜಮಾನ್ ನಾಗರಾಜು , ಕೊಂಡವಾಡಿ ರಾಜಕುಮಾರ್ , ಹನುಮಂತರಾಯಪ್ಪ ಎಸ್ ಹೆಚ್ ನಾಗರಾಜು , ಟಿವಿಎಸ್ ಮಂಜು , ರಂಗರಾಜು , ಯರಗುಂಟೆ ರಾಯಣ್ಣ , ಪೂಜಾರ್ ರಾಜಶೇಖರ್ , ಮುದ್ದೇನಹಳ್ಳಿ ರಾಜಪ್ಪ , ಈರಣ್ಣ , ನಾಗರಾಜು , ಪಿಡಿಓ ರಂಗನಾಥ್ , ನರಸಿಂಹಮೂರ್ತಿ , ರಾಮಕೃಷ್ಣಪ್ಪ , ನಾರಾಯಣಪ್ಪ ಸೇರಿದಂತೆ ದೇವಾಲಯದ ಸಮಿತಿಯ ಪದಾಧಿಕಾರಿಗಳು , ವಿನಾಯಕ ಕ್ರಿಕೆಟ್‌ ತಂಡದ ಕ್ರೀಡಾಪಟುಗಳು ಹಾಗೂ ಗ್ರಾಮಸ್ಥರು ಇದ್ದರು.


ವರದಿ : ಮಧುಗಿರಿ ಬಾಲು ಪಣಿಂದ್ರ.

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು