ತ್ರಿಪದಿಗಳ ಮೂಲಕ ಎಲ್ಲರ ಮನ ಮುಟ್ಟುವಂತೆ ವಿಶ್ವ ಸಂದೇಶ ಸಾರಿದ ಸರ್ವಜ್ಞ ಮಹಾ ಜ್ಞಾನಿಯಾಗಿದ್ದರು ತಹಶೀಲ್ದಾರ್ ಬಿ ಆರತಿ

 ತ್ರಿಪದಿಗಳ ಮೂಲಕ ಎಲ್ಲರ ಮನ ಮುಟ್ಟುವಂತೆ ವಿಶ್ವ ಸಂದೇಶ ಸಾರಿದ ಸರ್ವಜ್ಞ ಮಹಾ ಜ್ಞಾನಿಯಾಗಿದ್ದ ಎಂದು ತಹಶೀಲ್ದಾರ್ ಬಿ ಆರತಿ ತಿಳಿಸಿದರು.



ಪಟ್ಟಣದ ತಾಲೂಕು ಕಚೇರಿಯ ಕಂದಾಯ ಭವನದಲ್ಲಿ ತಾಲೂಕಾಡಳಿತ ವತಿಯಿಂದ ಆಯೋಜಿಸಲಾಗಿದ್ದ ಸರ್ವಜ್ಞ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕನ್ನಡದ ಶ್ರೇಷ್ಠ ಕವಿ ಸರ್ವಜ್ಞರ ವಚನಗಳು ಬಸವಣ್ಣನವರ ವಚನಗಳಷ್ಟೇ ಶ್ರೇಷ್ಠ. ಕವಿ ಸರ್ವಜ್ಞ ತಮ್ಮ ವಚನದಲ್ಲಿ ಸರಳವಾಗಿ ಸಮಾಜದ ಅಂಕು-ಡೊಂಕು ತಿದ್ದುವ ಕೆಲಸ ಮಾಡಿದ್ದಾರೆ. ಕೇವಲ ಮೂರು ಸಾಲಿನಲ್ಲಿ ಅರ್ಥಪೂರ್ಣವಾಗಿ ಎಲ್ಲ ವಿಷಯಗಳನ್ನು ತಿಳಿಸಿದ್ದಾರೆ.


ಸರ್ವಜ್ಞರ ತತ್ವದಂತೆ ಕುಂಬಾರ ಜನಾಂಗ ಎಲ್ಲರೊಳಗೆ ಒಂದಾಗಿ ಬದುಕಬೇಕು. ಕುಂಬಾರ ಸಮಾಜ ಸರ್ಕಾರದ ಸೌಲಭ್ಯಗಳಿಂದ ವಂಚಿತವಾಗಿದೆ. ಜಾಗತೀಕರಣ ದಿಂದಾಗಿ ಕುಂಬಾರರ ಕುಲಕಸುಬು ನಾಶವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.


ಈ ಕಾರ್ಯಕ್ರಮದಲ್ಲಿ ಗ್ರೇಡ್ 2ತಹಶೀಲ್ದಾರ್ ಶಶಿಕಲಾ, ಕಂದಾಯ ನೀರಿಕ್ಷಕ ರಮೇಶ್, ಆರ್ ಆರ್ ಟಿ ಶಿರಸ್ತೇದಾರ್ ಲೋಕೇಶ್, ಚುನಾವಣೆ ಶಿರಸ್ತೇದಾರ್ ವೆಂಕಟರಂಗನ್, ಖಾನ್, ಶ್ರೀನಿವಾಸ್ ಉಪಸ್ಥಿತರಿದ್ದರು.


ವರದಿ : ಸಂಜಯ್ ಕೊಪ್ಪ

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು