ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಸಹಾಯ ಧನ.

ಚಿಕ್ಕನಾಯಕನಹಳ್ಳಿ : 2022-23ನೇ ಸಾಲಿನ ಕೃಷಿ ಉತ್ಪನ್ನಗಳ ಸಂಸ್ಕರಣೆ ಯೋಜನೆಯಡಿ ಮತ್ತು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಸಹಾಯ ಧನ.



ರಿಯಾಯಿತಿ ದರದಲ್ಲಿ ರಾಗಿ ಕ್ಲೀನಿಂಗ್ ಮಿಲ್, ಪ್ಲೋರ್ ಮಿಲ್, ಪಲ್ವರೈಸರ್, ಬೇಳೆ ಮಾಡುವ ಯಂತ್ರ, ಮೋಟಾರ್ ಚಾಲಿತ ಸಣ್ಣ ಎಣ್ಣೆ ಗಾಣ ಯಂತ್ರಗಳನ್ನು ಸಹಾಯಧನದಲ್ಲಿ ವಿತರಣೆ ಮಾಡಲಾಗುತ್ತಿದೆ ಎಂದು ಸಹಾಯಕ ಕೃಷಿ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 ಸಾಮಾನ್ಯ ವರ್ಗದವರಿಗೆ ಶೇ.50 ರಷ್ಟು ಸಹಾಯಧನ ಹಾಗೂ ಪ.ಜಾತಿ –ಪ.ಪಂಗಡದವರಿಗೆ ಶೇ.90 ರಷ್ಟು ಸಹಾಯಧನವಿದ್ದು ಆಸಕ್ತ ರೈತರು ಸಮೀಪದ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಹಾಗೂ ಕೃಷಿ ಯಾಂತ್ರೀಕರಣ ಯೋಜನೆಯಡಿ ಸಾಮಾನ್ಯ ವರ್ಗದಡಿ ಟ್ರಾಕ್ಟರ್ ಚಾಲಿತ ಉಪಕರಣಗಳಾದ ಕಳೆ ಹೊಡೆಯುವ ರೋಟವೇಟರ್, ಕಲ್ಟಿವೇಟರ್, ಡಿಗ್ಗರ್, ಎಮ್.ಬಿ.ಪ್ಲೋ, ಶಡ್ಡರ್ ಹಾಗೂ ಸ್ವಯಂಚಾಲಿತ ಉಪಕರಣಗಳಾದ ಕಳೆ ಹೊಡೆಯುವ ಮಿಶಿನ್, ಪವರ್ ಟಿಲ್ಲರ್, ರೋಟರಿ ಟಿಲ್ಲರ್, ಛಾಪ್ ಕಟ್ಟರ್, ಪವರ್, ಸ್ಟ್ರೇಯರ್, ಯಂತ್ರೋಪಕರಣಗಳನ್ನು ಶೇ.50 ರಿಯಾಯಿತಿ ದರದಲ್ಲಿ ವಿತರಣೆ ಮಾಡಲಾಗುತ್ತಿದೆ. ಆಸಕ್ತಿ ರೈತರು ಸಮೀಪದ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಕೆಳಕಂಡ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬಹುದು.

 ಫೋಟೋ, ಪಹಣಿ, ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್, 20 ರೂ ನ ಛಾಪಕಾಗದ, ಟ್ರಾಕ್ಟರ್ ಚಾಲಿತ ಉಪಕರಣಗಳಿಗೆ ಆರ್.ಸಿ ಬುಕ್ ಪ್ರತಿ, ಪ.ಜಾತಿ-ಪ.ಪಂಗಡದ ರೈತರಾಗಿದ್ದಲ್ಲಿ ಜಾತಿ ಪ್ರಮಾಣ ಪತ್ರ ಲಗತ್ತಿಸುವುದು. ಮತ್ತು ಕೃಷಿ ಸಂಸ್ಕರಣಾ ಉಪಕರಣಗಳಿಗೆ ಎಲ್ಲಾ ದಾಖಲಾತಿಗಳೊಂದಿಗೆ ಒಂದು ಪೋಟೋ, ಆಯಾ ಗ್ರಾ.ಪಂ. ವತಿಯಿಂದ ಜನರಲ್ ಲೈಸೆನ್ಸ್, ತ್ರಿಫೇಸ್ ಕರೆಂಟ್ ಬಿಲ್ ಒಳಗೊಂಡಂತೆ ಅರ್ಜಿ ಸಲ್ಲಿಸಲು ಈ ಮೂಲಕ ಕೋರಲಾಗಿದೆ. ಹೆಚ್ಚಿನ ವಿವರಗಳಿಗೆ ಸಮೀಪದ ರೈತ ಸಂಪರ್ಕ ಕೇಂದ್ರ ಸಂಪರ್ಕಿಸಲು ಕೋರಿದ್ದಾರೆ.


ವರದಿ : ಚಿಕ್ಕನಾಯಕನಹಳ್ಳಿ, ಚಂದ್ರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು