ಶಿರಾ : ನಗರದ ಪ್ರವಾಸಿ ಮಂದಿರ ವೃತ್ತದಲ್ಲಿ ರಾಜ್ಯ ಸರ್ಕಾರದ ಪ್ರತಿ ಸಾಧನೆ ಹಾಗೂ ಯೋಜನೆ ಜನಸಾಮಾನ್ಯರಿಗೆ ಕೊಟ್ಟಂತ ಪ್ರಯೋಜನ ಸಾರಿ ಹೇಳುವ *''ಪ್ರಗತಿ ಪಥ ರಥಯಾತ್ರೆ''*
ಮಧುಗಿರಿ ಜಿಲ್ಲಾ ಸಂಘಟನೆಯ ಜಿಲ್ಲಾಧ್ಯಕ್ಷರಾದ ಬಿ.ಕೆ ಮಂಜುನಾಥ್ ರವರ ಅಧ್ಯಕ್ಷತೆಯಲ್ಲಿ ವಿಧಾನ ಪರಿಷತ್ ಶಾಸಕರಾದ ಚಿದಾನಂದ ಗೌಡ ಸ್ಥಳಿಯ ಶಾಸಕ ರಾಜೇಶ್ ಗೌಡ ರಥಯಾತ್ರೆಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದವಿಧಾನ ಪರಿಷತ್ ಶಾಸಕ ಚಿದಾನಂದ ಗೌಡ.
ಸರ್ಕಾರ ರಾಜ್ಯದಲ್ಲಿ ನಾಲ್ಕು ವರ್ಷ ಸಾಧನೆ. ಕೇಂದ್ರದಲ್ಲಿ 9 ವರ್ಷಗಳ ಸಾಧನೆ. ನಾವು ಮಾಡಿರೋ ಯೋಜನೆ, ಸಾಧನೆ ಜನರಿಗೆ ತಲುಪಿಸೋ ಕೆಲಸ ಪ್ರಗತಿ ರಥ ಮಾಡಲಿದೆ.
ಎಲ್ಲ ಬೂತ್, ಕ್ಷೇತ್ರದಲ್ಲಿ ಸಂಚರಿಸಲಿದೆ. ಅಮಿತ್ ಶಾ ನಮಗೆ ಪ್ರೇರಣೆ ನೀಡಿದ್ದಾರೆ.
ಈ ರಾಜ್ಯದಲ್ಲಿ ಯಡಿಯೂರಪ್ಪ, ಬೊಮ್ಮಾಯಿ ಸರ್ಕಾರ ಸಾಧನೆ ಮಾಡಿದೆ. ಬಡವರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ಮೂಲಕ ಉಚಿತ ಶಿಕ್ಷಣ ನೀಡಿ ಲಕ್ಷಾಂತರ ಮಕ್ಕಳನ್ನು ಡಾಕ್ಟರ್ ಮಾಡುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಸರ್ಕಾರ ಇದ್ದಾಗ ಎಷ್ಟು ವಿಮಾನ ನಿಲ್ದಾಣ ಇತ್ತು. ಈಗ ಜಿಲ್ಲೆಗೊಂದು ವಿಮಾನ ನಿಲ್ದಾಣ ಮಾಡಲಾಗಿದೆ ಸಾರಿಗೆ ವ್ಯವಸ್ಥೆ ಯಲ್ಲಿ ಅನೇಕ
ರಸ್ತೆ ಎಕ್ಸ್ ಪ್ರೆಸ್ ವೇ ಮಾಡಿ
ಸರ್ಕಾರದ ಸಾಧನೆಯನ್ನು
ವಿವರಿಸಿದರು.
ಈ ಸಂದರ್ಭದಲ್ಲಿ
ವಿವಿಧ ಮೋರ್ಚಾ ಅಧ್ಯಕ್ಷರು ಗಳು ಸೇರಿದಂತೆ, ನಗರಸಭೆ ಸದಸ್ಯರುಗಳು, ಗ್ರಾಮ ಪಂಚಾಯತಿ ಸದಸ್ಯರುಗಳು ಸೇರಿದಂತೆ ಅನೇಕ ಕಾರ್ಯಕರ್ತರು ಹಾಜರಿದ್ದರು.
ವರದಿ : ಶಿರಾ ಶ್ರೀಮಂತ್
