ಮಕ್ಕಳು ಮೊಬೈಲ್ ಫೋನಿನ ವ್ಯಾಮೋಹಕ್ಕೆ ಬಲಿಯಾಗದಂತೆ ಪೋಷಕರು ಮುಂಜಾಗ್ರತೆ ವಹಿಸಿ ಶಿರಾ ತಹಶೀಲ್ದಾರ್ ಮಮತ ಎಂ.

 ಶಿರಾ:-ಮಕ್ಕಳು ಓದುವ ಸಂದರ್ಭದಲ್ಲಿ ಪೋಷಕರ ಮತ್ತು ಮಕ್ಕಳ ಜೊತೆಗಿನ ಬಾಂಧವ್ಯ ಬಹಳ ಮುಖ್ಯವಾಗಿರುತ್ತದೆ. ಮಕ್ಕಳು ದೊಡ್ಡವರಾಗುತ್ತಿದ್ದಂತೆ ಅವರ ಸಂಬಂಧ ಹತ್ತಿರವಾಗಬೇಕು. 


ಮಕ್ಕಳು ಮೊಬೈಲ್ ಫೋನಿನ ವ್ಯಾಮೋಹಕ್ಕೆ ಬಲಿಯಾಗದಂತೆ ಪೋಷಕರು ಮುಂಜಾಗ್ರತೆ ವಹಿಸಬೇಕು ಎಂದು ಶಿರಾ ತಹಶೀಲ್ದಾರ್ ಮಮತ ಎಂ  ತಿಳಿಸಿದರು.


ಅವರು ಶಿರಾ ತಾಲ್ಲೂಕಿನ  ಹುಲಿಕುಂಟೆ ಹೋಬಳಿಯ  ದೊಡ್ಡಬಾಣಗೆರೆ ಸರ್ಕಾರಿ ಶಾಲೆಯಲ್ಲಿ ಸರ್ಕಾರದ  ಸುತ್ತೊಲೆಯನ್ವಯ ದತ್ತು ಸ್ವೀಕರಿಸಿದ.  ಶಾಲೆಗೆ ಭೇಟಿ ನೀಡಿ ಎಸ್ ಎಸ್ ಎಲ್ ಸಿ ಮಕ್ಕಳೊಂದಿಗೆ ಸಂವಾದ ನಡೆಸಿದರು.

ಮಕ್ಕಳಿಗೆ ಓದುವ ಹಾಗೂ ಪರೀಕ್ಷೆ ಬಗ್ಗೆ ಮಾರ್ಗದರ್ಶನ ನೀಡುವುದರ ಜೊತೆಗೆ ಎಲ್ಲಾ ಎಸ್ ಎಸ್ ಎಲ್ ಸಿ ಮಕ್ಕಳಿಗೆ ನಿಘಂಟು ನೀಡಿ ಪರೀಕ್ಷೆಗೆ ತಯಾರಿಯಾಗಿ ಉತ್ತಮ ಫಲಿತಾಂಶ ಪಡೆಯುವಂತೆ ಉತ್ತೇಜನ ನೀಡಿದರು. 


 ಮಕ್ಕಳು ಕೆಟ್ಟ ಚಟಕ್ಕೆ ಬಲಿಯಾದರೆ ಪೋಷಕರೇ ಜವಾಬ್ದಾರಿಯಾಗುತ್ತೀರಾ ಎಂದರು ಶಾಲಾ ವಿದ್ಯಾರ್ಥಿಗಳು  ಶ್ರದ್ದೆಯಿಂದ ವ್ಯಾಸಂಗ ಮಾಡಿ

 ವಿದ್ಯಾರ್ಥಿಗಳು ಮೊಬೈಲ್ ಬಳಕೆ ಮಾಡುವುದನ್ನು ನಿಲ್ಲಿಸಿ, ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಲು ತಿಳಿಸಿದರು.

ಅಲ್ಲಿನ ಮಕ್ಕಳು, ಮುಖ್ಯೋಪಾಧ್ಯಾಯರು, ಶಿಕ್ಷಕರು ಸೇರಿ ಶಾಲೆಯ ಸ್ವಚ್ಚತೆ, ಕಟ್ಟಡದ ಸುಂದರೀಕರಣ ಮಾಡಲು ಹಳೆಯ ವಿದ್ಯಾರ್ಥಿಗಳ ಸಹಾಯ ಪಡೆದಿರುವ ಬಗ್ಗೆ ತಹಶೀಲ್ದಾರ್ ಮಮತ ಎಂ ಅವರು ಪ್ರಶಂಸೆ ವ್ಯಕ್ತಪಡಿಸಿದರು.


ವರದಿ : ಶಿರಾ ಶ್ರೀಮಂತ್.

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು