ಗುಬ್ಬಿ:ಜೆಡಿಎಸ್ ಪಕ್ಷದ ಕಾರ್ಯಕರ್ತರು, ಮುಖಂಡರು ಇಂದು ಅಳಿಲುಘಟ್ಟ ಗ್ರಾಮದಲ್ಲಿ ಜೆಡಿಎಸ್ ಪ್ರಾಥಮಿಕ ಸದಸ್ಯತ್ವಕ್ಕೆ ಸಾಮೂಹಿಕ ರಾಜೀನಾಮೆ ನೀಡುವ ಮೂಲಕ ವಾಸಣ್ಣ ಅಭಿಮಾನಿಗಳ ಬಳಗಕ್ಕೆ ಸೇರ್ಪಡೆಯಾದರು.
ಬಿದರೆ ಗ್ರಾಮ ಪಂಚಾಯಿತಿ ಯಿಂದ ಆರಂಭವಾದ ಜೆಡಿಎಸ್ ಪಕ್ಷಕ್ಕೆ ಸಾಮೂಹಿಕ ರಾಜೀನಾಮೆ ಪರ್ವವು ಬಿದರೆ,ಹಾಗಲವಾಡಿ ಚೇಳೂರು,ಕಡಬ, ಕೊಪ್ಪ, ನಲ್ಲೂರು, ಮಾರಶೆಟ್ಟಿಹಳ್ಳಿ, ಕುನ್ನಾಲ, ಎಂ ಎನ್ ಕೋಟೆ, ಮಂಚಲದೊರೆ ಗ್ರಾಮಗಳಲ್ಲಿ ಪಂಚಾಯಿತಿ ಮಟ್ಟದಲ್ಲಿ ರಾಜೀನಾಮೆ ಪರ್ವ ಶುರುವಾಗಿ ಇಂದು ಹರೇಮಾರನಹಳ್ಳಿ ಗ್ರಾಮದಲ್ಲಿ ರಾಜೀನಾಮೆ ಪರ್ವವನ್ನು ವಾಸಣ್ಣ ಅಭಿಮಾನಿಗಳು ಆರಂಭಿಸಿದ್ದಾರೆ.
ಇಂದು ಬೆಲವತ್ತ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜೆಡಿಎಸ್ ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ಮೂಲಕ ವಾಸಣ್ಣ ಅವರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಾ ಇದ್ದು, ಮುಂದಿನ ಜೆಡಿಎಸ್ ಅಭ್ಯರ್ಥಿಯು ವಾಸಣ್ಣ ಅವರನ್ನು ಅಭಿವೃದ್ಧಿ ಏನು ಮಾಡಿದ್ದಾರೆ, ಶೂನ್ಯ ಎಂದು ಹೇಳುವ ಅವರ ಕೊಡುಗೆ ಏನು ಎಂಬುದನ್ನು ತಿಳಿಸಲಿ ನಾನು ಸಹ ಅವರ ಆದಿಯಲ್ಲೇ ಸತತವಾಗಿ ನಾಲ್ಕನೇ ಬಾರಿ ಸದಸ್ಯನಾಗಿ ಆಯ್ಕೆಯಾಗಿದ್ದೇನೆ ಕಾರಣ ಮಾಡಿರುವ ಅಭಿವೃದ್ಧಿ ಕಾರ್ಯಗಳು ಎಂಬುದನ್ನು ಅರಿತು ಮಾತನಾಡಬೇಕು. ಮೊದಲ ಬಾರಿಗೆ ಸ್ವಾತಂತ್ರ್ಯ ಅಭ್ಯರ್ಥಿಯಾಗಿ ಚುನಾವಣೆ ಎದುರಿಸಿ ಶಾಸಕರಾದ ಮೇಲೆ ಜೆಡಿಎಸ್ ಪಕ್ಷವು ಟಿಕೆಟ್ ನೀಡಿದ್ದು ಎಂಬುದನ್ನು ಮೊದಲು ತಿಳಿಯುವಂತೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಚೆನ್ನಿಗರಾಮಯ್ಯ ತಿಳಿಸಿದ್ದಾರೆ.
ವಾಸಣ್ಣನಿಂದ ಜೆಡಿಎಸ್ ಪಕ್ಷವೇ ಹೊರತು ಜೆಡಿಎಸ್ ನಿಂದ ವಾಸಣ್ಣ ಅಲ್ಲಾ ಎಂಬುದನ್ನು ಮೊದಲು ಅರಿಯಬೇಕು ಎಂದು ತಿಳಿಸಿ ಕುಮಾರಣ್ಣ ಅವರು ಸರ್ಕಾರ ನಡೆಸುವ ವೇಳೆ ಗುಬ್ಬಿ ಕ್ಷೇತ್ರಕ್ಕೆ ನೀಡಿದ ಕೊಡುಗೆ ಆದರೂ ಏನೂ ಎಂಬುದನ್ನು ಜನತೆಗೆ ತಿಳಿಸಬೇಕು. ಕ್ಷೇತ್ರದ ಅಭಿವೃದ್ಧಿಗೆ ಯಾವುದೇ ಅನುದಾನವನ್ನು ಕೊಡದೇ ನಮ್ಮ ಶಾಸಕರನ್ನು ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಮಾತನಾಡುವ ನೈತಿಕತೆ ಅವರಿಗಿಲ್ಲ ಎಂದು ವಕೀಲ ರಮೇಶ್ ತಿಳಿಸಿದರು.
ಕಳೆದ ಇಪ್ಪತ್ತು ವರ್ಷಗಳಿಂದ ಗುಬ್ಬಿ ಕ್ಷೇತ್ರಕ್ಕೆ ನೀಡಿದ ಕೊಡುಗೆ ಆದರೂ ಏನೂ ಎಂಬುದನ್ನು ಆಯ್ಕೆ ಮಾಡಿದ ಮತದಾರರಿಗೆ ತಿಳಿದಿದೆ ಅಲ್ಲದೆ ಸಾಮಾನ್ಯ ಜನತೆಯ ಜೊತೆ ಅವರಿಗೆ ಇರುವ ಒಡನಾಟ ಇಂದಿಗೂ ಅವರು ಶಾಸಕರಾಗಿ ಆಯ್ಕೆಯಾಗುತ್ತಾ ಬಂದಿದ್ದಾರೆ. ಸಾಹುಕಾರರಿಗೆ ಶಾಸಕರು ಬೇಕೋ ಬೇಡವೋ ಗೊತ್ತಿಲ್ಲ ಆದರೆ ಬಡ ಜನತೆಗೆ ಶಾಸಕರು ಅಗತ್ಯವಾಗಿಬೇಕಾಗಿದೆ ಎಂಬುದನ್ನು ಅರಿತು ಮುಂದಿನ ದಿನಗಳಲ್ಲಿ ವಾಸಣ್ಣ ಅವರು ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೋ ಅದಕ್ಕೆ ನಾವು ಬದ್ಧರಾಗಿ ಅವರ ಕೈ ಬಲಪಡಿಸುವ ಕೆಲಸವನ್ನು ಮಾಡೋಣ ಎಂದು ಬೆಲವತ್ತ ಗ್ರಾಮಸ್ಥ ಶಿವಕುಮಾರ್ ಮನವಿ ಮಾಡಿದರು.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ವಾಸಣ್ಣ ಅವರನ್ನು ಮಂತ್ರಿಯನ್ನಾಗಿಸಿ ಎಷ್ಟು ಅನುದಾನವನ್ನು ಗುಬ್ಬಿ ಕ್ಷೇತ್ರಕ್ಕೆ ಕೊಟ್ಟರು, ಅವರ ಕೊಡುಗೆ ಏನು, ಅನುದಾನವನ್ನು ಅಂದು ಬಿಡುಗಡೆ ಮಾಡಿದ್ದರೆ ವಾಸಣ್ಣ ಅವರಿಗೂ ಹೆಸರು ಬರುತ್ತಿದ್ದು, ಕುಮಾರ ಸ್ವಾಮಿ ಗೂ ಹೆಸರು ಬರುತ್ತಿದ್ದು, ದೇವೇಗೌಡರ ಕುಟುಂಬಕ್ಕೂ ಜೆಡಿಎಸ್ ಪಕ್ಷಕ್ಕೂ ಹೆಸರು ಬರುತ್ತಿದ್ದು, ಆದರೆ ಎಲ್ಲಿ ವಾಸು ರಾಜಕೀಯದಲ್ಲಿ ಬೆಳೆದು ಬಿಡುತ್ತಾರೋ ಎಂಬ ಮನೋಭಾವನೆಯಿಂದ ಒಂದು ಸಾವಿರದ ಇನ್ನೂರು ಕೋಟಿ ಅನುದಾನದ ಪಟ್ಟಿಯನ್ನು ಕೊಟ್ಟ ಸಂದರ್ಭದಲ್ಲಿ ಬೇರೆ ಬೇರೆ ಕ್ಷೇತ್ರಗಳಿಗೆ ಅನುದಾನವನ್ನು ಕೊಟ್ಟ ಇವರು ವಾಸಣ್ಣ ಅವರು ಏನು ಪಾಪ ಮಾಡಿದ್ದರೂ ಏನು ಸಮಸ್ಯೆಯಾಗಿದ್ದು, ಮತ್ತೊಬ್ಬ ಅಭ್ಯರ್ಥಿಯನ್ನು ಹಾಕುವ ಮುನ್ನ ಕಾರ್ಯಕರ್ತರ ಜೊತೆ ಕೂತು ಚರ್ಚಿಸಿ ಬಳಿಕ ಬೇರೆ ಅಭ್ಯರ್ಥಿಯನ್ನು ಹಾಕಬೇಕೋ ಬೇಡವೆಂಬುದು ತೀರ್ಮಾನ ತೆಗೆದುಕೊಳ್ಳಬಹುದಿದ್ದು, ಆದರೆ ಕಾರ್ಯಕರ್ತರನ್ನಾಗಲಿ, ಮುಖಾಂಡರನ್ನಾಗಲಿ ಕೇಳದೆ ಏಕಾ ಏಕಿ ಅಭ್ಯರ್ಥಿ ತಂದು ಹಾಕಿದ್ದು ಮುಂದಿನ ದಿನಗಳಲ್ಲಿ ಯಾರ ವರ್ಚಸ್ಸು ಎಷ್ಟಿದೆ ಚುನಾವಣಾ ಬಳಿಕ ತಿಳಿಯಲಿದೆ ಎಂದು ವಾಕ್ ಸಮರ ಸಾರಿದ ವಾಸಣ್ಣ ಅಭಿಮಾನಿ ಬಳಗದ ಅಧ್ಯಕ್ಷ ವೆಂಕಟೇಶ್.
ಒಟ್ಟಿನಲ್ಲಿ ರಾಜೀನಾಮೆ ಪರ್ವದಲ್ಲಿ ಕಾರ್ಯಕರ್ತರೇ ಜೆಡಿಎಸ್ ಪಕ್ಷಕ್ಕೆ ರಾಜೀನಾಮೆ ನೀಡಿ ವಾಸಣ್ಣ ಅವರ ಕೈ ಬಲಪಡಿಸಲು ಅಭಿಮಾನಿ ಬಳಗಕ್ಕೆ ಸೇರ್ಪಡೆಯಾಗುತ್ತಾ ಇರುವುದು ಮುಂದಿನ ದಿನಗಳಲ್ಲಿ ರಾಜಕೀಯ ರಂಗಾಗುವುದರಲ್ಲಿ ಎರಡು ಮಾತಿಲ್ಲ.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೇ ಜಯಮ್ಮ, ಉಪಾಧ್ಯಕ್ಷೆ ಜಯಮ್ಮ ಸದಸ್ಯರಾದ ಮಂಜುಳಾ, ಆನಂದ್, ರಾಜಣ್ಣ, ದಯಾನಂದ್, ಮುಖಂಡರಾದ ಕೋಡಿಹಳ್ಳಿ ಆಂಜಿನಪ್ಪ, ರಮೇಶ್, ವರುಣ್, ಅರ್ಚಕ ಲೋಕೇಶ್, ಲಕ್ಷ್ಮಯ್ಯ, ರಂಗಯ್ಯ ಸೇರಿದಂತೆ ಮುಖಂಡರು ಉಪಸ್ಥಿತರಿದ್ದರು.
ವರದಿ : ಸಂಜಯ್ ಕೊಪ್ಪ
