ಮಧುಗಿರಿ - ಶಿರಾ ವಿಧಾನಸಭಾ ಕ್ಷೇತ್ರಕ್ಕೆ ಕಾಡುಗೊಲ್ಲ ಸಮುದಾಯಕ್ಕೆ ಸೇರಿದ ಸಾಸಲು ಸತೀಶ್ ಅವರಿಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನೀಡುವಂತೆ ಸಮುದಾಯದ ಮುಖಂಡ ಈರಣ್ಣ ಒತ್ತಾಯಿಸಿದ್ದಾರೆ .
ಪಟ್ಟಣದ ನಿರೀಕ್ಷಣಾ ಮಂದಿರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಶಿರಾ ತಾಲೂಕಿನಲ್ಲಿ ಹೆಚ್ಚು ನಮ್ಮ ಸಮುದಾಯದ ಮತದಾರರಿದ್ದಾರೆ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿರುವ
ಸಾಸಲು ಸತೀಶ್ ರವರಿಗೆ ಪಕ್ಷದ ವರಿಷ್ಠರು ಟಿಕೆಟ್ ನೀಡುವಂತೆ ಒತ್ತಾಯಿಸಿದರು.
ತುಮಕೂರು ಜಿಲ್ಲೆಯಲ್ಲಿ ನಡೆಯುವ ಪ್ರತಿ ಚುನಾವಣೆಗಳಲ್ಲೂ ನಮ್ಮ ಜನಾಂಗವು ನಿರ್ಣಾಯಕ ಪಾತ್ರ ವಹಿಸುತ್ತಿದೆ. ಅತ್ಯಂತ
ಹಿಂದುಳಿದಿರುವ ನಮ್ಮನ್ನು ಯಾವುದೇ ಪಕ್ಷಗಳು ಸಹ ಆರ್ಥಿಕವಾಗಿ , ಸಾಮಾಜಿಕವಾಗಿ,
ಶೈಕ್ಷಣಿಕವಾಗಿ ಅಭಿವೃದ್ಧಿಗೊಳಿಸುತ್ತಿಲ್ಲ ಹಾಗೂ ಗುರುತಿಸುತ್ತಿಲ್ಲ ಎಂದು ಅವರ ವಿಷಾದ ವ್ಯಕ್ತಪಡಿಸಿದರು.
ಸಾಸಲು ಸತೀಶ್ ರವರಿಗೆ ಈ ಬಾರಿ ಟಿಕೆಟ್ ನೀಡದಿದ್ದರೆ , ಮುಂದಿನ ದಿನಗಳಲ್ಲಿ ನಡೆಯುವ ಚುನಾವಣೆಯ ಬಗ್ಗೆ ನಮ್ಮ ಜನಾಂಗದವರೆಲ್ಲಾ ಒಗ್ಗೂಡಿ , ಯಾವ ಪಕ್ಷಕ್ಕೆ ಮತ ಹಾಕಬೇಕೆಂದು ತೀರ್ಮಾನ ಕೈಗೊಳ್ಳುತ್ತೆವೆ. ಪಕ್ಷದ ವರಿಷ್ಠರುಗಳಾದ
ಸಿದ್ದರಾಮಯ್ಯ , ಡಿ.ಕೆ ಶಿವಕುಮಾರ್ ರವರುಗಳು ಈ ಸಮಸ್ಯೆಯನ್ನು ಪರಿಹರಿಸಬೇಕೆಂದು ಮನವಿ ಮಾಡಿದರು.
ಗ್ರಾಮ ಪಂಚಾಯಿತಿ ಸದಸ್ಯರಾದ ಗಂಗಾಧರ್, ರಾಜಶೇಖರ್ , ಶಿವಕುಮಾರ್ , ಮುಖಂಡರುಗಳಾದ ಮರಿ ತಿಮ್ಮನಹಳ್ಳಿ ಶಿವಣ್ಣ, ದೇವರಾಜು , ನೇರಳೆಕೆರೆ ರವಿ , ನರಸಪ್ಪ ಹಾಗು ಸಮುದಾಯದ ಮುಖಂಡರು ಹಾಜರಿದ್ದರು.
ವರದಿ : ಮಧುಗಿರಿ ಬಾಲು ಪಣಿಂದ್ರ.
