ಕುಡಿತದ ಚಟಕ್ಕೆ ಬಲಿಯಾಗಿದ್ದ ಹಿನ್ನಲೆಯಲ್ಲಿ ಪತ್ನಿ ಬೇಸತ್ತು ವಿವಾಹ ವಿಚ್ಛೇದನ ಕೋರಿ ನ್ಯಾಯಾಲಯಕ್ಕೆ ಹೋಗಿದ್ದ ದಂಪತಿಗಳು ಮನಪರಿವರ್ತನೆ .

 ಚಿಕ್ಕನಾಯಕನಹಳ್ಳಿ : ಗಂಡ ವಿಶ್ವನಾಥ ಕುಡಿತದ ಚಟಕ್ಕೆ ಬಲಿಯಾಗಿದ್ದ ಹಿನ್ನಲೆಯಲ್ಲಿ ಪತ್ನಿ ಬೇಸತ್ತು ವಿವಾಹ ವಿಚ್ಛೇದನ ಕೋರಿ ನ್ಯಾಯಾಲಯಕ್ಕೆ ಹೋಗಿದ್ದ ದಂಪತಿಗಳು ಮನಪರಿವರ್ತನೆ ಹೊಂದಿ ಮತ್ತೆ ಒಂದಾದ ಘಟನೆ ನ್ಯಾಯಾಲಯದಲ್ಲಿ ನಡೆದಿದೆ.



ಚಿಕ್ಕನಾಯಕನಹಳ್ಳಿ ತಾಲ್ಲೂಕು ತಮ್ಮಡಿಹಳ್ಳಿ ಗೊಲ್ಲರಹಟ್ಟಿ ವಿಶ್ವಾನಾಥ್ ಹಾಗು ಅರಸೀಕೇರೆ ತಾಲ್ಲೂಕು ಅಮ್ಮನಘಟ್ಟ ಆಶಾ ಎಂಬ ದಂಪತಿಗಳು8ವರ್ಷದ ವಿವಾಹ ಜೀವನ ಸಾಗಿಸಿದ್ದರು. ಆದರೆ  

ತಮ್ಮಡಿಹಳ್ಳಿ ಗೊಲ್ಲರಹಟ್ಟಿ ವಿಶ್ವನಾಥನ ಕುಡಿತದ ಚಟಕ್ಕೆ ಬಲಿಯಾಗಿದ್ದ ಹಿನ್ನಲೆಯಲ್ಲಿ ಅರಸೀಕೆರೆ ತಾಲ್ಲೂಕು ಅಮ್ಮನಹಟ್ಟಿ ಆಶಾ ಬೇಸತ್ತು ವಿವಾಹ ವಿಚ್ಛೇದನ ಕೋರಿ ನ್ಯಾಯಾಲಯಕ್ಕೆ ಅರ್ಜಿಸಲ್ಲಿಸಿದ್ದರು.


ಒಂದು ವರ್ಷದಿಂದ ವಿಚ್ಛೆಧನಾ ಪ್ರಕರಣ ನ್ಯಾಯಾಲಯದಲ್ಲಿ ನೆಡೆಯುತ್ತಿತ್ತು ಪತಿ ಪತ್ನಿಯನ್ನು ಒಂದು ಮಾಡಲು ವಕೀಲˌಗೊಪಾಲಕೃಷ್ಣ ಮತ್ತು ಕೆ.ಎಂ.ರಾಜಶೇಖರ್ ಮದ್ಯಸ್ತಿಕೆಯಲ್ಲಿ ಹಾಗೂ ಹಿರಿಯ ಶ್ರೇಣೀ ನ್ಯಾಯಾಧೀಶರಾದ ವಿ.ವೆಂಕಟೇಶಪ್ಪರವರ ತಿಳುವಳಿಕೆ ಮಾತುಗಳಿಂದ ದಂಪತಿಗಳ ಮನಸ್ಸು ಪರಿವರ್ತನೆಗೊಂಡು ಒಂದಾಗಿದ್ದಾರೆ.


ವಿವಾಹ ವಿಚ್ಛೇದನೆಗಾಗೀ ನ್ಯಾಯಲಯದ ಮೇಟ್ಟಿಲೇರಿದವರ ಪೈಕಿ ನ್ಯಾಯಾಧೀಶ ವಿ.ವೆಂಕಟೇಶಪ್ಪರವರ ಬುದ್ದಿಮಾತುಗಳಿಂದ ನಾಲ್ಕು ಪ್ರಕರಣಗಳು ಸುಖಾಂತ್ಯಗೊಂಡಿವೆ..


ವರದಿ : ಚಿಕ್ಕನಾಯಕನಹಳ್ಳಿ ಚಂದ್ರು

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು