ಗಿಡುಗನಹಳ್ಳಿ ಗ್ರಾಮದಲ್ಲಿ ಪ್ರಸಿದ್ಧ ರಂಗನಾಥ ಸ್ವಾಮಿಯ ಜಾತ್ರಾ ಮಹೋತ್ಸವ ಮಾ.30ರಿಂದ ಏ.3ರವರೆಗೆ ನಡೆಯಲಿದೆ.

ಶಿರಾ: ತಾಲೂಕಿನ ಗಿಡುಗನಹಳ್ಳಿ ಗ್ರಾಮದಲ್ಲಿ ಪ್ರಸಿದ್ಧ ರಂಗನಾಥ ಸ್ವಾಮಿಯ ಜಾತ್ರಾ ಮಹೋತ್ಸವ ಮಾ.30ರಿಂದ ಏ.3ರವರೆಗೆ ನಡೆಯಲಿದೆ. 


ಮಾ.30ರಂದು ಗುರುವಾರ ಬೆಳಗ್ಗೆ 7ಗಂಟೆಗೆ ಸ್ವಾಮಿಯ ಗಂಗಾ ಸ್ನಾನ, ರಾತ್ರಿ 9 ಗಂಟೆಗೆ ಮಡಿತೇರು ನೆರವೇರಲಿದೆ

. 31ರಂದು ರಾತ್ರಿ 9ಗಂಟೆಗೆ ಗರುಡೋತ್ಸವ(ದವನೋತ್ಸವ), ಏ.1ರಂದು ರಾತ್ರಿ 9ಗಂಟೆಗೆ ಕಲ್ಲುಗಾಲಿ ರಥೋತ್ಸವ, 2ರಂದು ರಾತ್ರಿ 9ಗಂಟೆಗೆ ಗಜಪತಿ ಮೇಲೆ ಸ್ವಾಮಿ ಉತ್ಸವ, 3ರಂದು ಸೋಮವಾರ ಹನುಮಂತನ ಮೇಲೆ ಸ್ವಾಮಿಯ ಉತ್ಸವ(ಹೂವಿನ ರಥೋತ್ಸವ) ರಾತ್ರಿ 10 ಗಂಟೆಗೆ ಅದ್ಧೂರಿಯಾಗಿ ನೆರವೇರಲಿದೆ. ಅಂದು ಬರುವ ಭಕ್ತರಿಗಾಗಿ ಬೆಳಗ್ಗೆ ಉಪಾಹಾರ ವ್ಯವಸ್ಥೆ, ರಾತ್ರಿ ಹರಿಸೇವೆ(ಅನ್ನಸಂತರ್ಪಣೆ), ಮಧ್ಯಾಹ್ನ 2ಕ್ಕೆ ಉಂಡೆ ಮಂಡೆ ಸೇವೆ ಇರುತ್ತದೆ. ನೆರೆಯ ಆಂಧ್ರ ಸೇರಿ ರಾಜ್ಯದ ವಿವಿಧೆಡೆ ನೆಲೆಸಿರುವ ಯರ್ರೆನವರ ಕುಲಸ್ಥರು, ಅಣ್ಣತಮ್ಮಂದಿರು, ಇತರೆ ವರ್ಗಗಳ ಭಕ್ತರು, ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಸ್ವಾಮಿ ಕೃಪೆಗೆ ಪಾತ್ರರಾಗಬೇಕೆಂದು ದೇವಾಲಯದ ವತಿಯಿಂದ ಕೋರಲಾಗಿದೆ.

ವರದಿ ಶಿರಾ ಶ್ರೀಮಂತ್.

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು