ರಾಜ್ಯದ ರೈತರ 26 ಸಾವಿರ ಕೋಟಿ ಸಾಲ ಮನ್ನಾ ಮಾಡಿ ಕುಮಾರಸ್ವಾಮಿಯವರು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ ನಿಖಿಲ್ ಕುಮಾರಸ್ವಾಮಿ.

ಮಧುಗಿರಿ : ಈ ಹಿಂದೆ ಮೈತ್ರಿ ಸರ್ಕಾರದ 14 ತಿಂಗಳ ಅವಧಿಯಲ್ಲಿ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರಾಜ್ಯದ ರೈತರ 26 ಸಾವಿರ ಕೋಟಿ ಸಾಲ ಮನ್ನಾ ಮಾಡುವ ಮೂಲಕ ರೈತರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ ಎಂದು ರಾಜ್ಯ ಯುವ ಜೆಡಿಎಸ್ ಯುವ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ಪಟ್ಟಣದ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಭಾನುವಾರ ಸಂಜೆ ಕರುನಾಡ ವಿಜಯ ಸೇನೆ ವತಿಯಿಂದ ಹಮ್ಮಿಕೊಂಡಿದ್ದ ಮಧುಗಿರಿ ಸಾಂಸ್ಕøತಿಕ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದಲ್ಲಿ ಹೆಚ್.ಡಿ ಕುಮಾರಸ್ವಾಮಿಯವರು ರಾಜ್ಯದ ಮುಖ್ಯಮಂತ್ರಿಯಾಗಲಿದ್ದು, ಅವರು ಅಧಿಕಾರ ವಹಿಸಿಕೊಂಡ 24 ಗಂಟೆಗಳಿಗೆ ಸ್ತ್ರೀ ಶಕ್ತಿ ಸಂಘಗಳ ಸಂಪೂರ್ಣ ಸಾಲ ಮನ್ನಾ ಮಾಡಲಾಗುವುದು ಎಂದ ಅವರು, ಈಗ ಸ್ತ್ರೀ ಶಕ್ತಿ ಸಂಘಗಳ ಮನವಿಯಂತೆ ಅವರ ಸಾಲವನ್ನೂ ಮನ್ನಾ ಮಾಡಲಾಗುವುದು ಎಂದರು. ರಾಜ್ಯದ ಬಡಜನರ ರೈತರ ಮತ್ತು ಧೀನ ದಲಿತರ ಒಳಿತಿಗಾಗಿ ಕುಮಾರಸ್ವಾಮಿಯವರು ಪಂಚರತ್ನ ಯಾತ್ರೆ ಕೈಗೊಂಡಿದ್ದು, ಪಂಚರತ್ಯ ಯಾತ್ರೆಗಾಗಿ 20 ಗಂಟೆಗಳನ್ನು ಮೀಸಲಿರಿಸಿ ರಾಜ್ಯಾದ್ಯಂತ ಸಂಚರಿಸುತ್ತಿದ್ದಾರೆ. ಖಾಸಗಿ ಶಾಲೆಗಳಲ್ಲಿ ಸಿಗುವ ಸವಲತ್ತುಗಳು ರೈತರು, ಬಡವರ ಮಕ್ಕಳಿಗೆ ಸರ್ಕಾರಿ ಶಾಲೆಗಳಲ್ಲೂ ಸಿಗುವಂತಾಗಬೇಕು.

 ಆರೋಗ್ಯದ ಸಮಸ್ಯೆಯಾದರೆ ಬಡವರ ಗತಿ ಏನಾಗಬೇಕು, ಆಸ್ಪತ್ರೆಗಳಿಗೆ ಲಕ್ಷಾಂತರ ಹಣ ವ್ಯಯವಾಗುತ್ತದೆ. ಎಷ್ಟು ಖರ್ಚಾದರೂ ಸರ್ಕಾರ ಬರಿಸುವಂತಾದರೆ ಹೇಗಿರುತ್ತದೆ ನೀವೇ ಯೋಚಿಸಿ ಇಂತಹ ಅನೇಕ ಯೋಜನೆಗಳು ಪಚರತ್ನ ಯಾತ್ರೆಯಲ್ಲಿದ್ದು, ಈ ಬಾರಿ ಕುಮಾರಸ್ವಾಮಿಯವರನ್ನು ಬೆಂಬಲಿಸಿ ಎಂದು ಮನವಿ ಮಾಡಿದರು. 90 ವರ್ಷದ ಹಿರಿ ವಯಸ್ಸಿನಲ್ಲೂ ದೇವೇಗೌಡರು ಕನ್ನಡ ನೆಲ, ಜಲ ಭಾಷೆ ಉಳಿವಿಗೆ ರೈತರ, ದಲಿತರ, ಬಡವರ ಏಳಿಗೆಗೆ ಶ್ರಮಿಸುತ್ತಿದ್ದಾರೆ. ಆದರೆ 2019 ರ ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರ ಸೋಲು ನಮಗೆ ಬಹಳಷ್ಟು ನೋವು ತಂದಿದೆ. ಪ್ರಧಾನಿ ನರೇಂದ್ರ ಮೋದಿಯವರೂ ಸಹ ದೇವೇಗೌಡರಿಗೆ ಗೌರವ ಕೊಡುತ್ತಾರೆ. ಆದರೆ ಈ ಭಾಗದ ಹಿರಿಯ ಕಾಂಗ್ರೆಸ್ ಅಭ್ಯರ್ಥಿಯೊಬ್ಬರು ದೇವೇಗೌಡರ ಬಗ್ಗೆ ಕೀಳಾಗಿ ಮಾತನಾಡಿ ಅವರ ಸಾವು ಬಯಸುವುದು ಅತ್ಯಂತ ದುಖಃದ ವಿಚಾರ ಎಂದು ಅಸಮಾಧಾನ ವ್ಯಕ್ತಪಡಿಸಿದರು. ನಮ್ಮದೂ ಮಧುಗಿರಿಯದ್ದೂ ಅವಿನಾಭಾವ ಸಂಬಂದ. ಈ ಹಿಂದೆ ಮಧುಗಿರಿ ಯಲ್ಲಿ ಬಿಜೆಪಿ ಆಪರೇಷನ್ ಕಮಲ ನಡೆಸಿದ ಸಂದರ್ಭದಲ್ಲೇ ಕ್ಷೇತ್ರವನ್ನು ವೀರಭದ್ರಯ್ಯ ಬಿಟ್ಟು ಕೊಡಬೇಕು ಎಂದು ದೇವೇಗೌಡರು ನಿರ್ದಾರಿದ್ದರು ಆದರೆ ಅವರಿಗೆ ವಿ.ಆರ್.ಎಸ್ ದೊರೆಯದ ಹಿನ್ನೆಲೆಯಲ್ಲಿ ನಮ್ಮ ತಾಯಿಯವರಾದ ಅನಿತಾ ಕುಮಾರಸ್ವಾಮಿಯವರು ಸ್ಪರ್ದೆ ಮಾಡಿ ಜಯಗಳಿಸಿದ್ದು, ಕ್ಷೇತ್ರವು ನಮಗೆ ಹಲವಾರು ವರ್ಷಗಳ ನಂಟು ಹೊಂದಿದ್ದು, ಇದನ್ನು ಯಾರೂ ಕಿತ್ತುಕೊಳ್ಳು ಆಗುವುದಿಲ್ಲ ಎಂದ ಅವರು ನೀರಾವರಿ ವಿಚಾರದಲ್ಲಿ ಶಾಸಕ ವೀರಭದ್ರಯ್ಯನವರು ಮುತುವರ್ಜಿಯಿಂದ ಚೆಕ್ ಡ್ಯಾಂ ನಿರ್ಮಾಣ ಮಾಡುವುದರ ಜೊತೆಗೆ ಸಾವಿರ ಕೋಟಿಗೂ ಹೆಚ್ಚು ಅನುದಾನ ದಿಂದ ಕ್ಷೇತ್ರದ ಅಭಿವೃದ್ಧಿ ಮಾಡಿ ಇತಿಹಾಸ ಸೃಷ್ಠಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಶಾಸಕ ಎಂ.ವಿ. ವೀರಭದ್ರಯ್ಯ ಮಾತನಾಡಿ, ಕುಮಾರಸ್ವಾಮಿಯವರು ಕೇವಲ 14 ತಿಂಗಳು ಅಧಿಕಾರದಲ್ಲಿದ್ದರು. ಈ ಸಂದರ್ಭದಲ್ಲಿ ಕ್ಷೇತ್ರವು ಬೀಕರ ಬರಗಾಲ ಅನುಭವಿಸಿತ್ತು. 2 ವರ್ಷ ಕರೋನಾ ದಿಂದ ಆರ್ಥಿಕ ವ್ಯವಸ್ಥೆ ಬುಡಮೇಲಾಯಿತು. ಈಗ ಬಿಜೆಪಿ ಸರ್ಕಾರವಿದ್ದು ಅನುಧಾನ ಹಂಚಿಕೆಯಲ್ಲಿ ತಾರತಮ್ಯ ಮಾಡುತ್ತಿದ್ದಾರೆ ಎಂದ ಅವರು, ಕಳೆದ ನಾಲ್ಕೂವರೆ ವರ್ಷದಲ್ಲಿ ನನಗೆ ಒಳ್ಳೆಯ ವಾತಾವರಣ ಸಿಗಲಿಲ್ಲ. ಆದರೂ ಜನತೆಯ ಪರ ಕೆಲಸ ಮಾಡಿದ ಸಮಾಧಾನವಿದೆ. ಮಧುಗಿರಿ ಕಂದಾಯ ಜಿಲ್ಲೆಯಾಗಲು, ಏಕಶಿಲಾ ಬೆಟ್ಟಕ್ಕೆ ರೋಪ್ ವೇ ಅಳವಡಿಸಿ ಪ್ರವಾಸೋದ್ಯಮ ಕೇಂದ್ರವಾಗಲು ಸುಸಜ್ಜಿತ ಕ್ರೀಡಾಂಗಣ, ಕೈಗಾರಿಕಾ ಪ್ರದೇಶದ ಆರಂಭಕ್ಕಾಗಿ ಮತ್ತೊಮ್ಮ ನನ್ನನ್ನು ಆಶೀರ್ವದಿಸಿ ಎಂದು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ತುಮಲ್ ನಿರ್ದೇಶಕ ಕೊಂಡವಾಡಿ ಚಂದ್ರಶೇಖರ್, ಪುರಸಭಾಧ್ಯಕ್ಷ ತಿಮ್ಮರಾಯಪ್ಪ, ಸದಸ್ಯರಾದ ಎಂ.ಆರ್.ಜಗನ್ನಾಥ್, ಕೆ.ನಾರಾಯಣ್, ಎಂ.ಎಲ್.ಗಂಗರಾಜು, ಚಂದ್ರಶೇಖರ್ ಬಾಬು, ತಾಲೂಕು ಜೆಡಿಎಸ್ ಅಧ್ಯಕ್ಷ ಬಸವರಾಜು, ಕರುನಾಡ ವಿಜಯ ಸೇನೆ ತಾಲೂಕು ಅಧ್ಯಕ್ಷರಾದ ತಿಮ್ಮರಾಜು, ಮಹಿಳಾ ಘಟಕದ ಅಧ್ಯಕ್ಷೆ ಲತಾ ಗೋವಿಂದರಾಜು, ಗೌರವಾಧ್ಯಕ್ಷೆ ಲತಾ ನಾರಾಯಣ್, ನಗರ ಅಧ್ಯಕ್ಷರಾದ ರಾಜು, ಕಾರ್ಯಾಧ್ಯಕ್ಷ ವೆಂಕಟೇಶ್, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ದಾದು, ಗೌರವಾಧ್ಯಕ್ಷ ಸಿದ್ದಿಕ್, ಶರೀಫ್. ಮುಖಂಡರುಗಳಾದ ವೆಂಕಟಾಪುರ ಗೋವಿಂದರಾಜು, ತುಂಗೋಟಿ ರಾಮಣ್ಣ, ಬಿ.ಎಸ್ ಶ್ರೀನಿವಾಸ್, ಚೌಡಪ್ಪ ಮತ್ತಿತರರು ಹಾಜರಿದ್ದರು.



 ವರದಿ : ಮಧುಗಿರಿ ಬಾಲುಪಣಿಂದ್ರ

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು