ತಿಮ್ಮನಹಳ್ಳಿ ವಿಮಾ ಗ್ರಾಮ ಘೋಷಣೆ

 ಚಿಕ್ಕನಾಯಕನಹಳ್ಳಿ :ತಿಮ್ಮನಹಳ್ಳಿ ವಿಮಾ ಗ್ರಾಮ ಘೋಷಣೆ. ತಿಮ್ಮನಹಳ್ಳಿ ಗ್ರಾಮವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೈಕ್ರೋ ಇನ್ಶೂರೆನ್ಸ್ ವಿಭಾಗದಲ್ಲಿ ಭಾರತೀಯ ಜೀವ ವಿಮಾ ವಿಭಾಗದ ವತಿಯಿಂದ ವಿಮಾ ಗ್ರಾಮವನ್ನಾಗಿ ಘೋಷಣೆ ಮಾಡಲಾಗಿದೆ ಎಂದು ಜಿಲ್ಲಾ ನಿರ್ದೇಶಕ ಡಿ. ದಿನೇಶ್ ತಿಳಿಸಿದರು.



ತಾಲೂಕಿನ ಕಂದಿಕೆರೆ ಹೋಬಳಿಯ ತಿಮ್ಮನಹಳ್ಳಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ವತಿಯಿಂದ ಹಮ್ಮಿಕೊಂಡಿದ್ದ ವಿಮಾ ಗ್ರಾಮ ಘೋಷಣೆ ಕಾರ್ಯಕ್ರಮದಲ್ಲಿ ಭಾರತೀಯ ಜೀವ ವಿಮಾ ನಿಗಮದವರು ಸೆಲ್ಕೋ ಸಂಸ್ಥೆ ನೀಡಿದ ಎರಡು ಸೋಲಾರ್ ಬೀದಿ ದೀಪಗಳನ್ನು ತಿಮ್ಮನಹಳ್ಳಿ ಗ್ರಾಮದಲ್ಲಿ ಅಳವಡಿಸಿ ಉದ್ಘಾಟನೆಯನ್ನ ಜಿಲ್ಲಾ ನಿರ್ದೇಶಕರಾದ ದಿನೇಶ್ ಡಿ.ರವರು ಹಾಗೂ ಭಾರತೀಯ ಜೀವವಿಮಾ ಬೆಂಗಳೂರು ಪ್ರಾದೇಶಿಕ ಕಚೇರಿಯ ಮೈಕ್ರೋ ಇನ್ಸೂರೆನ್ಸ್ ವಿಭಾಗದ ಅಧಿಕಾರಿಗಳಾದ ರಾಜಶ್ರೀ ಅವರು ಜ್ಯೋತಿ ಬೆಳಗಿಸುವುದರ ಮೂಲಕ ಶುಭ ಕೋರಿದರು.




ರಾಜಶ್ರೀಯವರು ಮಾತನಾಡಿ "ಭಾರತೀಯ ಜೀವಾ ವಿಮಾ ನಿಗಮವು ಧರ್ಮಸ್ಥಳ ಯೋಜನೆಯೊಂದಿಗೆ ವಿಮಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಇದರ ಸದುಪಯೋಗ ಈ ರೀತಿಯಲ್ಲಿ ಆಗಿದೆ"ಎಂದರು.



ಜಿಲ್ಲಾ ನಿರ್ದೇಶಕರಾದ ದಿನೇಶ್ ಡಿ. ಯವರು ಮಾತನಾಡಿ " ಧರ್ಮಸ್ಥಳದ ಯೋಜನೆಯು ಅರೋಗ್ಯ ರಕ್ಷಾ, ಪ್ರಗತಿ ರಕ್ಷಾ, ಮೈಕ್ರೋ ಬಚತ್ ಮತ್ತು ಭೀಮಜ್ಯೋತಿ ವಿಮೆಯನ್ನು ಭಾರತೀಯ ಜೀವಾ ವಿಮಾ ನಿಗಮ ದೊಂದಿಗೆ ಕೈಜೋಡಿಸಿ ಮಾಡುವ ಮೂಲಕ ಸಣ್ಣ ಉಳಿತಾಯ ಮಾಡುವ ಬಗ್ಗೆ ಸದಸ್ಯರಿಗೆ ಜಾಗೃತಿ ಮೂಡಿಸುತ್ತಿದೆ.

ಸೆಲ್ಕೋ ಸಂಸ್ಥೆಯು ಉತ್ತಮ ರೀತಿಯ ಬೀದಿ ದೀಪ ಅಳವಡಿಸಿ ಜನರಿಗೆ ಅನುಕೂಲ ಮಾಡಿದೆ " ಎಂದು ಹೇಳಿದರು.


ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಿಮ್ಮನಹಳ್ಳಿ ಗ್ರಾಮ ಪಂಚಾಯಿತ್ ಅಧ್ಯಕ್ಷರಾದ ಶ್ರೀಮತಿ ಲೋಲಾಕ್ಷಮ್ಮರವರು ವಹಿಸಿದ್ದರು. 


ತಾಲೂಕು ಯೋಜನಾಧಿಕಾರಿ ಪ್ರೇಮಾನಂದ ಎಲ್ .ಬಿ. ಪ್ರಸ್ತಾವನೆ ಗೈದು ಎಲ್ಲರನ್ನು ಸ್ವಾಗತಿಸಿದರು. ವಿಮಾ ಸಮನ್ವಯಧಿಕಾರಿ ಕುಮಾರಸ್ವಾಮಿ ಧನ್ಯವಾದಗೈದರು.


ಮೇಲ್ವಿಚಾರಕಿ ಶ್ರೀಮತಿ ತಿಪ್ಪಿರಮ್ಮ ಕಾರ್ಯಕ್ರಮ ನಿರೂಪಣೆ ಮಾಡಿದರು. ಸೇವಾಪ್ರತಿನಿಧಿಗಳಾದ ತಿಮ್ಮಣ್ಣ, ಧರಣೇಶ್ ವಂದಿಸಿದರು.


  ಈ ವೇಳೆ ಸುಮತಿ,ಮಾರಮ್ಮ ದೇವಸ್ಥಾನದ ಉಪಾಧ್ಯಕ್ಷರಾದ ಶ್ರೀಧರ್ ಸೆಲ್ಕೋ ಸಂಸ್ಥೆಯ ಪ್ರತಿನಿಧಿ ಪ್ರಜ್ವಲ್,ಊರಿನ ಗಣ್ಯರು, ಸಂಘದ ಸದಸ್ಯರು ಉಪಸ್ಥಿತರಿದ್ದರು.


ವರದಿ : ಚಿಕ್ಕನಾಯಕನಹಳ್ಳಿ ಚಂದ್ರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು