ಮರಬಳ್ಳಿ ಗ್ರಾಮದಲ್ಲಿ ಬಾಬು ಜಗಜೀವನ್ ರಾಂ ಭವನ ನಿರ್ಮಾಣ ಕಾಮಗಾರಿಗೆ ಶಾಸಕ ಎಂ.ವಿ ವೀರಭದ್ರಯ್ಯ.

 ಮಧುಗಿರಿ : ತಾಲೂಕಿನಲ್ಲಿ ಸರ್ಕಾರ ಇಲ್ಲದಿದ್ದರೂ ಜನಪರ ಕಾರ್ಯಕ್ರಮ ನೀಡಿದ್ದು, ಮುಂಬರುವ ಚುನಾವಣೆಯಲ್ಲಿ ಜನತೆ ಹೆಚ್ಚಿನ ಮತಕೊಟ್ಟು ಆಶೀರ್ವಾದ ಮಾಡುವಂತೆ ಶಾಸಕ ಎಂ.ವಿ.ವೀರಭದ್ರಯ್ಯ ಮನವಿ ಮಾಡಿದರು.



ತಾಲೂಕಿನ ಕಸಬಾ ಹೋಬಳಿಯ ಮರಬಳ್ಳಿ ಗ್ರಾಮದಲ್ಲಿ ಬಾಬು ಜಗಜೀವನ್ ರಾಂ ಭವನ ನಿರ್ಮಾಣ ಕಾಮಗಾರಿ, ಮಾಡಗಾನಹಟ್ಟಿ ಗ್ರಾಮದ ರಸ್ತೆ ಡಾಂಬರೀಕರಣ ಕಾಮಗಾರಿ ಹಾಗೂ ಪಟ್ಟಣದ ಮಂಡರ ಕಾಲೋನಿಯಲ್ಲಿ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ರಸ್ತೆ, ಚರಂಡಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳಿಗೆ ಆದ್ಯತೆ ನೀಡಿದ್ದೇನೆ. ಕುಮಾರಸ್ವಾಮಿ ಸರ್ಕಾರ ಇರುವ ತನಕ ಮಧುಗಿರಿಗೆ ಅಗತ್ಯ ಅನುದಾನ ಬರುತ್ತಿದ್ದು, ನಂತರ ತಾರತಮ್ಯ ಮಾಡಲಾಯಿತು. ಆದರೂ ಸಾವಿರಾರು ಕೋಟಿ ಅನುದಾನದಿಂದ ಕ್ಷೇತ್ರದ ಅಭಿವೃದ್ಧಿ ಮಾಡಿದ್ದೇನೆ. ಮರಬಳ್ಳಿ ಹಾಗೂ ಮಾಡಗಾನಹಟ್ಟಿ ಗ್ರಾಮಗಳಲ್ಲಿ ಈಗಾಗಲೇ 80 ಲಕ್ಷದಷ್ಟು ಅಭಿವೃದ್ಧಿ ಕೆಲಸವಾಗಿದೆ. ಇಂದು ಪಟ್ಟಣದ ಮಂಡರ ಕಾಲೋನಿಯಲ್ಲೂ ರಸ್ತೆ, ಚರಂಡಿ ಕಾಮಗಾರಿಗೆ ಚಾಲನೆ ನೀಡಿದ್ದು, ಸ್ಥಳೀಯ ಜನತೆಯ ಸಹಕಾರದಿಂದ ಗುಣಮಟ್ಟದ ಕಾಮಗಾರಿ ಮಾಡಬೇಕು. ಇಂಜಿನಿಯರ್‍ಗಳು ಮುತುವರ್ಜಿವಹಿಸಿ ಗುಣಮಟ್ಟವನ್ನು ಕಾಯ್ದುಕೊಳ್ಳಿ ಎಂದರು.


ಬಾಕ್ಸ್ :

ಸೋರುವ ಮನೆಯೆಂದು ಮಹಿಳೆಯರ ದೂರು 

ಪಟ್ಟಣದ ಮಂಡರ ಕಾಲೋನಿಯಲ್ಲಿ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಸುಮಾರು 450 ಮನೆಗಳ ನಿರ್ಮಾಣ ಮಾಡಲಾಗಿದ್ದು ಶೇ.75 ರಷ್ಟು ಮನೆಗಳು ಸೋರುತ್ತಿವೆ. ಮಳೆ ಬಂದರೆ ಸಾಕು ಕೊಡ ಹಿಡಿದು ನಿದ್ದೆಬಿಟ್ಟು ಕೂರಬೇಕಾದ ಪರಿಸ್ಥಿತಿ ಬಂದಿದೆ. ಕೈಯಲ್ಲಿ ಉಜ್ಜಿದರೂ ಸಿಮೆಂಟ್ ಕಿತ್ತು ಬರುತ್ತಿದ್ದು, ಕಳಪೆ ಕಾಮಗಾರಿ ನಡೆಸಿರುವುದು ಕಂಡು ಬಂದಿದ್ದು ಸಮಸ್ಯೆಯನ್ನು ಮಹಿಳೆಯರು ಶಾಸಕರ ಮುಂದೆಯೇ ಸಮಸ್ಯೆಯನ್ನು ಬಿಚ್ಚಿಟ್ಟರು. ಮಂಡಳಿಯ ಎಇಇ ಲೊಕೇಶ್ ಸ್ಥಳದಲ್ಲಿದ್ದು ಯಾವುದೇ ಸಮಸ್ಯೆಯಿಲ್ಲ. ಇದ್ದರೆ ಸರಿಪಡಿಸುವುದಾಗಿ ಹಾರಿಕೆ ಉತ್ತರ ನೀಡಿದರು. ಆದರೆ ಜನರು ಮಾತ್ರ ಕಳಪೆ ಕಾಮಗಾರಿಯ ಬಣ್ಣ ಬಯಲು ಮಾಡಿದ್ದು, ನಮಗೆ ಮತ್ತೆ ನಿರ್ಮಿಸಿಕೊಡಲು ಆಗ್ರಹಿಸಿ ಸೂಕ್ತ ಕ್ರಮಕ್ಕೆ ಒತ್ತಾಯಿಸಿ ದೂರು ನೀಡಿದರು. 


ಈ ಬಗ್ಗೆ ಪ್ರತಕ್ರಿಯಿಸಿದ ಎಇಇ ಲೊಕೇಶ್ ಇದನ್ನು ಹೈದರಾಬಾದ್ ಕಂಪನಿಯೊಂದು ನಿರ್ವಹಣೆ ಮಾಡುತ್ತಿದ್ದು, ಸಂಪೂರ್ಣ ಹಣ ಪಾವತಿಸಿಲ್ಲ. ಸೋರುವ ಮನೆಗಳ ಪಟ್ಟಿಮಾಡಿ ಮತ್ತೆ ಸರಿಪಡಿಸಲು ಮುಂದಾಗ್ತೀವಿ ಎಂದಾಗ ಜನರು ಅಸಮಧಾನ ವ್ಯಕ್ತಪಡಿಸಿದರು. 

ವರದಿ ಮಧುಗಿರಿ ಬಾಲು ಪಣಿಂದ್ರ.


ಈ ಸಂದರ್ಭದಲ್ಲಿ ಜೆಡಿಎಸ್ ಅಧ್ಯಕ್ಷ ಬಸವರಾಜು, ಗ್ರಾ.ಪಂ. ಅಧ್ಯಕ್ಷ ನಾಗರಾಜು, ಮಾಜಿ ಪ್ರಧಾನರಾದ ನಾಗರಾಜಪ್ಪ, ಸದಸ್ಯರಾದ ಚೌಡಪ್ಪ, ಗಂಗಾಧರ್, ಜ್ಯೋತಿ ರಾಜಶೇಖರ್, ನಟರಾಜು, ಮಾಜಿ ಸದಸ್ಯ ರಮೇಶ್, ಪುರಸಭೆ ಮುಖ್ಯಾಧಿಕಾರಿ ನಜ್ಮಾ, ಸದಸ್ಯರಾದ ಎಂ.ಆರ್.ಜಗನ್ನಾಥ್, ಗಂಗರಾಜು, ಮುಖಂಡರಾದ ಬಿಜವರ ಸೀನಪ್ಪ, ಗೋವಿಂದರಾಜು, ಕಂಬಣ್ಣ, ತಿಮ್ಮಣ್ಣ, ಕಂಬಣ್ಣ, ತಿಮ್ಮಣ್ಣ, ರಂಗಪ್ಪ, ಬಾಲರಾಜು, ರಮೇಶ್, ನಾಗಭೂಷಣ್, ಎಇಇ ಮಂಜುನಾಥ್, ಎಇ ಕೃಷ್ಣಪ್ಪ, ಸುನೀಲ್, ಇತರರು ಇದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು