ಹೆಣ್ಣಾಗಲಿ ಗಂಡಾಗಲಿ ಮಕ್ಕಳಿಬ್ಬರೆ ಇರಲಿ ಎಂದು ಜಿ.ಪಂ.ಮಾಜಿ ಅಧ್ಯಕ್ಷೆ ಶಾಂತಲಾ ರಾಜಣ್ಣ

 ಮಧುಗಿರಿ : ಹೆಣ್ಣಾಗಲಿ ಗಂಡಾಗಲಿ ಮಕ್ಕಳಿಬ್ಬರೆ ಇರಲಿ ಎಂದು ಜಿ.ಪಂ.ಮಾಜಿ ಅಧ್ಯಕ್ಷೆ ಶಾಂತಲಾ ರಾಜಣ್ಣ ತಿಳಿಸಿದರು.



ಪಟ್ಟಣದ ತಮ್ಮ ನಿವಾಸದಲ್ಲಿ ಕೆ.ಎನ್.ರಾಜಣ್ಣ ಹಾಗೂ ಆರ್.ಆರ್.ಅಭಿಮಾನಿ ಬಳಗ ಮತ್ತು ಅವರ ಕುಟುಂಬ ವರ್ಗದವರಿಂದ ನಡೆದ ಸಾಮೂಹಿಕ ಸೀಮಂತ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಗುವಿಗೆ ಜನ್ಮ ನೀಡುತ್ತಿರುವ 

ಗರ್ಭಿಣಿಯರು ಪೌಷ್ಠಿಕ ಆಹಾರ ಸೇವಿಸಿ ಸದೃಢ ರಾಗಿ ಆರೋಗ್ಯ ಪೂರ್ಣ ಮಕ್ಕಳಿಗೆ ಜನ್ಮ ನೀಡಿ ಎಂದು ಹಾರೈಸಿ, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಸತ್ಪ್ರಜೆಗಳನ್ನಾಗಿಸುವಂತೆ ಕರೆ ನೀಡಿದರು.


ತಾ.ಪಂ.ಮಾಜಿ ಸದಸ್ಯೆ ಸುವರ್ಣಮ್ಮ ಮಾತನಾಡಿ, ಮಧುಗಿರಿ ವಿಧಾನ ಸಭಾ ವ್ಯಾಪ್ತಿಯಲ್ಲಿ ಒಂದು ಸಾವಿರಕ್ಕು ಹೆಚ್ಚು ಗರ್ಭಿಣಿ ಮಹಿಳೆಯರಿಗೆ ಸಾಮೂಹಿಕ ಸೀಮಂತ ಕಾರ್ಯಕ್ರಮವನ್ನು ಜಾತಿ, ದರ್ಮ ಬೇದ ಬಾವ ಇಲ್ಲದೆ ನಡೆಯುತ್ತಿರುವ ವಿಶೇಷ ಎಂದ ಅವರು, ಸಂಸಾರದ ಸಾಗರವನ್ನು ನಿಭಾಯಿಸುವವರು ಹೆಣ್ಣು ಮಕ್ಕಳು. ಈ ಹಿಂದೆ ಶ್ರೀಮಂತ ಕುಟುಂಬಗಳಲ್ಲಿ ಮಾತ್ರ ಸೀಮಂತ ಕಾರ್ಯಕ್ರಮ ನಡೆಸುತ್ತಿದ್ದು, ಪ್ರತಿಯೊಬ್ಬರಿಗೂ ಇಂತಹ ಸೌಭಾಗ್ಯ ಸಿಗಲಿ ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ಕೆ.ಎನ್.ರಾಜಣ್ಣ ಅವರ ಕುಟುಂಬ ವರ್ಗದಿಂದ ಅಯೋಜಿಸಲಾಗಿದೆ ಎಂದರು.


ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಬಿ.ನಾಗೇಶ್ ಬಾಬು ಮಾತನಾಡಿ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಇಂದಿರಾ ದೇನ ನಾಯಕ್ ತಾಯಂದಿರು ಉತ್ತಮ ತೀರ್ಮಾನ ಮಾಡಿ ಮಹಿಳೆಯ ಪರ ನಿಲ್ಲುವ ಮಧುಗಿರಿ ಅಭಿವೃದ್ಧಿ ದೃಷ್ಟಿಯಿಂದ ಕೆ.ಎನ್.ರಾಜಣ್ಣ ಅವರ ಆಯ್ಕೆಗೆ ಕಂಕಣ ಬದ್ದವಾಗಿ ನಿಲ್ಲಬೇಕು ಎಂದರು.


ಈ ಸಂಧರ್ಭದಲ್ಲಿ ಜಿ.ಪಂ.ಮಾಜಿ.ಸದಸ್ಯರಾದ ಮಂಜುಳಾ ಅದಿನಾರಾಯಣ್ ರೆಡ್ಡಿ, ಪುರಸಭಾ ಮಾಜಿ ಉಪಾಧ್ಯಕ್ಷರಾದ ಜುಬೇದ ಬಾನು, ಗ್ರಾ.ಪಂ.ಅದ್ಯಕ್ಷರುಗಾಳಾದ ಜಯಲಕ್ಷ್ಮಿ, ಸಾವಿತ್ರಮ್ಮ ಡಿ.ಎಚ್.ನಾಗರಾಜು, ಬಾಗ್ಯಮ್ಮ, ವೀಣಾ, ಮುಖಂಡರಾದ ಡಿ.ಬಿ.ಆಶಾ, ಚಂದ್ರಮ್ಮ, ಚಿತ್ತಮ್ಮ, ಮುಂತಾದವರು ಇದ್ದರು.


ವರದಿ : ಮಧುಗಿರಿ ಬಾಲು ಪಣೀಂದ್ರ

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು