ಶಿರಾದಲ್ಲಿ ಜೋರಾದ ನಾಮಪತ್ರ ಭರಾಟೆ, ಒಟ್ಟು 17 ನಾಮಪತ್ರ ಸಲ್ಲಿಕೆ!

 ಶಿರಾದಲ್ಲಿ ಜೋರಾದ ನಾಮಪತ್ರ ಭರಾಟೆ, ಒಟ್ಟು 17 ನಾಮಪತ್ರ ಸಲ್ಲಿಕೆ!


ಬರದ ನಾಡ ಶಿರಾದಲ್ಲಿ ಬಿಸಲಿನ ತಾಪ ಹೆಚ್ಚಾದ್ದಂತೆ, ಚುನಾವಣಾ ರಣಕಣದ ಕಾವು ಕೂಡ ಅಷ್ಟೇ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. 


ಶಿರಾ ವಿಧಾನಸಭಾ ಕ್ಷೇತ್ರಗಳಲ್ಲಿ ವಿವಿಧ ಪಕ್ಷದ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಯ ಭರಾಟೆ ಕೂಡ ಜೋರಾಗಿದೆ. 


 ಕ್ಷೇತ್ರದಲ್ಲಿ 17 ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಚುನಾವಣೆ ಕಣ ದಿನದಿಂದ ದಿನಕ್ಕೆ ಕಾವೇರತೊಡಗಿದೆ.


ಇಂದು ಬಾಜಪ ಅಭ್ಯರ್ಥಿ ಸೇರಿದಂತೆ ಪಕ್ಷೇತರರು ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದ್ದಾರೆ. 

ನಾಮಪತ್ರ ಸಲ್ಲಿಕೆಗೂ ಮುನ್ನ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬಳಿಕ ಮೆರವಣಿಗೆ ನಡೆಸಿ ಶಕ್ತಿ ಪ್ರದರ್ಶನ ಮಾಡಿರುವುದು ಹಲವು ಕ್ಷೇತ್ರಗಳಲ್ಲಿ ಕಂಡು ಬಂದಿದೆ.ನಾಮಪತ್ರ ಸಲ್ಲಿಕೆಗೂ ಮುನ್ನ ಯಾತ್ರೆ ಮಾಡಿ ಮತದಾರರ ಗಮನ ಸೆಳೆದಿದ್ದಾರೆ.


ಶಿರಾ ಕ್ಷೇತ್ರದಿಂದ ಮರು ಆಯ್ಕೆ ಬಯಸಿ ಬಿಜೆಪಿ ಅಭ್ಯರ್ಥಿಯಾದ ರಾಜೇಶ್ ಗೌಡ ತಮ್ಮ ಜನಬೆಂಬಲದೊಂದಿಗೆ ನಾಮಪತ್ರ ಸಲ್ಲಿಸುತ್ತಿದ್ದು, ಅದಕ್ಕೂ ಮುನ್ನ ಸ್ವಗ್ರಾಮ ಚಿರತಹಳ್ಳಿಯ ಶ್ರೀ ಕಲ್ಲೇಶ್ವರ ಸ್ವಾಮಿ ದೇವಸ್ಥಾನ, ಹನುಮಂತರಾಯ ದೇವಸ್ಥಾನ, ಕರಿಯಮ್ಮ ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಲಾಯಿತು.



ಇಲ್ಲಿಯವರೆಗೆ ಆಮ್ ಆದ್ಮಿ ಪಕ್ಷ,ಕರ್ನಾಟಕ ರಾಷ್ಟ್ರೀಯ ಪಕ್ಷ,ಸ್ವಯಂ ಕೃಷಿ ಪಾರ್ಟಿ ,

ಉತ್ತಮ ಪ್ರಜಾಕೀಯ ಪಕ್ಷ,

ಭಾರತೀಯ ಬೆಳಕು ಪಾರ್ಟಿ,

ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ. ಸೇರಿದಂತೆ 

ಮೂರು ಮಂದಿ ಪಕ್ಷೇತರರು...

ನಾಮ ಪತ್ರ ಸಲ್ಲಿಕೆ ಮಾಡಿದ್ದಾರೆ ..


ನಾಳೆ ಮಾಜಿ ಸಚಿವರಾದ ಟಿ.ಬಿ.ಜಯಚಂದ್ರ ದಿನಾಂಕ 20-04-2023 ರಂದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವರು ಇವರಿಗೆ

ಆಂಧ್ರ ಪ್ರದೇಶ ಕಾಂಗ್ರೆಸ್ ಸಮಿತಿ ಮಾಜಿ ಅಧ್ಯಕ್ಷರು,ಮಾಜಿ ಸಚಿವರಾದ ನೀಲಕಂಠಾಪುರಂ ರಘುವೀರರೆಡ್ಡಿ ಸಾಥ್ ನೀಡುವರು.

ಹಾಗೂ ಜೆಡಿಎಸ್ ಅಭ್ಯರ್ಥಿ ಅರ್ .ಉಗ್ರೇಶ್ ಸಹ 

ನಾಮಪತ್ರ ಸಲ್ಲಿಸುವರು ..


ವರದಿ ಶಿರಾ ಶ್ರೀಮಂತ್.

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು