ತಾಲೂಕು ಆಡಳಿತ ವತಿಯಿಂದ ಶ್ರೀ ಸಂತ ಸೇವಾಲಾಲ್ ಜಯಂತಿ ಆಚರಣೆ.

 ಶಿರಾ: ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಸಂತ ಸೇವಾಲಾಲರ ಜಯಂತಿಯನ್ನು  ತಾಲೂಕು ಕಚೇರಿಯಲ್ಲಿ ಆಚರಿಸಲಾಯಿತು.


ತಾಲೂಕು ಕಚೇರಿಯ ತಹಸೀಲ್ದಾರ್ ಶ್ರೀಮತಿ ಮಮತಾ ಮಾತನಾಡಿ, ಜನರ ಒಳಿತಿಗಾಗಿ ಪವಾಡ ಪುರುಷರಾಗಿ ಅವತರಿಸಿದ ಸಂತ ಸೇವಾಲಾಲರಂತಹ ಮಹನೀಯರು ಆದರ್ಶವಾಗಬೇಕು.  

ಬಂಜಾರ ಸಮುದಾಯದಲ್ಲಿ ಸೇವಾಲಾಲರು ವೀರನಾಗಿ, ವಿರಾಗಿಯಾಗಿ, ಶ್ರೇಷ್ಠ ದಾರ್ಶನಿಕನಾಗಿ ಮತ್ತು ಸಾಂಸ್ಕೃತಿಕ ನಾಯಕನಾಗಿ ಹೊರಹೊಮ್ಮಿದ್ದರು ಎಂದು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಕ್ಷೇತ್ರದ ಶಾಸಕರು ಸೇರಿದಂತೆ

ಗ್ರೇಡ್-2 ತಹಶಿಲ್ದಾರರ ಮಂಜುನಾಥ್ ವಿವಿಧ ತಾಲ್ಲೂಕು ಮಟ್ಟದ ಅಧಿಕಾರಿಗಳ ಸೇರಿದಂತೆ

ಬಂಜಾರ ಸಮುದಾಯದ ಮುಖಂಡರು 

ಹಾಜರಿದ್ದರು..


ವರದಿ:-ಶ್ರೀಮಂತ್ ಶಿರಾ.

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು