ಶಿರಾ: ಜೆಡಿಎಸ್ ಪಕ್ಷಕ್ಕೆ ಮತ್ತಷ್ಟು ಶಕ್ತಿ ತುಂಬಲು ಪಕ್ಷದ ನಾಯಕರಾದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೆಚ್ಚಿನ ಒತ್ತು ನೀಡುತ್ತಿದ್ದಾರೆ.
ಈ ನಿಟ್ಟಿನಲ್ಲಿ ಗ್ರಾಮೀಣದಲ್ಲಿ ತಳಮಟ್ಟದ ಕಾರ್ಯಕರ್ತರನ್ನು ಗುರುತಿಸುವ ಕೆಲಸವಾಗುತ್ತಿದೆ. ಶಿರಾ ವಿಧಾನಸಭೆ ಕ್ಷೇತ್ರಗಳಲ್ಲಿ ಪಕ್ಷದ ಬಲವರ್ಧನೆಗೆ ಶ್ರಮಿಸಲಾಗುತ್ತಿದೆ ಎಂದು ಜೆಡಿಎಸ್ ಮುಖಂಡ ಎಸ್ ಆರ್ ಗೌಡ ತಿಳಿಸಿದರು.
ಅವರು ಇಂದು ತಾಲ್ಲೂಕು
ಚಿರತ್ತಹಳ್ಳಿ ಗ್ರಾಮದಲ್ಲಿ ಜೆಡಿಎಸ್ ಬೂತ್ ಕಮೀಟಿ ರಚನಾ ಸಭೆಯಲ್ಲಿ
ಮಾತನಾಡಿದ ಅವರು, ಮುಂಬರುವ ತಾಲೂಕು ಪಂಚಾಯತ ಜಿಲ್ಲಾ ಪಂಚಾಯತ್ ವಿಧಾನಸಭಾ ಚುನಾವಣೆಗಳಿಗೆ ಈಗಿನಿಂದಲೇ ಪಕ್ಷವನ್ನು ಬಲಪಡಿಸಲು ಉದ್ದೇಶಿಸಲಾಗಿದೆ.
ಆದ್ದರಿಂದ ಬೇರು ಮಟ್ಟ ಮತ್ತು ಮೂಲ ಕಾರ್ಯಕರ್ತರತ್ತ ಗಮನ ಹರಿಸಿ ಅವರಿಗೆ ಶಕ್ತಿ ತುಂಬಲಾಗುತ್ತಿದೆ ಎಂದರು.
ಪ್ರತಿ ಹಳ್ಳಿಯಲ್ಲಿ ಪ್ರತಿ ವಾರ್ಡ್‌ನಲ್ಲಿ 25 ಜನ ಕಾರ್ಯಕರ್ತರನ್ನೊಳಗೊಂಡ ಬೂತ್ ಕಮಿಟಿ ಮತ್ತು ಕಮಿಟಿಗೆ ಒಬ್ಬ ಅಧ್ಯಕ್ಷರನ್ನು ನೇಮಿಸಲು ನಿರ್ಧರಿಸಲಾಗಿದೆ.
ಪ್ರತಿ ತಾಲೂಕಿನಲ್ಲಿ ಕಾರ್ಯಕಾರಿಣಿ ಸಮಿತಿ ಸ್ಥಾಪಿಸಲಾಗುತ್ತಿದೆ.
ಈ ಸಮಿತಿಗೆ 102 ಜನ ಪ್ರಮುಖ ಕಾರ್ಯಕರ್ತರನ್ನು ಆಯ್ಕೆ ಮಾಡಲಾಗುತ್ತದೆ. ಇದಕ್ಕಾಗಿ ಈಗಾಗಲೇ ಪ್ರತಿ ಜಿಲ್ಲೆಗೆ ಒಬ್ಬ ರಾಜ್ಯ ವೀಕ್ಷಕರನ್ನು ವರಿಷ್ಠರು ನೇಮಿಸಿದ್ದಾರೆ ಎಂದರು.
ತಾಲೂಕುವಾರು ಕಾರ್ಯಕಾರಿಣಿ ಸಭೆಗಳನ್ನು ನಡೆಸಲಾಗಿದೆ. ಮುಂದೆ ಚುನಾವಣೆಗೆ ಸ್ಪರ್ಧಿಸುವ ಇಚ್ಛೆಯುಳ್ಳ ಅಭ್ಯರ್ಥಿಗಳಿಂದ ಮಾಹಿತಿ ಸಂಗ್ರಹಿಸಲಾಗಿದೆ ಎಂದು ವಿವರಿಸಿದರು..
ಸಭೆಯಲ್ಲಿ ಮಾಜಿ ತಾ.ಪಂಚಾಯತ್ ಅಧ್ಯಕ್ಷ ರಾದ ಸತ್ಯಪ್ರಕಾಶ್ ಮಾತನಾಡಿ ಜೆಡಿಎಸ್ ಪಕ್ಷದ ಸಾಧನೆ ವಿವರಿಸಿದರು,
ಕಾರ್ಯಕ್ರಮ ದಲ್ಲಿ
ಜೆಡಿಎಸ್ ಪಕ್ಷದ ನಾಯಕರಗಳಾದ ತಾಲ್ಲೂಕು
ಜೆಡಿಎಸ್ ಅಧ್ಯಕ್ಷರಾದ ಉಗ್ರೇಶ್
ಕಲ್ಕೆರೆ ರವಿ ಕುಮಾರ್ ,ಮಹಿಳಾ ಅಧ್ಯಕ್ಷರಾದ ರೇಣುಕಮ್ಮ, ಯಶಸ್ವಿನಿ ರವರು
ಇದೇ ಸಂದರ್ಭದಲ್ಲಿ ಬೂತ್ ಕಮಿಟಿ ಕುರಿತು ಕಲ್ಕೆರೆ ರವಿ ಕುಮಾರ್ ವಿವರಣಾತ್ಮಕ ವಾಗಿ ವಿವರಿಸಿದರು.
ವರದಿ : ಶಿರಾ ಶ್ರೀಮಂತ್

