ಸಂವಿಧಾನ ಶಿಲ್ಪಿಗೆ ಅಪಮಾನ: ದಸಂಸ ಖಂಡನೆ.

 ಚಿಕ್ಕನಾಯಕನಹಳ್ಳಿ : ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯದಲ್ಲಿ ಪ್ರದರ್ಶಿಸಿದ ಕಿರು ನಾಟಕದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಅವಹೇಳನ ಮಾಡಲಾಗಿದೆ ಎಂದು ಕರ್ನಾಟಕ ಮಾದಿಗ ದಂಡೋರ ಸಮಿತಿ ಹಾಗೂ ದಲಿತ ಸಂಘಟನೆಗಳ ಒಕ್ಕೂಟ ಘಟನೆಯನ್ನು ಖಂಡಿಸಿವೆ.


 ಕರ್ನಾಟಕ ರಾಜ್ಯ ಮಾದಿಗ ದಂಡೋರ ರಾಜ್ಯ ಜಂಟಿ ಕಾರ್ಯದರ್ಶಿ ಬೇವಿನಹಳ್ಳಿ ಚನ್ನಬಸವಯ್ಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿ 

ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯದ ಮ್ಯಾನೇಜ್ಮೆಂಟ್ ಸ್ಟಡೀಸ್ ಕೇಂದ್ರದ ಥಿಯೇಟರ್ ಗ್ರೂಪ್ ಮತ್ತು ದಿ ಡೆಲ್ರಾಯ್ಸ್ ಬಾಯ್ಸ್, ಮ್ಯಾಡ್ ಆಡ್ಸ್ ನ ಭಾಗವಾಗಿ ಫೆಸ್ಟ್ ನಲ್ಲಿ ವಿಧ್ಯಾರ್ಥಿಗಳು ಅತ್ಯಂತ ಕೀಳುಭಾಷೆಯಿಂದ 

ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ದಲಿತ ಸಮುದಾಯದ ಬಗ್ಗೆ ಗೇಲಿಮಾಡಿ, ಏನು ಸ್ಕ್ರೀಪ್ಟ್ ರೇಡಿ ಮಾಡಿ ನಾಟಕದಲ್ಲಿ ಬಾಬಾ ಸಾಹೇಬರಿಗೆ ಅಪಮಾನ ಮಾಡಿ ಪ್ರದರ್ಶಿಸಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ದೇಶದ ನಾಗರಿಕರನ್ನ ತಲೆ ತಗ್ಗಿಸುವ ವಂತೆ ಮಾಡಿದೆ.


ಅಂಬೇಡ್ಕರ್ ರಾಷ್ಟ್ರನಾಯಕರಾಗಿದ್ದು, ಅವರ ಬಗ್ಗೆ ವಿಶ್ವದ ಅನೇಕ ರಾಷ್ಟ್ರಗಳು ಗೌರವಿಸುತ್ತಿವೆ. ಅಂತಹ ನಾಯಕನಿಗೆ ಅಪಮಾನ ಮಾಡಿರುವ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಮೇಲೆ ಕಠಿಣ ಶಿಕ್ಷೆ ಗೆ ಒಳಪಡಿಸಬೇಕಿದೆ ಎಂದು ಆಗ್ರಹಿಸಿದರು.


 ಈ ವೇಳೆ ದಸಂಸ ಮುಖಂಡ ಸಿ.ಎಸ್.ಲಿಂಗದೇವರು, ಗೋಡೆಕೆರೆ ವಸಂತಕುಮಾರ್, ದುಗುಡಿಹಳ್ಳಿ ಬಸವರಾಜು, ಪರಮೇಶ್, ಭಾಗವಹಿಸಿದ್ದರು.


ವರದಿ : ಚಿಕ್ಕನಾಯಕನಹಳ್ಳಿ ಚಂದ್ರು

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು