ಮಧುಗಿರಿ : ಜಿಲ್ಲೆಯಲ್ಲಿ ಪಾವಗಡದ ನಂತರ ಹೆಚ್ಚು ಬಡ ವರ್ಗದವರನ್ನು ಹೊಂದಿರುವಂತಹ ಕ್ಷೇತ್ರ ಮಧುಗಿಯಾಗಿದೆ ಎಂದು ಮಾಜಿ ಶಾಸಕ ಕೆ.ಎನ್ ರಾಜಣ್ಣ ತಿಳಿಸಿದರು.
ತಾಲೂಕಿನ ಕೊಡಿಗೇನಹಳ್ಳಿ ಹೋಬಳಿಯ ಅಡವಿನಾಗೇನಹಳ್ಳಿಯ ಗ್ರಾಮದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು. ಈ ಬಾರಿ ನಡೆಯುವ ಚುನಾವಣೆಯು ಬಾರಿ ವಿಶೇಷತೆಯಿಂದ ಕೊಡಿದೆ .ನಮ್ಮ ಕ್ಷೇತ್ರದಲ್ಲಿ ಕಳೆದ ಅವಧಿಯಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳನ್ನು ಅನುμÁ್ಟನಕ್ಕೆ ತರುವಲ್ಲಿ ಸಿದ್ದರಾಮಯ್ಯ ನವರು ಪಾತ್ರ ಹೆಚ್ಚಿದೆ ಎಂದರು.
ಇಮ್ಮುಡಗೊಂಡನಹಳ್ಳಿಯ ಬಳಿ ಬ್ಯಾರೆಜ್ ನಿರ್ಮಿಸದೇ ಹೋಗಿದ್ದರೆ 30-40 ವರ್ಷಗಳಿಂದ ನೀರನ್ನೇ ಕಾಣದ ಈ ಭಾಗದ 7 ಕೆರೆಗಳಿಗೂ ನೀರು ಹರಿಯುತ್ತಿರಲಿಲ್ಲ. ಆ ಕೆರೆಗಳ ಸಮೀಪವಿರುವ ಕೊಳವೆಬಾವಿಗಳು ಸೇರಿದಂತೆ ಅಂತರ್ಜಲ ಮಟ್ಟವು ಹೆಚ್ಚಾಗಿದೆ . ಕೊಡಿಗೇನಹಲ್ಳಿ ಯಿಂದ ಮೈದನಹಳ್ಳಿ ಜಾಲಿ ಹಳ್ಳಿಗೆ ಮಳೆ ಬಂದಾಗ ಹೋಗಲು ಶಾಲಾ ಮಕ್ಕಳು , ಗ್ರಾಮಸ್ಥರು ಗ್ರಾಮಗಳಿಗೆ ತೆರಳಲು ಪರದಾಡುತ್ತಿದ್ದನ್ನು ಕಂಡು ಜಯಮಂಗಲಿ ನದಿಗೆ ಅಡ್ಡಲಾಗಿ ಬ್ಯಾರೆಜ್ ಕಮ್ ಬ್ರಿಡ್ಜ್ ನಿರ್ಮಾಣ ಮಾಡಿದೆ ಈ ಕಾಮಗಾರಿ ಯನ್ನು ಕಂಡು ಕೆಲವರು ನನ್ನನ್ನು ಹೀಯಾಳಿಸಿದರು ನಂತರ ಈಗ ಅವರಿಗೆ ಬ್ರಿಡ್ಜ್ ನ ಅನೂಕೂಲವೆನೆಂದು ಈಗ ತಿಳಿದುಕೊಂಡಿದ್ದಾರೆ ಎಂದರು.
ನಮ್ಮ ಬ್ಯಾಂಕ್ ನಲ್ಲಿ ಸರಕಾರದ ಹಣ ಅರ್ಧ ಪೈಸೆಯಷ್ಟೂ ಇಲ್ಲಾ ಎಲ್ಲಾ ಹಣವು ನರ್ಬಾಡ್ ಮತ್ತು ಅಪೆಕ್ಸ್ ಬ್ಯಾಂಕ್ ಗಳಿಂದ ಸಾಲ ಪಡೆದು ರೈತರಿಗೆ ಸೌಲಭ್ಯ ನೀಡಲಾಗುತ್ತಿದೆ. ಮೋದಿಯವರು ಅಧಿಕಾರಕ್ಕೆ ಬಂದಾಗಿನಿಂದಲೂ ದೇಶ ದಿವಾಳಿಯಾಗುತ್ತೆ ಎಂದು ಭಾವಿಸಿ ಇದೂವರೆವಿಗೂ ರೈತರ ಸಾಲ ಮನ್ನಾ ಮಾಡಿಲ್ಲ ಆದರೆ ಬಂಡವಾಳ ಶಾಹಿಗಳಿಗಳು ಮಾಡಿರುವ ಸಾವಿರಾರು ಕೋಟಿ ರೂಗಳ ಸಾಲವನ್ನು ಮನ್ನಾ ಮಾಡುತ್ತಿರುವುದು ಯಾವ ನ್ಯಾಯ ..? ನನ್ನ 50 ವರ್ಷಗಳ ರಾಜಕೀಯ ಹಿನ್ನೆಲೆಯನ್ನು ಹೊಂದಿದ್ದೇನೆ ನಾನು ಬೆಳೆದದ್ದು ಅಸಹಾಯಕ ರೊಂದಿಗೆ ಬೆಳೆದಿದ್ದೇನೆ. ಈ ಹಿಂದೆ ಸರಕಾರದಿಂದ ಮನೆ ನಿರ್ಮಾಣಕ್ಕೆ ಅನೇಕ ಎಡರು ತೊಡರುಗಳು ಇದ್ದವು ಆಗ ನಾನು ನಮ್ಮ ಸರಕಾರದ ಅವಧಿಯಲ್ಲಿ ತಾಲೂಕು ಸೇರಿದಂತೆ ರಾಜ್ಯದಲ್ಲಿಯು ಮನೆ ನಿರ್ಮಾಣಕ್ಕೆ ಸರಕಾರದ ಅನುದಾನದ ಹಣ ಸೇರಿದಂತೆ ಮನೆಯ ಮಾಲೀಕರು ಹೆಚ್ಚುವರಿಯಾಗಿ ಮನೆ ನಿರ್ಮಾಣಕ್ಕೆ ಅವಕಾಶ ಸಹ ಕೊಡಲಾಯಿತು. ನಮ್ಮ ತಾಲೂಕಿನಲ್ಲಿ ಸುಮಾರು 23 ಸಾವಿರ ಯಶಸ್ವಿನಿ ಕಾರ್ಡ್ ಗಳನ್ನು ನೊಂದಾಯಿಸಲಾಗಿದೆ. ಯೋಜನೆಗೆ ಸಂಬಂಧಪಟ್ಟಂತೆ ಸೌಲಭ್ಯ ಒದಗಿಸುವ ಆಸ್ಪತ್ರೆ ಗಳ ಪಟ್ಟಿ ಮತ್ತು ಚಿಕಿತ್ಸಾ ವಿವರಗಳ ಬಗ್ಗೆ ಮಾಹಿತಿ ಯನ್ನು ನೊಂದಾಣಿದಾರರಿಗೆ ಒದಗಿಸಲಾಗುವುದು ಹಾಗೂ ಕಾರ್ಡ್ ಗಳನ್ನು ಹತ್ತಿರದ ಸಹಕಾರ ಸಂಘ ಸಂಸ್ಥೆಗಳಲ್ಲಿ ಪಡೆದು ಕೊಳ್ಳುವಂತೆ ಕರೆ ನೀಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆದಿನಾರಾಯಣರೆಡ್ಡಿ ಮಾತನಾಡಿ ನಮ್ಮ ಕೆ.ಎನ್ ರಾಜಣ್ಣ ನವರು ಅಧಿಕಾರಕ್ಕೆ ಬಂದರೆ ಕೊಡಿಗೇನಹಳ್ಳಿ ಗ್ರಾಮಕ್ಕೆ ಹೈಟೆಕ್ ಪೆÇಲೀಸ್ ಠಾಣೆ , ನಾಡ ಕಚೇರಿ , ಬೈ ಪಾಸ್ ರಸ್ತೆ ನಿರ್ಮಾಣ ಸೇರಿದಂತೆ ಮುದ್ದೇನಹಳ್ಳಿಯಲ್ಲಿ ಜಯ ಮಂಗಲಿ ನದಿಗೆ ಅಡ್ಡಲಾಗಿ ಬ್ಯಾರೇಜ್ ನಿರ್ಮಾಣ ಮಾಡುವ ಗುರಿಯನ್ನು ಹೊಂದಲಾಗಿದೆ. ಸಿದ್ದರಾಮಯ್ಯನವರು ಈ ಹಿಂದೆ ಹೋಬಳಿಗೆ ಬಂದಾಗ ಸುಮಾರು 6 ಕೋಟಿ ರೂಗಳ ವೆಚ್ಚದಲ್ಲಿ ಬ್ಯಾರೆಜ್ ನಿರ್ಮಿಸಲಾಗಿತ್ತು. ಈ ಸುರಿದ ಮಳೆಯಿಂದಾಗಿ ಗ್ರಾಮದ ಜನರು ಓಡಾಟಕ್ಕೆ ಬಾರಿ ಅನೂಕುಲ ವಾಗಿದೆ. ನಮ್ಮ ಪಕ್ಷ ಹೊರಡಿಸಿರುವ ಯೋಜನೆಗಳ ಬಗ್ಗೆ ಸಮಗ್ರ ಮಾಹಿತಿ ವುಳ್ಳ ಗ್ಯಾರೆಂಟಿ ಕಾರ್ಡ್ ಗಳನ್ನು ಅದಷ್ಟೂ ಬೇಗಾ ಪ್ರತಿಯೊಬ್ಬ ಕಾರ್ಯಕರ್ತರ ಮನೆಗೆ ತಲುಪಿಸಲು ಬ್ಲಾಕ್ ಕಾಂಗ್ರೆಸ್ ವತಿಯಿಂದ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷರಾದ ಸಂಜೀವಮ್ಮ ಲಕ್ಷೀರಂಗಯ್ಯ, ಅಶ್ವತ್ಥನಾರಯಣ, ಗ್ರಾಪಂ ಸದಸ್ಯರಾದ ಕಾಂತರಾಜು, ನರಸೇಗೌಡ, ರಾಧಮ್ಮ, ಆದಿಲಕ್ಷ್ಮಮ್ಮ, ಆನಂದ, ಜರ್ನಾಧನ್ ಮಿಲ್ ಶ್ರೀನಿವಾಸ್, ಮುಖಂಡರಾದ ಬಾಬು ರೆಡ್ಡಿ, ತಿಮ್ಮರೆಡ್ಡಿ, ಲಕ್ಷ್ಮಿನರಸೇಗೌಡ ನರಸಿಂಹಮೂರ್ತಿ, ತಿಮ್ಮರಾಜು, ಡಾ ರಂಗಶಾಮಣ್ಣ, ಕೃಷ್ಣಪ್ಪ, ಹನುಮಪ್ಪ, ಸಿದ್ಧಪ್ಪ, ಎನ್,ಎಲ್ ರಮೇಶ್, ಗಂಗರಾಜು ಹಾಜರಿದ್ದರು.
ವರದಿ : ಮಧುಗಿರಿ ಬಾಲುಪಣಿಂದ್ರ.
