ಸಹಕಾರ ಸಂಘಗಳು ರೈತರ ಆರ್ಥಿಕ ಅಭ್ಯುದಯಕ್ಕೆ ಸಾಕ್ಷಿ-ಕೆ.ಎನ್.ಆರ್

 ಮಧುಗಿರಿ : ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ತಕ್ಷಣ ಪ್ರತಿ ಗ್ರಾಪಂ ಮಟ್ಟದಲ್ಲಿ ಸಹಕಾರ ಸಂಘಗಳನ್ನು ಸ್ಥಾಪಿಸಲಾಗುವುದು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಎನ್ ರಾಜಣ್ಣ ತಿಳಿಸಿದರು.



ಮಧುಗಿರಿ ತಾಲ್ಲೂಕಿನ ಕೊಡಿಗೇನಹಳ್ಳಿ ಹೋಬಳಿಯ ಗುಂಡಗಲ್ಲು ಗ್ರಾಮದ ವಿಸ್ಸೆಸ್ಸೆಎನ್‍ನ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, 2013ರ ಚುನಾವಣೆಯಲ್ಲಿ ಇಲ್ಲಿನ ಗ್ರಾಮಸ್ಥರು ಸಹಕಾರ ಸಂಘ ಮಾಡುವಂತೆ ಮನವಿ ಮಾಡಿದ್ದರು ಕೊಟ್ಟ ಮಾತಿನಂತೆ ನಾನು ನಡೆದುಕೊಂಡಿದ್ದೇನೆ. ಈ ಸಹಕಾರ ಸಂಘದ ಈ ಭಾಗದ ಪ್ರತಿಯೊಬ್ಬ ರೈತನ ಆಸ್ತಿ, ರೈತರ ಆರ್ಥಿಕ ಅಭ್ಯದೇಯಕ್ಕೆ ಸಹಕಾರ ನೀಡುವುದು ಈ ಸಹಕಾರದ ಸಂಘದ ಉದ್ದೇಶವಾಗಿದೆ ಎಂದು, ನಾನು ನಿಮಗಾಗಿ ನೀವೆಲ್ಲರೂ ನನಗಾಗಿ ಎಂಬ ಧ್ಯೇಯದೊಂದಿಗೆ ಸಹಕಾರ ಸಂಘಗಳು ಕೆಲಸ ಮಾಡಬೇಕು ಎಂದರು.


ರೈತರು ಕೃಷಿ ಉಪಕಸಬು ಮಾಡಬೇಕು ಜಪಾನ್ ಮತ್ತು ಚೀನಾ ಮಾಧರಿಯಲ್ಲಿ ರೇಷ್ಮೆ ಬೆಳೆ ಬೆಳೆ ಹಾಗೂ ಹೈನುಗಾರಿಕೆಗೆ ಹೆಚ್ಚು ಒತ್ತು ನೀಡಿದಾಗ ರೈತರು ಆರ್ಥಿಕವಾಗಿ ಸದೃಡರಾಗಲು ಸಾಧ್ಯವಾಗುತ್ತದೆ ಎಂದರು. ಕ್ಷೇತ್ರದ ಜನತೆಗೆ ಸುಳ್ಳು ಆಶ್ವಾಸನೆಗಳು ಕೊಟ್ಟು ಗೆದ್ದು ಹೋಗಿದ್ದವರು ಏನು ಮಾಡಿದ್ದಾರೆ ಯಾರು ಜನಪರವಾಗಿ ಕೆಲಸ ಮಾಡುತ್ತಾರೆ ಅಂತಹವರಿಗೆ ಮತದಾನ ಮಾಡಿ ಎಂದರು. ನನ್ನ ಅವಧಿ ಮಾಡಿದ ರಸ್ತೆಗಳು ಈಗಾಗಲೇ ಗುಂಡಿ ಬಿದ್ದಿದ್ದರು ಕನಿಷ್ಟ ಅದನ್ನು ತ್ಯಾಪೆ ಹಾಕುವ ಕೆಲಸ ಆಗುತ್ತಿಲ್ಲ. ಇನ್ನೂ ಕೆಲ ಮಹಾಶಯರು ಮಾಧ್ಯಮಗಳಲ್ಲಿ ರಾಜ್ಯದ ರೈತರ ಹಾಗೂ ಸ್ತ್ರೀ ಶಕ್ತಿ ಸಂಘಗಳ ಸಾಲ ಮನ್ನಾ ಮಾಡುತ್ತೇವೆ ಎಂದು ಪ್ರಚಾರ ಪಡೆದಿದ್ದರು ಈಗಾಗಲೇ ಹಲವರಿಗೆ ನೋಟಿಸ್‍ಗಳು ಬರುತ್ತೀವೆ ಇಂತಹ ಸುಳ್ಳು ಆಶ್ವಾಸನೆಗಳಿಗೆ ಓಳಗಾಗಬೇಡಿ ಎಂದರು.


ನನಗೆ ಅಧಿಕಾರ ಬರಲಿ ಹೋಗಲಿ ನನ್ನ ಅವಧಿಯಲ್ಲಿ ಜನಪರವಾಗಿ ಕೆಲಸ ಮಾಡಿರುವ ತೃಪ್ತಿ ಇದ್ದು ಸಾಕ್ಷಿಯು ನಿಮ್ಮ ಮುಂದೆ ಇವೆ. ಬಿಜೆಪಿ ಸರಕಾರ ಬಂಡವಾಳ ಶಾಹಿಗಳ ಸಾಲ ಮನ್ನಾ ಮಾಡುತ್ತಿದ್ದು ರೈತರ ಸಾಲ ಮನ್ನಾ ಮಾಡಲು ಕಾಳಾಜಿ ಇಲ್ಲ, ಬಿಜೆಪಿ ಸರಕಾರದ ಅವಧಿಯಲ್ಲಿ ಪ್ರತಿಯೊಂದು ದುಬಾರಿಯಾಗಿದೆ, ನಮ್ಮ ಕಾಂಗ್ರೆಸ್ ಪಕ್ಷದ ಸರಕಾರ ಅಧಿಕಾರಕ್ಕೆ ಬಂದ ತಕ್ಷಣ ತಲಾ 10 ಕೆಜಿ ಅಕ್ಕಿ 200 ಯುನಿಟ್ ಉಚಿತ ವಿದ್ಯುತ್, ಪ್ರತಿ ಕುಟುಂಬದ ಹೆಣ್ಣು ಮಕ್ಕಳಿಗೆ ಮಾಸಿಕ 2 ಸಾವಿರ ನೀಡುವುದಾಗಿ ಈಗಾಗಲೇ ನಮ್ಮ ಪಕ್ಷ ಪ್ರಣಾಳಿಕೆಯಲ್ಲಿ ಘೋಷಿಸಿದೆ. ಮುಂದೆ ಅಧಿಕಾರ ಕೊಟ್ಟರೆ ಮಧುಗಿರಿ ಜಿಲ್ಲಾ ಕೇಂದ್ರ, ಏಕಶಿಲಾ ಬೆಟ್ಟಕ್ಕೆ ರೋಪ್, ಮಧುಗಿರಿ-ಹಿಂದೂಪುರ ಡಬ್ಬಲ್ ಲೈನ್ ರಸ್ತೆ, ಎತ್ತಿನ ಹೊಳೆ, ಮಧುಗಿರಿ ಜಿಲ್ಲಾ ಕೇಂದ್ರ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಆಧ್ಯತೆ ನೀಡುತ್ತೇನೆ ಎಂದರು.


ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆದಿನಾರಯಣ ರೆಡ್ಡಿ ಮಾತನಾಡಿ, ಗ್ರಾಮಗಳಲ್ಲಿ ಮನಸ್ಥಾಪಗಳನ್ನು ಬಿಟ್ಟು ಎಲ್ಲರೂ ಒಟ್ಟಾಗಿ ಸೇರಿಕೊಂಡು ಒಟ್ಟಾಗಿ ಈ ಬಾರಿ ಕೆ.ಎನ್ ರಾಜಣ್ಣನವರ ಗೆಲುವಿಗೆ ಶ್ರಮಿಸುತ್ತೇ ಎಂಬ ವಿಶ್ವಾಸವಿದೆ. ರಾಜಣ್ಣನವರು ಓಟಿಗಾಗಿ ರಾಜಕಾರಣ ಮಾಡುವುದಿಲ್ಲ ಅವರ ಅವಧಿಯಲ್ಲಿ ಜಾತ್ಯಾತೀತ ಹಾಗೂ ಪಕ್ಷತೀತವಾಗಿ ಕೆಲಸ ಮಾಡಿದ್ದಾರೆ. ಯಾವುದೆ ಅಪಪ್ರಚಾರಗಳಿಗೆ ಕಿವಿಗೂಡಬೇಡಿ ಎಂದರು. ನುಡಿದಂತೆ ನಡೆಯುವ ನಡುವಳಿಕೆ ಅವರದ್ದು ಎಂದರು. ಕಾರ್ಯಕ್ರಮದಲ್ಲಿ ಸಹಕಾರ ಸಂಘದ ದಾನಿ ರಂಗಮ್ಮ ರಂಗಾರೆಡ್ಡಿ ಕುಟುಂಬವನ್ನು ಸನ್ಮಾನಿಸಿ ಗೌರವಿಸಲಾಯಿತು.


ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಜಿಜೆ ರಾಜಣ್ಣ, ಡಿಸಿಸಿ ಬ್ಯಾಂಕ್ ನಿದೇರ್ಶಕ ಲಕ್ಷ್ಮಿನಾರಯಣ, ಮೇಲ್ವಿಚಾರ ರಾಮಕೃಷ್ಣ, ವ್ಯವಸ್ಥಾಪಕಿ ಪುಷ್ಪಲತಾ, ವಿಎಸ್ಸೆಸ್ಸೆಎನ್ ಅಧ್ಯಕ್ಷ ಗೋಪಾಲಕೃಷ್ಣ ರೆಡ್ಡಿ, ವಿಸ್ಸೆಸ್ಸೆಎನ್ ಕಾರ್ಯದರ್ಶಿಗಳಾದ ರಾಧಕೃಷ್ಣರೆಡ್ಡಿ, ಶ್ರೀನಿವಾಸ್, ಪ್ರಸಾದ್, ರಾಮಂಜಿ, ಗ್ರಾಪಂ ಅಧ್ಯಕ್ಷೆ ಮಧುಮತಿ ಜಗನ್ನಾಥ್ ಹಾಗೂ ಸಹಕಾರ ಸಂಘದ ನಿದೇರ್ಶಕರು ಹಾಜರಿದ್ದರು.



ವರದಿ : ಮಧುಗಿರಿ ಬಾಲುಪಣಿಂದ್ರ.

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು