ಚಿಕ್ಕನಾಯಕನಹಳ್ಳಿ : ಕೆ.ಎಸ್. ಕಿರಣ್ ಕುಮಾರ್ ಬಿಜೆಪಿ ಪ್ರಾಥಮಿಕ ಸದಸ್ಯತ್ವ ಹಾಗೂ ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ.ಮೂಲ ಬಿಜೆಪಿಗ ಕೆ. ಎಸ್.ಕಿರಣ್ ಕುಮಾರ್ ಬೆಂಬಲಿಗರಿಂದ ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಸಾಮೂಹಿಕ ರಾಜೀನಾಮೆ.
ಕೆಪಿಸಿಸಿ ಕೇಂದ್ರ ಕಚೇರಿಯಲ್ಲಿ ಸೋಮವಾರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ.ಅಧ್ಯಕ್ಷ ಡಿ.ಕೆ. ಶಿವಕುಮಾರ್, ಸುರ್ಜೆವಾಲ, ಮಾಜಿ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್, ಸಲೀಂ ಅಹಮ್ಮದ್, ಟಿಬಿ ಜಯಚಂದ್ರ, ಕೆ ಎನ್ ರಾಜಣ್ಣ, ಜಿಲ್ಲಾ ಅಧ್ಯಕ್ಷ ಹಾಗೂ ಜಿಲ್ಲಾ ಮತ್ತು ತಾಲೂಕು ಮಟ್ಟದ ನಾಯಕರುಗಳ ಸಮ್ಮುಖದಲ್ಲಿ ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ಹಾಗೂ ಸಾವಿರಾರು ಬೆಂಬಲಿಗರು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ.
ಪಟ್ಟಣದ ಕೆ.ಎಸ್.ಕಿರಣ್ ಕುಮಾರ್ ಅವರ ಜನ ಸಂಪರ್ಕ ಕಾರ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಬಿಜೆಪಿ ಮಂಡಲ ಅಧ್ಯಕ್ಷ ಗೋಡೆಕೆರೆ ಎಂ. ಎಂ.ಜಗದೀಶ್ ಅವರು ಮಾತನಾಡಿ ಸುಮಾರು
28 ರಿಂದ 30 ವರ್ಷಗಳ ಕಾಲ ಬಿಜೆಪಿ ಪಕ್ಷದಲ್ಲಿ ಕಾರ್ಯಕರ್ತನಿಂದ ಹಿಡಿದು ಜವಾಬ್ದಾರಿತ ಸ್ಥಾನಗಳನ್ನು ನಿಭಾಯಿಸಿದ್ದ ನಿಷ್ಠಾವಂತ ಕಾರ್ಯಕರ್ತರುಗಳ ರಕ್ಷಣೆಗೆ ಬಿಜೆಪಿ ಪಕ್ಷ ನಿಲ್ಲದೆ ಸರ್ಕಾರ ಬಂದ ಕೂಡಲೇ ನಾಯಕರುಗಳು ಕಾರ್ಯಕರ್ತರನ್ನ ಕೈಬಿಟ್ಟರು.
ಚುನಾವಣ ಪೂರ್ವದಲ್ಲಿ ಮತದಾರರಿಗೆ ಕೊಟ್ಟಂತ ಭರವಸೆಗಳನ್ನು ನಮ್ಮ ಸರ್ಕಾರ ಬಂದರೂ ಸಹ ಭರವಸೆ ಈಡೇರಿಸಲಾಗದಿದ್ದಕ್ಕೆ ಪಕ್ಷದ ಧೋರಣೆಯನ್ನು ಖಂಡಿಸಿ ಸಾಮೂಹಿಕ ವಾಗಿ ಎಲ್ಲಾ ಹಂತದ ಕಾರ್ಯಕರ್ತರು ರಾಜೀನಾಮೆ ಸಲ್ಲಿಸುತಿದ್ದೇವೆ.
ಮಾಜಿ ತಾಲೂಕ ಪಂಚಾಯತ್ ಉಪಾಧ್ಯಕ್ಷ ಎಬಿ ರಮೇಶ್ ಕುಮಾರ್ ಮಾತನಾಡಿ ಕಳೆದ 15 ರಿಂದ 18 ವರ್ಷಗಳ ಹಿಂದೆ ಸಾಮಾನ್ಯ ಕ್ಷೇತ್ರದಲ್ಲಿ ಗೆದ್ದು ಬಿಜೆಪಿ ಪಕ್ಷ ಕ್ಕೆ ನೆಲೆ ಕಂಡು ಕೊಂಡಿದ್ದೇವೂ, ಆದರೆ ಕೆಜೆಪಿಯಿಂದ ಬಿಜೆಪಿಗೆ ಬಂದಂತಹ ಜೆಸಿ ಮಾಧುಸ್ವಾಮಿಯವರಿಗೆ ಬಿಜೆಪಿ ನಿಷ್ಠಾವಂತ ಕಾರ್ಯಕರ್ತರುಗಳೆಲ್ಲರೂ ಚುನಾವಣೆಯಲ್ಲಿ ಕೈಹಿಡಿದು ಗೆಲ್ಲಿಸಿದ ನಂತರ ಅವರ ವರ್ತನೆಗಳು ಹಾಗೂ ರಾಜ್ಯ ನಾಯಕರುಗಳ ವರ್ತನೆಯಿಂದ ಬೇಸತ್ತು ಮೂಲ ಬಿಜೆಪಿಗರೆಲ್ಲರೂ ರಾಜೀನಾಮೆ ನೀಡುತ್ತಿದ್ದೇವೆ.
ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಪಂಚಾಕ್ಷರಿ ಮಾತನಾಡಿ ಭಾರತೀಯ ಜನತಾ ಪಕ್ಷದ ವಾಜಪೇಯಿ ಮೋದಿ ಯಡಿಯೂರಪ್ಪನವರ ನಾಯಕತ್ವದ ಪಕ್ಷ ಸಿದ್ದಾಂತವನ್ನು ಒಪ್ಪಿ ತಾಲೂಕಿನಲ್ಲಿ ಪಕ್ಷವನ್ನು ಮುನ್ನಡೆಸಿದ್ದೆವು.
ಆದರೆ ಬಿಜೆಪಿಯಿಂದ ಆದಂತಹ ನೋವಿಗೆ ಯಡಿಯೂರಪ್ಪನವರು ಪ್ರಾದೇಶಿಕ ಪಕ್ಷ ಕೆಜೆಪಿಯನ್ನು ಕಟ್ಟಿ ಬಿಜೆಪಿ ಪಕ್ಷವನ್ನು ಸರ್ವನಾಶ ಮಾಡುತ್ತೇನೆಂದು ಪಣತೊಟ್ಟಿದಂತಹ ಸಂದರ್ಭದಲ್ಲೂ ಸಹ ಬಿಜೆಪಿ ಪಕ್ಷದ ಅಭ್ಯರ್ಥಿ ಕೆ ಎಸ್ ಕಿರಣ್ ಕುಮಾರ್ ಅವರಿಗೆ 35,000 ಮತಗಳನ್ನು ಕಲ್ಪಿಸಿದ್ದು, ಆದರೆ 2018ರಲ್ಲಿ ಅನಿವಾರ ಕಾರಣದಿಂದ ಯಡಿಯೂರಪ್ಪ ಮುಖ್ಯಮಂತ್ರಿ ಆಗುವ ಉದ್ದೇಶದಿಂದ ನಮ್ಮ ಸರ್ಕಾರದಲ್ಲಿ ಉನ್ನತ ಸ್ಥಾನಮಾನ ಹಾಗೂ 2023 ರ ಚುನಾವಣೆಗೆ ಕೆ ಎಸ್ ಕಿರಣ್ ಕುಮಾರ್ ಅವರಿಗೆ ಬಿ ಫಾರಂ ಟಿಕೆಟ್ ಕೊಡುತ್ತೇವೆ ಎಂದು ಭರವಸೆ ನೀಡಿದ್ದರು, ಪಕ್ಷದ ಅಭ್ಯರ್ಥಿ ಜೆಸಿಎಂ ಅವರನ್ನು ಗೆಲ್ಲಿಸಿ ಸಚಿವ ಸ್ಥಾನವನ್ನು ಅಲಂಕರಿಸಿ, ಮೇಲೆ ಅವರ ವರ್ತನೆ ಮೂಲ ಬಿಜೆಪಿ ಗರ ಕಾರ್ಯಕರ್ತ ಗಳನ್ನು ಕಡೆಗಣಿಸಿದ್ದು ಅವರ ವರ್ತನೆಗೆ ಬೇಸತ್ತು ನಾಳೆ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾಗುತ್ತಿದ್ದೇವೆ.
ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಬುಳ್ಳೇನಹಳ್ಳಿ ಶಿವಪ್ರಕಾಶ್ ಮಾತನಾಡಿ ಬಿಜೆಪಿ ಪಕ್ಷ ಪ್ರಣಾಳಿಕೆ ಇಲ್ಲಿ ಕೊಟ್ಟಂತೆ ನಡೆದುಕೊಂಡಿಲ್ಲ, ಒರೆಯಾಗಿ ಜನವಿರೋಧಿ ಕೆಲಸ, ಸರ್ಕಾರ 40% ಕಮಿಷನ್ ಸರ್ಕಾರ, ಹಾಗೂ ಬೊಮ್ಮಾಯಿ ಸರ್ಕಾರದಲ್ಲಿ ಯಾವುದೇ ಮಂತ್ರಿಯನ್ನು ಹಿಡಿತದಲ್ಲಿ ಇಡುವುದಕ್ಕೆ ಆಗದೆ ಬ್ರಷ್ಟಾಚಾರಕ್ಕೆ ಹಾಗೂ ಲಂಚಾವತಾರಕ್ಕೆ ಸಾಕ್ಷಿಯಾಗಿ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಸಚಿವ ಜೆ. ಸಿ.ಮಾಧುಸ್ವಾಮಿಯವರ ಕಾಮಗಾರಿಯ ಕಮಿಷನ್ ದಂಧೆ ಹಾಗೂ ಪೈಪ್ಲೈನ್ ದಂಧೆ, ಕಳಪೆ ಕಾಮಗಾರಿಗಳೆ ಸಾಕ್ಷಿ.ಯಾಗಿವೆ ಹಾಗಾಗಿ ಕಾಂಗ್ರೆಸ್ ಪಕ್ಷದ ಜನಸಾಮಾನ್ಯರ ಪಕ್ಷದಲ್ಲಿ ಜನಸೇವೆ ಮಾಡಲಿಕ್ಕೆ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರುತ್ತಿದ್ದೇವೆ ಎಂದರು
ಈ ಸಂದರ್ಭದಲ್ಲಿ ಜೆಸಿಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯ ಪ್ರಭುಸ್ವಾಮಿ, ಮಾಜಿ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಹನುಮ ಜಯ, ಮಣಿಕಂಠ, ಇತರೆ ಕಾರ್ಯಕರ್ತರುಗಳು ಹಾಜರಿದ್ದರು.
ವರದಿ : ಚಿಕ್ಕನಾಯಕನಹಳ್ಳಿ, ಚಂದ್ರು.
