ಪಾವಗಡ : ವಿದ್ಯಾರ್ಥಿಗಳು ಶಿಸ್ತು ಬದ್ದ ಅಧ್ಯಯನ ಹಾಗೂ ಮೌಲ್ಯಗಳನ್ನು ಮೈಗೂಡಿಸಿಕೊಂಡಲ್ಲಿ ಯಶಸ್ಸು ಖಚಿತ ಎಂದು ಡಾ.ಜಿ.ವೆಂಕಟರಾಮಯ್ಯ ತಿಳಿಸಿದರು.
ಪಟ್ಟಣದ ಸ್ವಾಮಿ ವಿವೇಕಾನಂದ ಕಾಲೇಜನಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕೋತ್ಸವ ಕಾಯ೯ಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಇಂದಿನ ವಿದ್ಯಾರ್ಥಿಗಳು ಅತಿ ಬೇಗ ದುಷ್ಚಟಗಳಿಗೆ ಬಲಿಯಾಗುತ್ತಿದ್ದಾರೆ,
ಬೇಡದ ವಿಚಾರಗಳಲ್ಲಿ ಹೆಚ್ಚು ಆಸಕ್ತಿ ಹೊಂದಿ ಅಡ್ಡದಾರಿ ಹಿಡಿಯುತ್ತಿದ್ದಾರೆ , ಓದಿನಲ್ಲಿ ಆಸಕ್ತಿ ಕಳೆದುಕೊಂಡು ಸೋಮಾರಿಗಳಾಗುತ್ತಿದ್ದಾರೆ, ಕುಡಿತ, ಜೂಜು ಮುಂತಾದ ಚಟಗಳಿಗೆ ದಾಸರಾಗಿ ಅಮೂಲ್ಯ ವಿದ್ಯಾರ್ಥಿ ಜೀವನವನ್ನು ಹಾಳು ಮಾಡಿಕೊಳ್ಳುತ್ತಿರುವುದು ಅತ್ಯಂತ ಬೇಸರದ ಸಂಗತಿಯಾಗಿದೆ
ಇದರಿಂದಾಗಿ ಪೋಷಕರು ಸಹ ವಿಚಲಿತರಾಗಿದ್ದಾರೆ, ವಿದ್ಯಾರ್ಥಿ ಜೀವನ ಅತ್ಯಮೂಲ್ಯ
ಅದು ಮತ್ತೆ ಸಿಗದು , ವ್ಯರ್ಥವಾಗಿ ಕಾಲಹರಣ ಮಾಡಿದರೆ ಭವಿಷ್ಯದ ದಿನಗಳು ದುರ್ಗಮವಾಗಿರುತ್ತದೆ ಅದನ್ನರಿತು ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಂಡು ಸಾರ್ಥಕ ಜೀವನವನ್ನು ನೆಡೆಸಲು ವಿದ್ಯಾರ್ಥಿಗಳು ಮುಂದಾಗಬೇಕು,
ಉನ್ನತ ಹುದ್ದೆಗಳಾದ ಐ.ಎ.ಎಸ್. ಐ.ಪಿ.ಎಸ್. ನಂತಹ ಹುದ್ದೆಗಳನ್ನು ಪಡೆಯುವಂತ ಮಕ್ಕಳು ನೀವಾಗಬೇಕು ಎಂದು ತಿಳಿಸಿದರು
ಸಂಸ್ಥೆಯ ಉಪಾಧ್ಯಕ್ಷ ಡಾ.ಶಶಿಕಿರಣ್ ಮಾತನಾಡಿ ವಿದ್ಯಾರ್ಥಿಗಳು ಮೊಬೈಲ್ ಗೀಳಿನಿಂದ ಹೊರಬರಬೇಕು, ಅವಶ್ಯವಿದ್ದಾಗ ಮಾತ್ರ ಬಳಸಬೇಕು
ಸತತ ಪ್ರಯತ್ನ , ನಿರಂತರ ಅಭ್ಯಾಸದಿಂದ ಮಾತ್ರ ನಮ್ಮ ಗುರಿ ಮುಟ್ಟಲು ಸಾಧ್ಯ, ಪರೀಕ್ಷಾ ಸಮಯದಲ್ಲಿ ಆರೋಗ್ಯದ ಜೋತೆಗೆ ಅಧ್ಯಯನ ನಿರತರಾಗುವುದು ಅತಿ ಮುಖ್ಯ ಎಂದು ತಿಳಿಸಿದರು
ಜಿ.ವಿ.ಆರ್. ಕಪ್ ವಿಜೇತ ವಿದ್ಯಾರ್ಥಿ ತಂಡಕ್ಕೆ ಮೆಡಲ್ ಹಾಗೂ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು
ಭೋಜನ ವಿರಾಮದ ಬಳಿಕ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾಯ೯ಕ್ರಮಗಳು ಜರುಗಿದವು,
ಸಿನಿ ಹಾಡುಗಳಿಗೆ ವಿದ್ಯಾರ್ಥಿ ಗಳು ಸಖತ್ ಸ್ಟೆಪ್ ಹಾಕಿ ಕುಣಿದರು
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಲಕ್ಷ್ಮೀ ವೆಂಕಟರಾಮಯ್ಯ, ಪ್ರಾಂಶುಪಾಲ ನಾಗೇಂದ್ರ, ಉಪ ಪ್ರಾಂಶುಪಾಲ ಕೋಟೆ ನಾಗರಾಜು , ಚಂದ್ರಶೇಖರ್, ಜಾನಕೀರಾಮ್, ಶಿವಕುಮಾರ್, ಪಾಂಡುರಂಗಯ್ಯ, ಸುನೀಲ್, ಶ್ರೀನಾಥ್, ಸುರೇಶ್, ರಮೇಶ್, ರವಿಕಾಂತ್, ರಾಜೇಶ್ವರಿ, ಅಂಬಿಕಾ, ನರೇಶ್, ಸುದರ್ಶನ್, ಸುಬ್ರಹ್ಮಣ್ಯ, ಜಗದೀಶ್, ಸುಕನ್ಯ, ರಂಗಸ್ವಾಮಿ, ಧನುಂಜಯ, ಶ್ರೀಶಾಲಾ ಸ್ಕೂಲ್ ಪ್ರೀನ್ಸಿಪಾಲ್, ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಜರಿದ್ದರು
ವರದಿ: ಶ್ರೀನಾಥ್, ಪಾವಗಡ
