ಕಾನೂನು ಸಚಿವರ ಕ್ಷೇತ್ರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಮಾಜಿ ಶಾಸಕ ಸಿ. ಬಿ. ಸುರೇಶ್ ಬಾಬು ಆರೋಪ.

 ಚಿಕ್ಕನಾಯಕನಹಳ್ಳಿ : ಪಟ್ಟಣದಲ್ಲಿ ಇಟ್ಟಿಗೆ ಗಿರೀಶ್ ಎಂಬವ ಪುಡಾರಿ ಹಾಗೂ ಅವರ ಬೆಂಬಲಿಗರ ಹಾವಳಿ ಪಟ್ಟಣದಲ್ಲಿ ಹೆಚ್ಚಾಗಿದೆ.



ಕಾನೂನು ಸಚಿವರ ಕ್ಷೇತ್ರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಹಲ್ಲೆ ಮಾಡಿರುವ ಅಪರಾಧಿಗಳಿಗೆಲ್ಲ ಪೋಲಿಸರೇ ಪೂರ್ಣ ಪ್ರೊಟೆಕ್ಷನ್ ನೀಡುತ್ತಿರುವುದು ನೋಡಿದರೆ ಪೊಲೀಸ್ ಇಲಾಖೆ ಸಚಿವರ ಕೈಗೊಂಬೆಯಾಗಿದೆ ಎಂದು ಮಾಜಿ ಶಾಸಕ ಸಿ. ಬಿ. ಸುರೇಶ್ ಬಾಬು ಆರೋಪಿಸಿದರು.



 ಪಟ್ಟಣದ ಗೃಹ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ 

ಸಂವಿಧಾನದ ಮೂಲಕ ಅಂಬೇಡ್ಕರ್ ನೀಡಿರುವ ಕಾನೂನನ್ನು ಧೂಳಿಗೆ ತೂರುವ ಕೆಲಸ ಮಾಡುತ್ತಿರುವ ಕಾನೂನು ಸಚಿವ ಜೆ. ಸಿ.ಮಾಧುಸ್ವಾಮಿ ದ್ವೇಷ ರಾಜಕೀಯ ಮಾಡಿಸುವಲ್ಲಿ ಕ್ಷೇತ್ರದಲ್ಲೇ ಪುಡಾರಿಗಳ, ದುರಾಡಳಿತಕ್ಕಾಗಿ ತಮ್ಮ ಪಡೆಗೆ ಬೆಂಬಲ ನೀಡುತ್ತಿರುವುದು ಕ್ಷೇತ್ರದ ಸಾಮಾನ್ಯ ಜನಕ್ಕೆ ನ್ಯಾಯ ಸಿಗದಂತಾಗಿದೆ ಎಂದು ತಿಳಿಸಿದರು.


ನಮ್ಮ ಬೆಂಬಲಿಗರಾಗಿ ವಾಟ್ಸ್ ಪ್,ಸ್ಟೇಟಸ್ ನಲ್ಲಿ ನಮ್ಮ ವಿಡಿಯೋ ಹಾಕಿಕೊಂಡಿದಕ್ಕೂ ಹಲ್ಲೆ, ಬೆದರಿಕೆ ಹಾಕುತ್ತ ನಮ್ಮ ಕಾರ್ಯಕರ್ತರಾದ ದೇವರಾಜು, ಮೋಹನ್ ಎಂಬುವವರ ಮೇಲೆ . ಈ ವಾರದಲ್ಲೇ ಮೂರು ಬಾರಿ ಹಲ್ಲೆ ಪ್ರಕರಣಗಳು ನಡೆದರೂ ರೌಡಿಸಂ ಗೆ ಪೋಲಿಸರೇ ಪ್ರೊಟೆಕ್ಷನ್ ನೀಡುತ್ತಿದ್ದಾರೆ..


 ಪೋಲಿಸ್ ಇಲಾಖೆ ಕಾನೂನು ಸುವ್ಯವಸ್ಥೆ ಕಾಪಾಡದೆ,ಯಾವ ಕಾನೂನು ಕ್ರಮಗಳನ್ನು ವ್ಯಕ್ತಿಯ ಮೇಲೆ ಕೈಗೊಳ್ಳದೆ ಸಚಿವರ ಕೈಗೊಂಬೆ ಯಾಗಿರುವುದು ನಾಚಿಕೆ ಗೇಡು.


ಅನ್ಯಾಯಕ್ಕೆ ದೌರ್ಜನ್ಯಕ್ಕೆ ಒಳಗಾದ ವ್ಯಕ್ತಿಯ ರಕ್ಷಣೆ, ನ್ಯಾಯ ಕಲ್ಪಿಸಬೇಕಿರುವ ಪೊಲೀಸ್ ಇಲಾಖೆ, ದೌರ್ಜನ್ಯ ಮಾಡಿದ ವ್ಯಕ್ತಿಗೆ ಪ್ರೊಟೆಕ್ಷನ್ ನೀಡಿ ಬೆಂಬಲಿಸುತ್ತಿರುವುದು ಎಲ್ಲೋ ಒಂದು ಕಡೆ ಕ್ಷೇತ್ರದಲ್ಲಿ ಸಚಿವರ ಪ್ರಭಾವಕ್ಕೆಅವರುಗಳಬೆಂಬಲಿಗರ ವರ್ತನೆಯಿಂದಾಗಿ ತಾಲ್ಲೂಕಿನ ಸಾಮಾನ್ಯರಿಗೆ ರಕ್ಷಣೆ,ನ್ಯಾಯ ಸಿಗುತ್ತಿಲ್ಲ ಎಂದು ಆರೋಪಿಸಿದರು.

 *ಪೋಲೀಸರ ವೈಫಲ್ಯ.* 

 ಗಲಾಟೆಗೆ ಕಾರಣನಾದ ವ್ಯಕ್ತಿಯನ್ನು ಎಸ್ಕಾರ್ಟ್ ನೀಡಿ ರಕ್ಷಣೆ ನೀಡಿದಂತೆ ಮನೆಯಿಂದ ಕರೆದುಕೊಂಡು ಬರುತ್ತಾರೆ, ಕರೆದುಕೊಂಡು ಹೋಗಿ ಮನೆಗೆ ಬಿಡುತ್ತಾರೆ, , ತಾಲ್ಲೂಕಿನ ಪೋಲಿಸ್ ವ್ಯವಸ್ಥೆ , ಕಾನೂನು ವ್ಯವಸ್ಥೆ ನೋಡಿದರೆ ಕಾನೂನು ಕ್ಷೇತ್ರದಲ್ಲಿ ಕಾನೂನು ಎಲ್ಲಿಗೆ ಬಂದು ತಲುಪಿದೆ ಅರ್ಥವಾಗುತ್ತಿಲ್ಲ ಹಾಗೂ ಈಗಾದರೆ ಜನಸಾಮಾನ್ಯರ ಸ್ಥಿತಿ ಏನಾಗಲಿದೆ.


ಹರೀಶ ಎಂಬ ವ್ಯಕ್ತಿಗೆ ಹಲ್ಲೆಯಾಗಿರುವ ಬಗ್ಗೆ ಪ್ರಕರಣ ದಾಖಲಿಸಲು ಹೋದರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳದೆ ಹಿಂದೇಟು ಹಾಕುತ್ತಿರುವ ಪೊಲೀಸರು ಎಂದರು.

 *ಗಂಭೀರವಾಗಿರಿ, ಇಲ್ಲಾಂದ್ರೆ ಹುಷಾರ್ :* ನಿಮ್ಮ ಪಕ್ಷದ, ನಾಯಕರ ಪರವಾಗಿ ನೀವು ಕೆಲಸ ನಿರ್ವಹಿಸಿ, ಅದನ್ನು ಬಿಟ್ಟು ನಮ್ಮ ಪಕ್ಷದ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸುವುದು ಹಾಗೂ ನಮ್ಮ ಊರಿನ ಮರ್ಯಾದೆ ಹಾಳು ಮಾಡುತ್ತಿರುವ ಕೆಲ ಪುಂಡ ಪೋಕರಿಗಳಿಗೆ ನಮ್ಮಗಳ ತಾಳ್ಮೆಯನ್ನು ಕೆಣಕದಿರಿ, ಹುಷಾರಾಗಿರಿ ಎಂದು ಮಾಜಿ ಶಾಸಕ ಸಿ.ಬಿ.ಸುರೇಶ್ ಬಾಬು ಹಲ್ಲೆ ಮಾಡಿದವರಿಗೆ ವಾರ್ನಿಂಗ್ ಮಾಡಿದರು.


 ರಾಜಕಾರಣ ನಿಂತ ನೀರಲ್ಲ ರಾಜಕೀಯದಲ್ಲಿ ವ್ಯತ್ಯಾಸ ಆಗುತ್ತಿರುತ್ತವೆ, ಸನ್ನಿವೇಶಕ್ಕೆ ತಕ್ಕಂತೆ, ಯಾವ ಯಾವ ತೀರ್ಮಾನ ಬದಲಾವಣೆ ಆಗುತ್ತಿರುತ್ತವೆ ಎಂದು ಎಚ್ಚರಿಸಿದರು.


 ಗಿರೀಶ್ ಎಂಬುವವರ ತಂದೆಯವರು ಹಲ್ಲೆಯಾದ ಸಂದರ್ಭಗಳಲ್ಲಿ ಅವರಿಗೆ ತಿಳಿಹೇಳಿದ್ದರೆ ಇಂತಹ ಘಟನೆಗಳು ಜರುಗುತ್ತಿರಲಿಲ್ಲ, ಸರಿತಪ್ಪು ಬುದ್ದಿವಾದ ಹೇಳಬೇಕಿತ್ತು ಆದರೆ ಮಗನ ಬೆಂಬಲಿಸಿರುವುದಕ್ಕೆ ಇಷ್ಟೆಲ್ಲ ಅಹಿತಕರ ಘಟನೆ ಆಗಿದೆ ಎಂದರು.


 ಈ ಸಂದರ್ಭದಲ್ಲಿ ಪುರಸಭಾಧ್ಯಕ್ಷೆ ಪುಷ್ಪ, ಸದಸ್ಯೆ ರೇಣುಕಮ್ಮ, ಪೂರ್ಣಿಮ, ಮುಖಂಡರುಗಳಾದ ಸಿ.ಎಸ್.ರಮೇಶ್, ಸಿ.ಬಿ.ರೇಣುಕಸ್ವಾಮಿ, ದೊರೆಮುದ್ದಯ್ಯ, ಎಂ.ಎನ್.ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.


ವರದಿ : ಚಿಕ್ಕನಾಯಕನಹಳ್ಳಿ ಚಂದ್ರು 

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು