ಶಿರಾ:-ನಾನು ಕಾಂಗ್ರೆಸ್ ಪಕ್ಷದಲ್ಲೇ ಇರುವೆ ಎಲ್ಲಿಗೂ ಹೋಗೋ ಮಾತೇ ಇಲ್ಲ. ಕಾಂಗ್ರೆಸ್ ಹಿರಿಯ ಮುಖಂಡ ಟಿ.ಬಿ.ಜಯಚಂದ್ರ ಸ್ಪಷ್ಟಪಡಿಸಿದ್ದಾರೆ.
ಶಿರಾ ತಾಲ್ಲೂಕು ಹುಲಿಕುಂಟೆ ಹೋಬಳಿ ಬರಗೂರು ನಲ್ಲಿ ಕಾಂಗ್ರೇಸ್ ಪಕ್ಷದ ಬೂತ್ ಮಟ್ಟದ ಕಾರ್ಯಕ್ರಮ ಮಾಜಿ ಸಚಿವ ಟಿ ಬಿ ಜಯಚಂದ್ರ ಮಾತನಾಡುತ್ತಾ ಇತ್ತೀಚಿಗೆ ಕೆಲವರು ಸುಳ್ಳು ವದಂತಿಗಳನ್ನು ಹರಡುವ ಪರಿ ಬೆಳೆದುಕೊಂಡು
ಇದ್ದಾರೆ ..
ನಾನು ಕಾಂಗ್ರೆಸ್ ಪಕ್ಷದಲ್ಲೇ ಇರುವೆ. ಹೋಗೋ ಮಾತೇ ಇಲ್ಲ.
ಅಲ್ಲಿಗೆ ಮತ್ತು ಇಲ್ಲಿಗೆ ಸೇರ್ಪಡೆಯಾಗುತ್ತಾರೆ ಎಂಬ ಮಾತು ಕ್ಷೇತ್ರದಲ್ಲಿ
ಕೇಳಿ ಬರುತ್ತಿತ್ತು. ಈ ಬಗ್ಗೆ ' ಮಾತನಾಡಿದ ಅವರು, ''
ನನ್ನ ನಿಷ್ಠೆ ಏನಿದ್ದರೂ ಅದು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ,'' ಎಂದರು.
''ಕಾಂಗ್ರೆಸ್ ಬಿಡುವ ಪ್ರಶ್ನೆಯೇ ಇಲ್ಲ.
‘ನಾನು ಮಾತುಗಾರನಲ್ಲ, ಕೆಲಸಗಾರ. ಸರ್ಕಾರದಿಂದ ಕೋಟ್ಯಂತರ ಅನುದಾನ ತಂದು ಶಿರಾ ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದೇನೆ’
‘ಮದಲೂರು ಕೆರೆಗೆ ನೀರು ಹರಿಸಲು ಸಾಧ್ಯವೇ ಇಲ್ಲ ಎಂಬ ಮಾತು ಚಾಲ್ತಿಯಲ್ಲಿದ್ದ ಸಮಯದಲ್ಲಿ ಕೇಂದ್ರ ಸರ್ಕಾರದ ಅನುದಾನ ತಂದು ಅದನ್ನು ಸಾಧ್ಯವಾಗಿಸಿದ್ದೆ.
ಹೇಮಾವತಿ ನಾಲಾ ವಿಚಾರದಲ್ಲಿ ಅಮ್ಮನುನಾನೆ ಅಪ್ಪನ್ನು ನಾನೆ ನಾನು ನಾಲೆ ನಿರ್ಮಾಣ ಕಾರ್ಯ ಮಾಡದಿದರೆ ಇಂದು ನೀರೆ ಹರಿಯುತ್ತಿರಲಿಲ್ಲ
ರಾಜ್ಯದಲ್ಲಿ ಮತ್ತೆ ಅಧಿಕಾರ ನೀಡಿದರೆ ತಾಲ್ಲೂಕಿನ ಸಮಸ್ಯೆಗೆ ದನಿಯಾಗುತ್ತೇನೆ’ ಎಂದರು.
ಬಿಜೆಪಿಗೆ ಭ್ರಷ್ಟ ಸರ್ಕಾರವೆಂಬ ಹೆಸರಿದೆ. ಅವರು ಅವರದ್ದೇ ಆದ ಸಿದ್ಧಾಂತವನ್ನು ರಾಜಕೀಯದಲ್ಲಿ ಪಾಲಿಸುತ್ತಾರೆ. ಹೀಗಾಗಿ ಅವರು ಈ ಬಾರಿಯ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬರುವುದಿಲ್ಲ. ಅಲ್ಲದೇ ರಾಜ್ಯ ಮತ್ತು ರಾಷ್ಟ್ರವನ್ನು ಕಾಪಾಡಬೇಕಾದರೆ ಅದು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ" .
"ದೇಶದಲ್ಲಿ ಎಲ್ಲಾ ವಸ್ತುಗಳ ಬೆಲೆ ಹೆಚ್ಚಾಗಿದೆ. ಆದಾಯ ಮಾತ್ರ ಹಾಗೆಯೇ ಇದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಪ್ರತಿ ತಿಂಗಳು ಮನೆಯೊಡತಿಯ ಖಾತೆಗೆ ಪ್ರತಿ ತಿಂಗಳು 2000 ರೂಪಾಯಿ ಕೊಡುವ ತೀರ್ಮಾನ ಮಾಡಿದ್ದೇವೆ. 200 ಯೂನಿಟ್ ಕರೆಂಟ್ ಉಚಿತವಾಗಿ ನೀಡುತ್ತೇವೆ. ಈ ಬಗ್ಗೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಗ್ಯಾರಂಟಿ ಚೆಕ್ಗೂ ಸಹಿ ಮಾಡಿದಾರೆ. ಅದನ್ನು ಪ್ರತಿಮನೆಗೆ ತಲುಪಿಸುತ್ತೆವೆ
ನಾವು ಹೇಳಿದಂತೆ ನಡೆಯದೇ ಇದ್ದಲ್ಲಿ ಮುಂದೆ ನಿಮ್ಮ ಮನೆಗೆ ಮತ ಕೇಳಿಕೊಂಡು ಬರುವುದಿಲ್ಲ.
ಉಪ ಚುನಾವಣಾ ಯಲ್ಲಿ ರಾಜ್ಯ ಸರ್ಕಾರದ ಎಲ್ಲರೂ ಬಂದು ಇಲ್ಲದ ಭರವಸೆಯನ್ನು ನೀಡಿದರು ಅದು ಇಂದಿಗೂ ಕಾರ್ಯರೂಪಕ್ಕೆ ಬಂದಿಲ್ಲ ಎಂದರು
ಕಾರ್ಯಕ್ರಮ ದಲ್ಲಿ
ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಅರ್.ಮಂಜುನಾಥ್,
ತಾಲೂಕು ಕಾಂಗ್ರೆಸ್ ಘಟಕದ ಅಧ್ಯಕ್ಷ , ಬರಗೂರು ನಟರಾಜ್ ಹಾಗೂ ವಿವಿಧ ಮುಖಂಡರುಹಾಜರಿದ್ದರು.
ವರದಿ : ಶಿರಾ ಶ್ರೀಮಂತ್.

