ಚಿಕ್ಕನಾಯಕನಹಳ್ಳಿ : ಎಸ್ಸಿ ಮಹಿಳಾ ಸ್ವ- ಸಹಾಯ ಸಂಘದ ಮಹಿಳೆಯರಿಗೆ ಸಹಾಯಧನ ವಿತರಣೆ.
2022- 23ನೇ ಸಾಲನ್ನು ಜೀವನೋಪಾಯ ವರ್ಷವನ್ನಾಗಿ ಆಚರಣೆ.ಸ್ವ ಸಹಾಯ ಸಂಘಗಳು ಸ್ವವಲಂಬಿಗಳಾಗಿ.
ವಿಶೇಷ ಕೇಂದ್ರೀಯ ನೆರವು ಯೋಜನೆಯಡಿ ಪರಿಶಿಷ್ಟ ಜಾತಿ ಹಾಗೂ ಸ್ತ್ರೀ ಸಾಮರ್ಥ್ಯ ಯೋಜನೆ 23 ಪಂಚಾಯತಿಯ 99 ಮಹಿಳಾ ಸ್ವಸಹಾಯ ಸಂಘ, 387ಫಲಾನುಭವಿಗಳಿಗೆ ಮಂಗಳವಾರ ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ಸಹಾಯಧನದ ಚೆಕ್ ಹಾಗೂ ಸಾಲ ಮಂಜೂರಾತಿ ಆದೇಶಪತ್ರಗಳನ್ನು ವಿತರಿಸಿದರು.
ಪಟ್ಟಣದ ತೀನಂಶ್ರೀ ಭವನದಲ್ಲಿ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಪ್ರಧಾನಮಂತ್ರಿ ಅನುಸೂಚಿತ ಜಾತಿ ಅಭ್ಯುದಯ ಯೋಜನೆ (PMAJAY,) ಪರಿಶಿಷ್ಟ ಜಾತಿ ಉಪ ಯೋಜನೆಗೆ (SCSP)ವಿಶೇಷ ಕೇಂದ್ರೀಯ ನೆರವು (SSY) ಸಮಾಜ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಸಂಜೀವಿನಿ-ತಾಲೂಕು ಅಭಿಯಾನ ನಿರ್ವಹಣ ಘಟಕ ಇವುಗಳ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಸಮಾರಂಭಕ್ಕೆ ದೀಪ ಬೆಳಗುವ ಮೂಲಕ ಚಾಲನೆ ನೀಡಿದ ಸಚಿವರು, ಸರ್ಕಾರ ನೀಡುವ ಸಾಲ ಸೌಲಭ್ಯಗಳನ್ನು ಬಳಸಿಕೊಂಡು ಮಹಿಳೆಯರು ಗುಡಿ ಕೈಗಾರಿಕೆಗಳನ್ನು ಸ್ಥಾಪಿಸಿಕೊಳ್ಳುವ ಮೂಲಕ ಆರ್ಥಿಕ ಪ್ರಗತಿ ಸಾಧಿಸಬೇಕು. ಈ ಮೂಲಕ ಕುಟುಂಬದ ನಿರ್ವಹಣೆಗೆ ಕೈಜೋಡಿಸಬೇಕು ಎಂದು ತಿಳಿಸಿದರು.
ಒಬ್ಬರ ದುಡಿಮೆಯಲ್ಲಿ ಕುಟುಂಬ ನಿರ್ವಹಣೆ ಮಾಡುವುದು ಕಷ್ಟ.
ಸ್ತ್ರೀ ಸಬಲೀಕರಣದ ಮೂಲಕ ಕುಟುಂಬಗಳ ಆದಾಯ ಮೂಲ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳನ್ನು ಬಳಸಿಕೊಂಡು ಮಹಿಳೆಯರು ದುಡಿಮೆಯಲ್ಲಿ ತೊಡಗಿಕೊಳ್ಳಬೇಕು ಎಂದು ತಿಳಿಸಿದರು.
ಉತ್ತಮವಾಗಿ ಕೆಲಸ ಮಾಡುವ ಸ್ತ್ರೀ ಶಕ್ತಿ ಸಂಘಗಳಿಗೆ 1 ಲಕ್ಷ ರೂ.ವರೆಗೆ ಸಾಲ ನೀಡುವ ಯೋಜನೆ ಜಾರಿಗೆ ತಂದಿದ್ದೇವೆ. ಪ್ರತಿ ಗ್ರಾಪಂನ 2 ಸ್ತ್ರೀ ಶಕ್ತಿ ಸಂಘಗಳಿಗೆ ತಲಾ 1 ಲಕ್ಷ ರೂ. ಸಾಲ ಕೊಡಿಸಲಾಗುತ್ತಿದೆ. ಅದೇ ರೀತಿ ಯುವಕ ಸಂಘಗಳ ಮೂಲಕ ಯುವಕರು ಉದ್ಯಮಗಳ ಸ್ಥಾಪನೆಗೆ ನೆರವು ನೀಡುವ ಯೋಜನೆ ಕಾರ್ಯಗತಗೊಳಿಸಲಾಗುತ್ತಿದೆ ಎಂದರು.
ತಾ.ಪಂ. ಇಒ ವಸಂತಕುಮಾರ್ ಮಾತನಾಡಿ, ವಿಶೇಷ ಕೇಂದ್ರೀಯ ನೆರವು ಯೋಜನೆಯಡಿ ಪರಿಶಿಷ್ಟ ಜಾತಿ ಮಹಿಳೆಯರಿಗೆ 1೦ ಸಾವಿರ ರೂ. ಸಹಾಯಧನದೊಂದಿಗೆ 25 ಸಾವಿರ ರೂ.ಗಳನ್ನು ಬ್ಯಾಂಕ್ಗಳ ಮೂಲಕ ಸಾಲ ಕೊಡಿಸಲಾಗುತ್ತಿದೆ ಎಂದರು.
ರಾಜ್ಯದ್ಯಂತ *2022 23ನೇ ಸಾಲನ್ನು ಜೀವನೋಪಾಯ ವರ್ಷವನ್ನಾಗಿ ಆಚರಣೆ* ಮಾಡುತ್ತಿದ್ದು, ನಮ್ಮ ಸಂಜೀವಿನಿ ಸ್ವಸಹಾಯ ಸಂಘದ ಉತ್ಪನ್ನಗಳನ್ನು ಮೇಲ್ದರ್ಜೆಗೆ ಏರಿಸುವ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಗಿದೆ.
**ಸ್ತ್ರೀ ಸಾಮರ್ಥ್ಯ ಯೋಜನೆಯಡಿ*SSY* ಗುಡಿ ಕೈಗಾರಿಕೆಗಳನ್ನು ಸ್ಥಾಪನೆ ಮಾಡಿಕೊಂಡು ಸ್ವ-ಸಹಾಯ ಸಂಘದಲ್ಲಿನ ಸೂಕ್ಷ್ಮ ಮತ್ತು ಕಿರು ಬಂಡವಾಳ ಹೂಡಿಕೆ ಮಾಡಿಕೊಂಡು ಕೃಷಿಯೇತರ ಚಟುವಟಿಕೆ ಮಾಡುತ್ತಿರುವ ಮಹಿಳೆಯರಿಗೆ ಉದ್ಯಮ ಉತ್ತೇಜನ ನೀಡಲು,ಹೊಸ ಮಾರುಕಟ್ಟೆ ವ್ಯವಸ್ಥೆ, ಪರಿಣಿತರಿಂದ ತರಬೇತಿ, ಸೌಲಭ್ಯ ನೀಡುವುದು.ತಾಂತ್ರಿಕ ನೆರವು, ಬ್ರಾಂಡಿಂಗ್ ಮಾಡುವುದು, ssy ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದರು.
ಹುಳಿಯಾರ್ ಹೋಬಳಿ
ಯಳನಡು ಗ್ರಾಮ ಪಂಚಾಯತ್ ಸಿದ್ದಶ್ರೀ ಮಹಿಳಾ ಸ್ವ ಸಹಾಯ ಸಂಘದ ಸದಸ್ಯೆ *ವಿನುತಾ* ಮಾತನಾಡಿ ನಮ್ಮ ಗ್ರಾಮದಲ್ಲಿ ಕೇವಲ 50 ಸಾವಿರ ರೂಗಳ ಬಂಡವಾಳದಲ್ಲಿ ಸಣ್ಣ ಉದ್ದಿಮೆಯಾಗಿ ಪೆನಾಯಿಲ್,ಆಸಿಡ್, ಸೋಪ್ ಆಯಿಲ್ ತಯಾರು ಮಾಡುತ್ತಿದ್ದು , ನಮ್ಮ ಉತ್ಪನ್ನವನ್ನು ಗುರುತಿಸಿ ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸುವ ಉದ್ದೇಶದಿಂದ ಸರ್ಕಾರದ *ಸ್ತ್ರೀ ಸಾಮರ್ಥ್ಯ ಯೋಜನೆ ssy ಯೋಜನೆ* ಅಡಿ 3 ಲಕ್ಷ ರೂಗಳ ಅನುದಾನ ನೀಡಿ ಇಂದು 12 ಜನರ ಶ್ರಮದಿಂದ ಉತ್ತಮ ಉತ್ಪಾದನೆ ಹಾಗೂ ಮಾರುಕಟ್ಟೆ ಚೆನ್ನಾಗಿ ನಡೆಯುತ್ತಿದೆ ಸರ್ಕಾರದ ಇಂತಹ ಯೋಜನೆಗಳು ಗ್ರಾಮೀಣ ಮಹಿಳೆಯರಲ್ಲಿ ಹೊಸ ಚೈತನ್ಯವನ್ನು ಮೂಡಿಸುತ್ತಿವೆ ಎಂದರು.
ಮಹಿಳಾ ಸಂಘದ ಹಿರಿಯ ಸದಸ್ಯಯಿನಿ ಲಕ್ಕಮ್ಮ ಮಾತನಾಡಿ ಶ್ರೀ ಶಕ್ತಿ ಸಂಘದಲ್ಲಿ ವೈಯಕ್ತಿಕವಾಗಿ 10,000 ಸಹಾಯಧನವನ್ನು ನೀಡುವುದರಿಂದ ಕುರಿ ಮೇಕೆ, ಹಸು ಖರೀದಿಯಿಂದ ಡೈರಿಗೆ ಹಾಲು ಹಾಕುವುದರಿಂದ ಕುಟುಂಬದ ನಿರ್ವಹಣೆಗೆ ಅನುಕೂಲವಾಗುತ್ತೆ ಎಂದರು.
ತಾಲೂಕ್ ಸಂಜೀವಿನಿ ಸಂಘದ ವಲಯ ಮೇಲ್ವಿಚಾರಕಿ *ಯಮುನ* ಮಾತನಾಡಿ ವಿಶೇಷ ಕೇಂದ್ರೀಯ ನೆರವು ಯೋಜನೆ ಅಡಿ ಪರಿಶಿಷ್ಟ ಜಾತಿ ಸ್ವಸಹಾಯ ಮಹಿಳಾ ಸಂಘದ ಸದಸ್ಯೆರಿಗೆ ಏಪ್ರಿಲ್ 2020 ರ ನಂತರ 25,000 ತೆಗೆದುಕೊಂಡು ಯಾವುದಾದರೂ ಜೀವನೋಪಾಯ ಚಟುವಟಿಕೆಯನ್ನು ಅವಲಂಬಿತ ಸಹಾಯ ಸಂಘದ ಮಹಿಳೆಯರಿಗೆ ಪ್ರೋತ್ಸಾಹ ಧನವಾಗಿ 10,000 ಕೊಡುವುದಾಗಿದೆ.
ನಮ್ಮ ತಾಲೂಕಿನಲ್ಲಿ 1232 ಸ್ವಸಹಾಯ ಸಂಘ 387 ಸ್ವ - ಸಹಾಯ ಸಂಘದವರಿಗೆ ಮೊದಲ ಹಂತದಲ್ಲಿ ಚೆಕ್ ವಿತರಣಾ ಕಾರ್ಯಕ್ರಮವನ್ನು 2022 -23 ನೇ ಸಾಲನ್ನು ಜೀವನೋಪಾಯ ವರ್ಷ ಎಂದು ಘೋಷಣೆ ಮಾಡಿರುವ ಸರ್ಕಾರದಿಂದ ಸಂಜೀವಿನಿ ಒಕ್ಕೂಟದ 225 ಎಸ್ ಹೆಚ್ ಜಿ ಸ್ತ್ರೀ ಮಹಿಳೆಯರಿಗೆ ಯೋಜನೆ ಅಡಿ ಚೆಕ್ ನೀಡುತ್ತಿದ್ದೇವೆ.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತಿ ಸಂಜೀವಿನಿ ಒಕ್ಕೂಟದ ಯಮುನಾ, ರವಿಕುಮಾರ್, ರಮೇಶ್ ವಿಜಯ್ ಸುಬ್ಬರಾಜು ಐ ಇ ಸಿ ರಮ್ಯಾ ಸೇರಿದ್ದಂತೆ ಇತರರು ಭಾಗವಸಿದ್ದರು.
ವರದಿ ಚಿಕ್ಕನಾಯಕನಹಳ್ಳಿ ಚಂದ್ರು.