ಬದುಕು ಕಲಿಸಿದ ನೆಚ್ಚಿನ ಶಿಕ್ಷಕನಿಗೆ ಅವಿಸ್ಮರಣೀಯ ಬೀಳ್ಕೊಡುಗೆ..!

 ಶಿರಾ: ತನ್ನ ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ಮಾತ್ರ ಟೀಚರ್ ಆಗಿರುವುದಿಲ್ಲ. ಬದಲಾಗಿ ಆ ಗುರುವಿನ ಸ್ಥಾನ ಅಂಬೆಗಾಲಿಡುತ್ತ ಕಲಿಕಾ ಕೇಂದ್ರಕ್ಕೆ ಬಂದ ವಿಧ್ಯಾರ್ಥಿಗಳಿಗೆ ಅರಿವಿನ ಜ್ಞಾನದ ದಾರೆ ಎರೆದು ಒಂದು ವ್ಯಕ್ತಿತ್ವ ವನ್ನು ತುಂಬುವಾತ.


 ತಿಳುವಳಿಕೆಯ ಸಾಂಸ್ಕೃತಿಕ ಹಿರಿಮೆಯನ್ನು ಹೊಂದಿರುವ ಗುರುವಿಗೆ ವಿಶೇಷ ಗೌರವ ಒಂದು ಗ್ರಾಮದ ಶಿಕ್ಷಕ ತನ್ನ ಶಾಲೆಯ ಮಕ್ಕಳಿಗೆ

 ಶಿಕ್ಷಕನಾಗಿ ಇರುವುದಿಲ್ಲ ಬದಲಾಗಿ ಗ್ರಾಮಕ್ಕೆ ಮಾರ್ಗದರ್ಶಕ ನಾಗಿ ಇರುತ್ತಾನೆ ಎಂಬ ಮಾತಿದೆ. ಅಂತಹಾ ಶಿಕ್ಷಕ ಬೇರೆ ಕಡೆ ವರ್ಗಾವಣೆ ಯಾದರೆ ಆ ಶಿಕ್ಷಕನಿಗರ ಅವಿಸ್ಮರಣೀಯ ಬೀಳ್ಕೊಡುಗೆ.

 ತಾಲ್ಲೂಕಿನ ಚಂಗಾವರ ಪ್ರೌಢ ಶಾಲೆಯ ಸಂತೋಷ್ ಕಾಗಿನಕರ್

ಸಮಾಜ ವಿಜ್ಞಾನ ಶಿಕ್ಷಕ ಸುಮಾರು

10 ವರ್ಷ ಸೇವೆಯನ್ನು ಸಲಿಸಿ

ಕೆ.ಪಿ.ಎಸ್ ಚಿಕ್ಕನಳ್ಳಿ ಶಿರಾ ತಾ. ಶಾಲೆಗೆ ವರ್ಗಾವಣೆ ಯಾದ ಕಾರಣ 

ಸರಕಾರಿ ಪ್ರೌಢಶಾಲೆ ಶಿಕ್ಷಕರನ್ನು ಇಂದು ತುಂಬ ಹೃದಯದಿಂದ ಬೀಳ್ಕೊಡಲಾಯಿತು..

ಹೌದು ಅದೊಂದು ಅವಿಸ್ಮರಣೀಯ ನಿಸ್ವಾಥ೯ ಸೇವೆಗೆ ಮೂಡಿದ ಸಾಥ೯ಕತೆಯ ಭಾವ ಅದಾಗಿತ್ತುಅತ್ಯಂತ ಶಿಸ್ತಿನ ಶಿಕ್ಷಕರಾದ 

ಸಂತೋಷ್ ಕಾಗಿನಕರ್ ಎಂದರೆ ಮಕ್ಕಳಿಗೆ ಅಚ್ಚುಮೆಚ್ಚು, ಅಲ್ಲದೆ ಸುತ್ತಮುತ್ತಲ ಸುಮಾರು ಹಳ್ಳಿಗಳಲ್ಲು ಅತ್ಯಂತ ಪ್ರೀತಪಾತ್ರ ಶಿಕ್ಷಕರಾಗಿದ್ದರು. ಶಾಲೆಯಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಟ್ಟು ಪ್ರತಿವರ್ಷ ಶಾಲೆಯಲ್ಲಿ ಉತ್ತಮ ಫಲಿತಾಂಶ ಬರುವಂತೆ ನೋಡಿಕೊಳ್ಳುತ್ತಿದ್ದರು

ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮಕ್ಕೆ ಪ್ರಧಾನಮಂತ್ರಿಯವರೊಂದಿಗೆ ಆಯ್ಕೆಯಾಗಿದ್ದ ಮಗುವಿಗೆ ಮಾರ್ಗದರ್ಶನ‌ಮಾಡಿದ ಕೀರ್ತಿ.

ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ, ರಾಷ್ಟ್ರಮಟ್ಟದ ಸಂಪನ್ಮೂಲ ವ್ಕಕ್ತಿಯಾಗಿ ಕಾರ್ಯನಿರ್ವಹಣೆ.

ಪಠ್ಯಪುಸ್ತಕ ರಚನಾ ಸಮಿತಿ ಸದಸ್ಯನಾಗಿ ಕಾರ್ಯನಿರ್ವಹಣೆ ಮಾಡಿ ವಿದ್ಯಾರ್ಥಿಗಳ ಪಾಲಿಗೆ ಪ್ರೀತಪಾತ್ರ ಶಿಕ್ಷಕರಾಗಿದ್ದರು.


ವಷ೯ಗಳ ಸೇವೆ ಸಲ್ಲಿಸಿದ ಶೀಲಾ ಬಿ.ಜೇ ಅವರಿಗೆ ವಿಶೇಷ ಗೌರವ ಹಾಗೂ ಸಮ್ಮಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಶಾಲೆಯ ಹಳೆಯ ಮತ್ತು ಪ್ರಸ್ತುತ

ವಿದ್ಯಾರ್ಥಿ ಗಳು ಗ್ರಾಮಸ್ಥರು ಶಿಕ್ಷಕರು ಬೀಳದ ಕೊಡುಗೆ ನೀಡಿದರು ಈ ಸಂದರ್ಭದಲ್ಲಿ ವಿದ್ಯಾರ್ಥಿ ಗಳು ತಮ್ಮ ಅಭಿಪ್ರಾಯದಲ್ಲಿ

ಸಂತೋಷ್ ಕಾಗಿನಕರ್

ಅವರು ಶಾಲೆಯ ಮಕ್ಕಳಲ್ಲಿಯೆ ತಮ್ಮ ಭವಿಷ್ಯವನ್ನು ಕಂಡವರು. ಹೆಚ್ಚು ಸಮಯವನ್ನು ಶಾಲೆಗಾಗಿಯೆ ಮೀಸಲಿಟ್ಟಿದ್ದಾರೆ. ಇಂತಹ ಶಿಕ್ಷಕರು ಸಿಗುವುದು ತುಂಬಾ ಅಪರೂಪ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


ವರದಿ  ಶ್ರೀಮಂತ್ ಶಿರಾ

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು