ಶಿರಾ : ಚುನಾವಣಾ ರಂಗೇರುತ್ತಿದ್ದು ಕಾಂಗ್ರೆಸ್ ಪಕ್ಷ ಅಭ್ಯರ್ಥಿಗಳ ಪ್ರಥಮ ಪಟ್ಟಿಯನ್ನು ಹೈಕಮಾಂಡ ಪ್ರಕಟಣೆ ಮಾಡಿದೆ.
ಶಿರಾ ವಿಧಾನಸಭಾ ಕ್ಷೇತ್ರದಿಂದ ಹಿರಿಯ ಕಾಂಗ್ರೆಸ್ ಮುಖಂಡ
ಟಿಬಿ ಜಯಚಂದ್ರ
ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದು,
ಇದರ ಪ್ರಯುಕ್ತ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು.
ಕಾಂಗ್ರೆಸ್ ಅಭ್ಯರ್ಥಿಯ ಘೋಷಣೆ ಹಿನ್ನೆಲೆಯಲ್ಲಿ
ರಾಜಕೀಯದಲ್ಲಿ ಸಂಚಲನ.
ವಿಧಾನಸಭೆಯ ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿದ
2023ರ ರಾಜ್ಯ ವಿಧಾನಸಭೆ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿಯು
ತಾಲ್ಲೂಕಿನ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.
ಬಿಜೆಪಿ ಹಾಗೂ ಜೆಡಿಎಸ್ ವಲಯದಲ್ಲಿ ರಾಜಕೀಯ ಚಟುವಟಿಕೆ ಗರಿ ಬಿಚ್ಚಿಕೊಂಡಿದೆ.
ಚುನಾವಣೆ ದಿನಾಂಕ ಘೋಷಣೆಯಾಗುವ ಮೊದಲೇ ರಾಜಕೀಯ ಲೆಕ್ಕಾಚಾರ ಶುರುವಾಗಿದೆ.
ಶಿರಾ ಕ್ಷೇತ್ರದ ನಿರೀಕ್ಷೆಯಂತೆ ಮಾಜಿ ಸಚಿವ ಟಿ.ಬಿ.ಜಯಚಂದ್ರ
ಅವರಿಗೆ ಟಿಕೆಟ್ ಘೋಷಿಸಲಾಗಿದೆ.
ಟಿಬಿಜೆ ಅವರು ವಿಧಾನಸಭೆಗೆ ಕಳ್ಳಂಬೆಳ್ಳ ಮತ್ತು ಶಿರಾ 6 ಬಾರಿ ಸ್ಪರ್ಧಿಸಿದ್ದಾರೆ.
ಹಾಗೂ 2018ರ ಚುನಾವಣೆಯಲ್ಲಿ ಸೋತರೆ, ಮತ್ತೆ ಉಪ ಚುನಾವಣೆಯಲ್ಲಿ ಬಾಜಪ ತನ್ನ ಖಾತೆಯನ್ನು ಪ್ರಾರಂಭಿಸಿತ್ತು.
ಅದರೆ ಕಳ್ಳಂಬೆಳ್ಳ ಕ್ಷೇತ್ರ
ಮರು ವಿಂಗಡಿಸಲಾಗದ ನಂತರ, 2008 ಹಾಗೂ 2113ರ ಚುನಾವಣೆಯಲ್ಲಿ ಗೆಲುವು ಪಡೆದಿದ್ದಾರೆ.
ಜೆಡಿಎಸ್–ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿದ್ದರು.
ಶಿರಾ ಕ್ಷೇತ್ರದಿಂದ ಈ ಬಾರಿ
ಮುಖಂಡರು ಟಿಕೆಟ್ ಬಯಸಿ ವರಿಷ್ಠರಿಗೆ ಮನವಿಪತ್ರ ಸಲ್ಲಿಸಿದರೂ ಜಯಚಂದ್ರ ಅವರನ್ನೇ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಲಾಗಿದೆ.
ಬಿಜೆಪಿಯಲ್ಲಿ ಹಾಲಿ ಶಾಸಕ ರಾಜೇಶ್ ಗೌಡ. ನಡುವೆ
ಬಿ.ಕೆ ಮಂಜುನಾಥ್ (ಮಧುಗಿರಿ ಜಿಲ್ಲಾ ಬಾಜಪ ಸಂಘಟನೆಯ ಅದ್ಯಕ್ಷ) ಅವರು ಟಿಕೆಟ್ ಬೇಡಿಕೆ ಇಟಿದ್ದಾರೆ ಕಳೆದ ಉಪಚುನಾವಣೆ ಟಿಕೆಟ್ ತ್ಯಾಗ ಮಾಡಿದ ಅವರು ಈ ಬಾರಿ ಟಿಕೆಟ್ ನೀಡುವಂತೆ ಮನವಿ ಮಾಡಿದ್ದಾರೆ..
ಇನ್ನೂ ಜೆಡಿಎಸ್ ನಲ್ಲಿ ಹಲವು ಮುಖಂಡರು ಪಕ್ಷದ ಟಿಕೆಟ್ ತರಲು ಪ್ರಯತ್ನ ನಡೆಸಿದ್ದಾರೆ. ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ವರದಿ ಶಿರಾ ಶ್ರೀಮಂತ್