ಶಿರಾದಲ್ಲಿ ಶಿವಾಜಿ ಜಯಂತಿ ಮೆರವಣಿಗೆಗೆ ಸ್ಥಳಿಯ ಜನಪ್ರತಿನಿಧಿಗಳಿಂದ ಚಾಲನೆ

ಶಿರಾ: ಅತ್ತ ಸೂರ್ಯ ನೆತ್ತಿಯ ಮೇಲೆ ಜಾರುತ್ತಲೇ ಇತ್ತ ನಗರದಲ್ಲಿ ಛತ್ರಪತಿ ಶಿವಾಜಿ ಮಹಾರಾಜ ಜಯಂತಿ ಅಂಗವಾಗಿ ಆರಂಭವಾದ ರೂಪಕ ವಾಹನಗಳ ಮೆರವಣಿಗೆ ಕಣ್ಮನ ಸೆಳೆಯಿತು.



ಎತ್ತ ನೋಡಿದರೂ ಹಾರಾಡುತ್ತಿದ್ದ ಕೇಸರಿ ಬಾವುಟಗಳು, ಶಿವಾಜಿ ಇತಿಹಾಸ ಸಾರುವ ಕಲಾಕೃತಿಗಳು, ಜಾನಪದ ಕಲಾತಂಡಗಳ ಪ್ರದರ್ಶನ ಮೆರವಣಿಗೆ ಕಳೆ ಹೆಚ್ಚಿಸಿದವು. ವಿವಿಧ ಸಂಘಟನೆಗಳು

ನಗರದ ವಿದ್ಯಾ ಗಣಪತಿಯ ದೇವಾಲಯ ಆವರಣದಲ್ಲಿ

ಪಲ್ಲಕ್ಕಿಯಲ್ಲಿದ್ದ ಶಿವಾಜಿ ಮೂರ್ತಿಗೆ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.



ವಿದ್ಯಾ ಗಣಪತಿಯ

 ದೇಗುಲದ ಬಳಿಯಿಂದ ಹೊರಟ ಮೆರವಣಿಗೆಗೆ

 ಮೆರವಣಿಗೆಯಲ್ಲಿ ಸ್ಥಳೀಯ ಜನಪ್ರತಿನಿಧಿಗಳ ನೃತ್ಯ ಗಮನ ಸೆಳೆಯಿತು. ಮಧುಗಿರಿ ಜಿಲ್ಲಾ ಸಂಘಟನೆಯ ಬಾಜಪ ಅದ್ಯಕ್ಷ ಬೇವಿನ ಹಳ್ಳಿ ಮಂಜುನಾಥ್

 ಸೇರಿದಂತೆ ಅನೇಕರು ಭಾಗವಹಿಸಿದ್ದರು. ಭರ್ಜರಿ ನೃತ್ಯ ಮಾಡಿದರು. ಡೊಳ್ಳು ಸದ್ದಿಗೆ ಕುಣಿದು‌ ಕುಪ್ಪಳಿಸಿದ ಜ‌ನ ಪ್ರತಿ‌ನಿಧಿಗಳಿಗೆ ಅಪಾರ ಸಂಖ್ಯೆಯಲ್ಲಿ ಜಮಾಯಿಸಿದ್ದ ಬೆಂಬಲಿಗರು ಸಾಥ್ ನೀಡಿದರು.


ವರದಿ ಶಿರಾ ಶ್ರೀಮಂತ್.

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು