ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಉಳಿವಿಗೆ ದಯಾನಂದ್ ಏಕಾಂಗಿ ಹೋರಾಟ.

 ಗುಬ್ಬಿ : ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಸ್ಥಾಪಿತವಾಗಿ ನೂರುವರ್ಷ ಅದನ್ನು ಉಳಿಸಲು ಪಾದಯಾತ್ರೆ ಮಾಡುವ ಮೂಲಕ ಏಕಾಂಗಿ ಹೋರಾಟಕ್ಕೆ ನಿಂತ ದಯಾನಂದ ಎಂಬ ಭದ್ರಾವತಿಯ ನಾಗರೀಕ.


 ಭದ್ರಾವತಿಯಿಂದ್ ಪ್ರತಿದಿನ 40 ಕಿಲೋಮೀಟರ್ ನಡೆಯುವ ಇವರು ಫೆಬ್ರವರಿ 14ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ಮಾಡಲು ಸಿದ್ಧರಾಗಿದ್ದಾರೆ ಈ ಕಾರ್ಖಾನೆಯು 1923ರಲ್ಲಿ ಮೈಸೂರು ಜಯಚಾಮರಾಜ ಒಡೆಯರ್ ಅವರಿಂದ ಸ್ಥಾಪಿತವಾಗಿ ಈ ವರ್ಷಕ್ಕೆ ಸುಮಾರು ನೂರು ವರ್ಷಗಳು ಸಂದಿವೆ ಇಂತಹ ವಿಶೇಷವಾದ ಸಾವಿರಾರು ಜನರಿಗೆ ಕೆಲಸ ಕೊಟ್ಟಿದ್ದಂತಹ ಕೈಗಾರಿಕೆಯನ್ನು ಕೇಂದ್ರ ಸರ್ಕಾರ ಕಳೆದ ತಿಂಗಳು ಜನವರಿಯಲ್ಲಿ ಮುಚ್ಚುವುದಕ್ಕೆ ಆದೇಶ ಮಾಡಿದೆ ಮಾರ್ಚ್ 31ಕ್ಕೆ ಬಹುತೇಕ ಬೇಗ ಬೇಡುವ ಸಾಧ್ಯತೆ ಇದೆ. ಇಲ್ಲಿಯ ಹುಟ್ಟಿ ಇಲ್ಲಿಗೆ ಬೆಳೆದು ಇಲ್ಲಿಗೆ ಕೆಲಸ ಮಾಡಿಕೊಂಡಿದಂತಹ ಸಾವಿರಾರು ಕುಟುಂಬಗಳು ಇಂದು ಬೀದಿಗೆ ಬೀಳುವ ಸ್ಥಿತಿಗೆ ಬಂದಿದೆ ನಮ್ಮ ಮೈಸೂರು ಅರಸರು ವಿಶ್ವೇಶ್ವರಯ್ಯನಂತಹ ಮಹಾನ್ ವ್ಯಕ್ತಿಗಳು ಕಟ್ಟಿದಂತಹ ಕೈಗಾರಿಕೆಯನ್ನು ಉಳಿಸಿಕೊಳ್ಳುವ ಬದಲು ಅದನ್ನು ಮುಚ್ಚಿ ಖಾಸಗಿ ಕಂಪನಿಗೆ ನೀಡುವ ಹುನ್ನಾರ ನಡೆಯುತ್ತಿರುವುದು ದೇಶದಾ ದುರಂತವಾಗಿದೆ ಹಾಗಾಗಿ ಅಲ್ಲಿನ ಕಾರ್ಮಿಕರು ಹೋರಾಟದ ಹಾದಿಯಲ್ಲಿ ಸಾಗಿದರೆ 


 ನಾನು ಭದ್ರಾವತಿಯ ಒಬ್ಬ ನಾಗರಿಕನಾಗಿ ಆ ಒಂದು ಕೈಗಾರಿಕೆಯನ್ನು ಉಳಿಸಿಕೊಳ್ಳಲೇಬೇಕು ಎಂದು ಫೆಬ್ರವರಿ 7ರಿಂದ ಏಕಾಂಗಿಯಾಗಿ ಬೆಂಗಳೂರಿನ ಫ್ರೀಡಂ ಪಾರ್ಕ್ ವರೆಗೂ ಪಾದಯಾತ್ರೆ ಕೈಗೊಳ್ಳುತ್ತಿದ್ದೇನೆ ಫೆಬ್ರವರಿ 14 ದೇಶದ ಕರಾಳ ದಿನ ಅಂತಹ ದಿನವೇ ನಾನು ಮತ್ತು ಕೆಲಸ ಮಾಡುತ್ತಿರುವ ಕಾರ್ಮಿಕರು ಪ್ರತಿಭಟನೆ ಮಾಡಲು ಮುಂದಾಗಿದ್ದೇವೆ

 ಎಂದು ತಿಳಿಸಿದರು ಕಳೆದ ರಾತ್ರಿ ತುಮಕೂರು ಜಿಲ್ಲೆಯನ್ನ ಪ್ರವೇಶಿಸಿರುವ ದಯಾನಂದ ಏಕಾಂಗಿಯಾಗಿ ಪಾದಯಾತ್ರೆಯತ್ತ ಸಾಗುತ್ತಿದ್ದಾರೆ.


 ವರದಿ : ಪ್ರಸನ್ನ ದೊಡ್ಡಗುಣಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು