ಶಿರಾ: ಸರ್ಕಾರಿ ಗೋಶಾಲೆಯಲ್ಲಿ ಹಸು, ಕರುಗಳ ಸಾವಿನಿಂದ ಸಾರ್ವಜನಿಕರು ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿಕ್ಕ ಬಾಣಗೆರೆ ಗ್ರಾಮದ ಸಮೀಪದ ಪ್ರಾರಂಭವಾಗಿರುವ ಸರ್ಕಾರಿ ಗೋ ಶಾಲೆಯಲ್ಲಿ ಸೂಕ್ತ ನಿರ್ವಹಣೆ ಇಲ್ಲದೆ, ಹಸು, ಕರುಗಳ ಸಾವಿನಿಂದ ಜನಪ್ರತಿನಿಧಿಗಳು, ಮುಖಂಡರು ಪಶು ಸಂಗೋಪನೆ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು, ಸ್ಥಳಾವಕಾಶ ಕಡಿಮೆ ಮತ್ತು ನಿರ್ವಹಣಾ ವ್ಯವಸ್ಥೆಗೆ ಸಿಬ್ಬಂದಿ ವರ್ಗದ ಹಲವಾರು ಪೋಲಿಸ್ ಪ್ರಕರಣದ ಹಸುಗಳನ್ನು ಒಂದೆ ಜಾಗದಲ್ಲಿ ವ್ಯವಸ್ಥೆ ಮಾಡಿ ಸ್ವಚ್ಚತ ಕೊರತೆಯಿಂದ ಒಂದು ಹಸು ಏಟು ಕರು ಸಾವು.
ಪಶುವೈದ್ಯ ಇಲಾಖೆಯ ನಿರ್ಲಕ್ಷ ತಾಲೂಕ್ ಸರ್ಕಾರಿ ಗೋಶಾಲೆಯಲ್ಲಿ ಬಿಸಿಲಿನ ಧಗೆ ಗೋಶಾಲೆಯಲ್ಲಿ ಕನಿಷ್ಠ ಸತ್ತ ಹಸು-ಕರುಗಳನ್ನು ಸರಿಯಾಗಿ ಸಂಸ್ಕಾರ ಮಾಡಲಾಗಿದೆಯೇ ಎಂದರೆ ಮತ್ತೊಂದು ದುರಂತ ಕಣ್ಣಿಗೆ ಕಟ್ಟುತ್ತದೆ.
ಸಾವನ್ನು ನಿರೀಕ್ಷಿಸಿರುವಂತೆ ಗೋಶಾಲೆಯ ಅನತಿ ದೂರದಲ್ಲಿ ನಾಲ್ಕಾರು ಗುಂಡಿಗಳನ್ನು ತೆರೆಯಲಾಗಿದೆ. ಅವುಗಳಲ್ಲಿ ಒಂದರಲ್ಲಿ ಹಸುವನ್ನು ಸಂಸ್ಕಾರ ಮಾಡಲಾಗಿದೆಯಂತೆ.
ಪಕ್ಕದ ಮತ್ತೊಂದು ಗುಂಡಿಯಲ್ಲಿ 3-4 ಸತ್ತ ಕರುಗಳನ್ನು ಎಸೆದಿದ್ದು, ಮಣ್ಣು ಮುಚ್ಚುವುದನ್ನೆ ಮರೆತಿರುವ ಕಾರಣ ಕರುಗಳು ಕೊಳೆತು ಸುತ್ತಲೂ ದುರ್ವಾಸನೆ ಹರಡಿದೆ. ಮೃತ ದೇಹಕ್ಕೆ ಲಕ್ಷಾಂತರ ಹುಳುಗಳು ಬಿದ್ದಿರುವುದನ್ನು ಕಾಣಬಹುದಾಗಿದೆ. ಮತ್ತೊಂದು ಕರುವಿನ ದೇಹವನ್ನು ನೆಲದ ಮೇಲೆ ಎಸೆದಿದ್ದು, ನಾಯಿ ನರಿಗಳಿಗೆ ಆಹಾರವಾಗುತ್ತಿದೆ...
*ಮಾಜಿ ಸಚಿವ ಟಿ ಬಿ ಜಯಚಂದ್ರ ಮತ್ತು ರೈತ ಸಂಘ ಮುಖಂಡರುಗೋ ಶಾಲೆಗೆ ಭೇಟಿ*
ನೀಡಿ ಪಶು ಸಂಗೋಪನ ಇಲಾಖೆ ಜಿಲ್ಲಾ ನಿರ್ದೇಶಕರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ತಕ್ಷಣ ಹಸುಗಳಿಗೆ ನೆರಳು ಒದಗಿಸುವ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ವರದಿ ಶಿರಾ ಶ್ರೀಮಂತ್