ಚಿಕ್ಕನಾಯಕನಹಳ್ಳಿ : 52 ಬಡ, ಮಧ್ಯಮ ವಿದ್ಯಾರ್ಥಿಗಳಿಗೆ ವರವಾದ ಸುಜ್ಞಾನ ನಿಧಿ ವಿದ್ಯಾರ್ಥಿ ವೇತನ.
ಪಟ್ಟಣದ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ (ರಿ ) ಪ್ರಯೋಜಿತ ಸ್ವಸಹಾಯ ಸಂಘಗಳ ಸದಸ್ಯರ ಮಕ್ಕಳಿಗೆ ಮಂಜೂರುಗೊಂಡ *ಸುಜ್ಞಾನನಿಧಿ ವಿದ್ಯಾರ್ಥಿ ವೇತನ* ಮಂಜೂರಾತಿ ಪತ್ರವನ್ನು ನೀಡಲು ಹಮ್ಮಿಕೊಳ್ಳಲಾಗಿತ್ತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಸಂಸ್ಥಾಪಕ ಅಧ್ಯಕ್ಷರು ಶ್ರೀ ಡಾ. ವೀರೇಂದ್ರ ಹೆಗಡೆಯವರ ಕನಸಿನ ಯೋಜನೆಗಳಲ್ಲಿ ಒಂದಾದ ಸುಜ್ಞಾನ ನಿಧಿ ವಿದ್ಯಾರ್ಥಿ ವೇತನದ 2022-23 ನೇ ಸಾಲಿನ 242, ವಿದ್ಯಾರ್ಥಿಗಳಿಗೆ 15,38,000, 589 ವಿದ್ಯಾರ್ಥಿಗಳಿಗೆ 68,40,000 ಹಾಗೂ ರಾಜ್ಯದಾದ್ಯಂತ 62950 ವಿದ್ಯಾರ್ಥಿಗಳಿಗೆ 74,96,00 000 ಲಕ್ಷ ವಿತರಿಸಿದ್ದು ಇಂದು ಈ ಯೋಜನೆಯ 25 ವರ್ಷಗಳ ಸವಿನೆನಪಿಗಾಗಿ ಸಾವಿರಾರು ಬಡ ಮಧ್ಯಮ ವರ್ಗದ ಪ್ರಥಮವಾಗಿ 52 ವಿದ್ಯಾರ್ಥಿಗಳಿಗೆ ಸುಜ್ಞಾನ ನಿಧಿ ವಿದ್ಯಾರ್ಥಿ ವೇತನ ಮಂಜೂರಾತಿ ಪತ್ರವನ್ನು ಜಿಲ್ಲಾ ನಿರ್ದೇಶಕರಾದ ಶ್ರೀ ದಿನೇಶ್ ಡಿ.ವಿತರಣೆ ಮಾಡಿದರು.
ನಂತರ ಮಾತನಾಡಿದ ಅವರು ಚಿಕ್ಕನಾಯಕನಹಳ್ಳಿ ಎಲ್ಲಿ ಮೂರುವರೆ ಸಾವಿರ ಸ್ವಸಹಾಯ ಸಂಘ ಸದಸ್ಯರುಗಳು ಹಣ 10 ಕೋಟಿ ರೂ ಬೃಹತ್ ಉಳಿತಾಯ ಹಣ ಉಳಿಸಿದ್ದು ಸಂಸ್ಥೆಗೆ ಬಂದ ಲಾಭಾಂಶದಲ್ಲಿ 3 ಕೋಟಿ 80 ಲಕ್ಷ ಸಂಘದ ಸದಸ್ಯರುಗಳಿಗೆ ವಿತರಿಸಲಾಗಿದೆ "ಯೋಜನೆಯು ಅನೇಕ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುತ್ತಿದ್ದು, ನಮ್ಮ ಸಂಘಗಳ ಸದಸ್ಯರ ಮಕ್ಕಳು ಶಿಕ್ಷಣ ವಂಚಿತರಾಗಬಾರದು ಎಂಬ ಉದ್ದೇಶದಿಂದ ಶ್ರೀ ಡಾ||ವೀರೇಂದ್ರ ಹೆಗ್ಗಡೆಯವರು ಈ ಕಾರ್ಯಕ್ರಮ ಮಾಡಿದ್ದು, ನಮ್ಮ ಸಂಘಗಳ ಸದಸ್ಯರು ಇದರ ಸದುಪಯೋಗ ಪಡಿಸಿಕೊಂಡು ಮಕ್ಕಳ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು " ಎಂದು ಹೇಳಿದರು.
ಜಿಲ್ಲಾ ಜನ ಜಾಗೃತಿವೇದಿಕೆಯ ಸದಸ್ಯರಾದ ಶ್ರೀ ಪ್ರಕಾಶ್ ರವರು ಮಾತನಾಡಿ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಕೃಪೆ ಬಡ ಮಧ್ಯಮ ವರ್ಗದ ಮಕ್ಕಳ ವಿದ್ಯಾಭ್ಯಾಸಕ್ಕೆ ವಿದ್ಯಾ ಪ್ರಸಾದವಾಗಿ ಬಂದಿದೆ ಎಂದು ತಿಳಿದುಕೊಂಡು ಉತ್ತಮ ನಾಗರಿಕಾಯಾಗಿ ಸಮಾಜದಲ್ಲಿ ಉತ್ತಮ ಸ್ಥಾನಮಾನ ಗಳಿಸಿ ಶುಭ ಹಾರೈಸಿದರು.
ತಾಲೂಕು ಯೋಜನಾಧಿಕಾರಿ ಪ್ರೇಮಾನಂದ ಎಲ್. ಬಿ. ಯವರು ಸ್ವಾಗತಿಸಿ ಮಾತನಾಡಿ BE, MBBS, BAMS ಮತ್ತು BDS ನಂತಹ ತಾಂತ್ರಿಕ ಕೋರ್ಸ್‌ಗಳನ್ನು ಅನುಸರಿಸಲು ಪ್ರತಿ ತಿಂಗಳು 1000 ರೂ. ವಿದ್ಯಾರ್ಥಿವೇತನ ನೀಡಲಾಗುತ್ತದೆ. TCH, DPEd, ಬೆಡ್, ನರ್ಸಿಂಗ್, ITI, ಮತ್ತು ಡಿಪ್ಲೋಮಾ ಕೋರ್ಸ್‌ಗಳಂತಹ ತಾಂತ್ರಿಕ ಕೋರ್ಸ್‌ಗಳಿ ಗೆ ಪ್ರತಿ ತಿಂಗಳಿಗೆ 400 ನೀಡಲಾಗುತ್ತದೆ ಎಂದರು.
ಕೃಷಿ ಮೇಲ್ವಿಚಾರಕರಾದ ಯೋಗೀಶ್ ರವರು ಕಾರ್ಯಕ್ರಮ ನಿರೂಪಣೆ ಮಾಡಿದರು.
ಹಣಕಾಸು ಪ್ರಬಂಧಕರಾದ ತೀರ್ಥ ಪ್ರಸಾದ್, ಆಡಳಿತ ಪ್ರಬಂಧಕರಾದ ಪುನೀತ್ ರವರು ಸಹಕರಿಸಿದರು. ವಿದ್ಯಾರ್ಥಿಗಳು, ,ಪೋಷಕರು ಉಪಸ್ಥಿತರಿದ್ದರು.
ವರದಿ ಚಿಕ್ಕನಾಯಕನಹಳ್ಳಿ ಚಂದ್ರು.