ಸುಮಾರು 30 ರಿಂದ 35 ಸಾವಿರ ಬೆಂಬಲಿಗರ ನಡುವೆ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಸಿದ ಜೆಡಿಎಸ್ ಅಭ್ಯರ್ಥಿ ಎಂ.ವಿ.ವೀರಭದ್ರಯ್ಯ.

 ಮಧುಗಿರಿ - ಮೇ.10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮಧುಗಿರಿ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಎಂ.ವಿ.ವೀರಭದ್ರಯ್ಯ ಮಂಗಳವಾರದಂದು ನಾಮಪತ್ರ ಸಲ್ಲಿಸಿದರು.


ತಾಲೂಕಿನ ಮೂಲೆ ಮೂಲೆಗಳಿಂದ ನೂರಾರು ವಾಹನಗಳಲ್ಲಿ ಜೆಡಿಎಸ್ ಕಾರ್ಯಕರ್ತರು, ಎಂ.ವಿ.ವಿ ಅಭಿಮಾನಿಗಳು ಸುಮಾರು 30 ರಿಂದ 35 ಸಾವಿರ ಸಂಖ್ಯೆಯಲ್ಲಿ ಜನ ಆಗಮಿಸಿ, ಅದ್ದೂರಿ ಮೆರವಣಿಗೆಯಲ್ಲಿ ಭಾಗವಹಿಸಿದರು. ಪಟ್ಟಣದ ಐತಿಹಾಸಿಕ ದಂಡೂರ ಬಾಗಿಲ ಮೂಲಕ ವಿವಿಧ ಕಲಾ ತಂಡಗಳೊಂದಿಗೆ ಪ್ರಾರಂಭವಾದ ಮೆರವಣಿಗೆಯು ದೊಡ್ಡಪೇಟೆ, ಮಲ್ಲೇಶ್ವರ ಸ್ವಾಮಿ ದೇವಸ್ಥಾನದ ರಸ್ತೆ, ಡೂಮ್ ಲೈಟ್ ವೃತ್ತ, ಟೌನ್ ಹಾಲ್ ರಸ್ತೆ, ಟಿವಿವಿ ಸರ್ಕಲ್ ಮೂಲಕ ತಹಸಿಲ್ದಾರ್ ಕಚೇರಿ ತಲುಪಿತು.


ಈ ಸಂದರ್ಭದಲ್ಲಿ ಶಾಸಕ ಎಂ.ವಿ.ವೀರಭದ್ರಯ್ಯ ಮಾತನಾಡಿ ನಾನು ಶಾಸಕನಾಗಿದ್ದ ಅವಧಿಯಲ್ಲಿ ಸಾವಿರಾರು ಕೋಟಿ ರೂ ಗಳ ಅನುದಾನ ತಂದು ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿಸಿರುತ್ತೇನೆ. ಮತದಾರರು ಈ ಬಾರಿ ನನ್ನನ್ನು ಚುನಾಯಿಸಿದರೆ ಮಧುಗಿರಿ ಕಂದಾಯ ಜಿಲ್ಲೆ, ಪ್ರವಾಸೋದ್ಯಮ ಕೇಂದ್ರ ಸೇರಿದಂತೆ ಹತ್ತು ಹಲವಾರು ಜನಪರ ಕೆಲಸಗಳನ್ನು ಮಾಡುತ್ತೇನೆ ಎಂದರು.


ತುಮುಲ್ ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ಕೊಂಡವಾಡಿ ಚಂದ್ರಶೇಖರ್, ಪುರಸಭಾಧ್ಯಕ್ಷ ತಿಮ್ಮರಾಜು, ಸದಸ್ಯರಾದ ಎಂ.ಆರ್.ಜಗನ್ನಾಥ್, ಎಂ.ಎಲ್.ಗಂಗರಾಜು, ಎಂ.ಎಸ್.ಚಂದ್ರಶೇಖರ ಬಾಬು, ಕೆ.ನಾರಾಯಣ, ಯುವ ಮುಖಂಡರಾದ ಸುಮುಖ ಕೊಂಡವಾಡಿ, ಎಸ್.ಡಿ.ಕೆ ವೆಂಕಟೇಶ್, ಪಕ್ಷದ ಮುಖಂಡರುಗಳಾದ ಸಿದ್ದಪ್ಪ, ಎಚ್.ಆರ್.ದೊಡ್ಡಯ್ಯ, ಜೆಡಿಎಸ್ ಅಧ್ಯಕ್ಷ ಬಸವರಾಜು, ಎಸ್.ಸಿ.ಘಟಕದ ಅಧ್ಯಕ್ಷ ಗುಂಡಗಲ್ಲು ಶಿವಣ್ಣ, ಬಿಜವರ ಶ್ರೀನಿವಾಸ್, ವೆಂಕಟಪುರ ಗೋವಿಂದರಾಜು, ತಿಮ್ಮಣ್ಣ, ಎಸ್.ಮೋಹನ್ ಮುಂತಾದವರು ಇದ್ದರು.


ವರದಿ ಮಧುಗಿರಿ ಬಾಲು ಪಣಿಂದ್ರ.

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು