ನಾವು ರಾವಣನ ಮಕ್ಕಳಲ್ಲ, ರಾಮನ ಮಕ್ಕಳು ಎಂದು ನೆರೆದ ಜನರಿಗೆ ಕರೆಕೊಟ್ಟು ಉಬ್ಬೆರುವಂತೆ ಮಾಡಿದ ಮಾಧುಸ್ವಾಮಿ.

 ಚಿಕ್ಕನಾಯಕನಹಳ್ಳಿ : ಕೇಂದ್ರದ ಮೋದಿ ಆಡಳಿತ, ರಾಜ್ಯದಲ್ಲಿ ಯಡಿಯೂರಪ್ಪ ಹಾಗೂ ಬಸವ ರಾಜ್ ಬೊಮ್ಮಾಯಿ ನೆತೃತ್ವದಲ್ಲಿ ಒಳ್ಳೆಯ ಆಡಳಿತ ನೀಡಿದ್ದೇವೆ.


ಐತಿಹಾಸಿಕ ನಿರ್ಧಾರ ಗಳನ್ನ ತೆಗೆದುಕೊಂಡು ಭಾರತ ವನ್ನು ಸದೃಢ ವಾಗಿ ಮಾಡಿದ್ದೇವೆ.


ನಾವು ರಾವಣನ ಮಕ್ಕಳಲ್ಲ, ರಾಮನ ಮಕ್ಕಳು ಎಂದು ನೆರೆದ ಜನರಿಗೆ ಕರೆಕೊಟ್ಟು ಉಬ್ಬೆರುವಂತೆ ಮಾಡಿದ ಮಾಧುಸ್ವಾಮಿ.

ರಾಜ್ಯ ಬಿಜೆಪಿ ಸರ್ಕಾರ ಒಳ ಮೀಸಲಾತಿ ಹೆಚ್ಚಿಸಿದ್ದೇವೆ ಇದರಿಂದ 38 ವರ್ಷಗಳ ಸಮಸ್ಯೆ ಪರಿಹರಿಸಿದ್ದೇವೆ, ಲಂಬಾಣಿ ಜನಾಂಗಕ್ಕೆ ಶೇ.3% ರಿಂದ 4.5 % ಗೆ ಹೆಚ್ಚಿಸಿದ್ದೇವೆ ಇದನ್ನು ಕಾಂಗ್ರೆಸ್ಸಿನವರು ರಾಜಕೀಯ ಮಾಡಲು ಹೊರಟಿರುವುದು ದುರದೃಷ್ಠಕರ ಎಂದು ಬಿಜೆಪಿ ವಿಧಾನಸಭಾ ಅಭ್ಯರ್ಥಿ ಜೆ.ಸಿ.ಮಾಧುಸ್ವಾಮಿ ಹೇಳಿದರು.

ಪಟ್ಟಣದ ಹಳೆಯೂರು ಆಂಜನೇಯಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಸಾವಿರಾರು ಕಾರ್ಯಕರ್ತರೊಂದಿಗೆ ಮೆರವಣಿಗೆಯಲ್ಲಿ ತಾಲ್ಲೂಕು ಕಛೇರಿಗೆ ಆಗಮಿಸಿದ ನಂತರ ಚುನಾವಣಾಧಿಕಾರಿ ರಘು ರವರಿಗೆ ಮನವಿ ಸಲ್ಲಿಸಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.


10 ವರ್ಷಗಳ ಹಿಂದೆ ತಾಲ್ಲೂಕು ಯಾವ ರೀತಿ ಇತ್ತು ಈಗ ಯಾವ ರೀತಿ ಇದೆ ನೋಡಿ ಎಂದ ಅವರು, ಮಾಜಿ ಮುಖ್ಯಮಂತ್ರಿಯವರಿಗೆ ಹೆಚ್.ಡಿ.ಕುಮಾರಸ್ವಾಮಿಯವರಿಗೆ ಸರ್ಕಾರ 3 ವಸತಿ ಗೃಹಗಳನ್ನು ಮಂಜೂರು ಮಾಡಿದ್ದರೂ ತಾಜ್ ವೆಸ್ಟೆಂಡ್ ಹೋಟೆಲ್ ನಲ್ಲಿ ಮೊಕ್ಕಾಂ ಮಾಡಿ ಅಧಿಕಾರ ಮಾಡುತ್ತಿದ್ದರು ಇವರು 2 ಕೋಟಿ ಕಾರಿನಲ್ಲೇ ಓಡಾಡುತ್ತಿದ್ದರು ಈ ಮನುಷ್ಯ ನನಗೆ ದುರಹಂಕಾರಿ ಎಂದು ಹೇಳುತ್ತಾರೆ, ನಾನು ಈಗಲೂ ನಮ್ಮ ಹಳ್ಳಿಯಲ್ಲೇ ವಾಸ ಮಾಡುತ್ತೇನೆ, ಇವರ ರೀತಿ ವೇಸ್ಟೆಂಡ್ ತಾಜ್ ಹೋಟೆಲ್ ನಲ್ಲಿ ವಾಸಿಸುವುದಿಲ್ಲ, 155 ಕೆರೆಯಲ್ಲಿ ಬೇಸಿಗೆಯಲ್ಲಿ ಬೇಸಿಗೆಯಲ್ಲಿ ನೀರು ಹರಿಸಿದ್ದೇನೆ, ಸಣ್ಣ ನೀರಾವರಿ ಸಚಿವನಾಗಿ ತಾಲ್ಲೂಕಿನ ಕೆರೆಗಳನ್ನು ತುಂಬಿಸಿರುವುದರಿಂದ ತಾಲ್ಲೂಕಿನ ಬೋರ್ ವೆಲ್ ಗಳಲ್ಲೂ ನೀರು ಯತೇಚ್ಛವಾಗಿ ನೀರು ಬಂದಿರುವುದರಿಂದ ರೈತರಿಗೆ ಕೋಟ್ಯಂತರ ರೂಪಾಯಿ ಉಳಿದಿದೆ, ಹೆಣ್ಣು ಮಕ್ಕಳು ಬೀದಿಗಳಲ್ಲಿ ಬಿಂದಿಗೆ ಹಿಡಿದು ನೀರು ತರುತ್ತಿದ್ದರು ಈಗ ಪ್ರತಿ ಹಳ್ಳಿಗಳಲ್ಲೂ ನಲ್ಲಿ ಹಾಕಿಸಿದ್ದೇನೆ, ತಾಲ್ಲೂಕಿನಲ್ಲಿ ಐದು ಹೊಸ ವಿದ್ಯುತ್ ಸ್ಟೇಷನ್ ಗಳು , ತಾಲ್ಲೂಕಿಗೆ ಮಕ್ಕಳ ಆಸ್ಪತ್ರೆ, ಕೆ.ಎಸ್.ಆರ್.ಟಿ.ಸಿ ಡಿಪೋ, ಪಾಲಿಟೆಕ್ನಿಕ್ ಕಾಲೇಜ್, ಹೊಸ ತಾಲ್ಲೂಕು ಕಛೇರಿ, ಚಿ.ನಾ.ಹಳ್ಳಿ ಮತ್ತು ಹುಳಿಯಾರಿನಲ್ಲಿ ಹೊಸ ಪೋಲಿಸ್ ಸ್ಟೇಷನ್ , ತಾಲ್ಲೂಕಿನ ರಸ್ತೆಗಳಲ್ಲಿ ಕಾಂಕ್ರಿಟ್ ರಸ್ತೆ, ಅಟಲ್ ಭೂ ಜಲ್ ಯೋಜನೆಯಡಿ ಕೆರೆಗಳಿಗೆ ನೀರು ತರಿಸಿದ್ದೇನೆ ಎಂದರಲ್ಲದೆ ಜೆಡಿಎಸ್ ನ ಕುಮಾರಸ್ವಾಮಿ ಕಾಂಗ್ರೆಸ್, ಬಿಜೆಪಿಯಲ್ಲಿ ಸಿಡಿದು ಬಂದವರಿಗೆ ಟಿಕೆಟ್ ನೀಡಲು ಬಿ.ಫಾರಂ ಇಟ್ಟುಕೊಂಡು ಕಾಯುತ್ತಿದ್ದಾರೆ, ರಾಜಕೀಯದಲ್ಲಿ ಎಲ್ಲ ಅಧಿಕಾರವನ್ನು ಅನುಭವಿಸಿ ಈಗ ಬೇರೆ ಪಕ್ಷಕ್ಕೆ ಜಿಗಿದು ನನ್ನ ಬಗ್ಗೆ ಮಾತನಾಡುತ್ತಾರೆ ಎಂದರು.

ವಿಧಾನ ಪರಿಷತ್ ಸದಸ್ಯ ನಾರಾಯಣಸ್ವಾಮಿ, ಮಾತನಾಡಿ ರಾಜ್ಯದ ಬಾವಿ ನಾಯಕರು, ರಾಜಾಹುಲಿ, ಸದನ ನಾಯಕ,ರ ಗೆಲುವು ಈ ರಾಜ್ಯದಲ್ಲಿ ತುಮಕೂರ್ ಜಿಲ್ಲೆಗೆ ಮೊದಲ ಜಯ ವಾಗಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಹರಿಯಾಣ ಸಂಸದ. ರಾಕೇಶ್ ಜೈನ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಹೆಬ್ಬಾಕ ರವಿಶಂಕರ್, ತಾಲ್ಲೂಕು ಬಿಜೆಪಿ ಅಧ್ಯಕ್ಷ ಕೇಶವಮೂರ್ತಿ, ವಕೀಲರಾದ ಕೆ.ಆರ್.ಚನ್ನಬಸವಯ್ಯ, ಸುನಿಲ್ ಮತ್ತಿತರರು ಉಪಸ್ಥಿತರಿದ್ದರು.


ವರದಿ ಚಿಕ್ಕನಾಯಕನಹಳ್ಳಿ ಚಂದ್ರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು