ಮಹಾ ಶಿವರಾತ್ರಿ ಪ್ರಯುಕ್ತ ಸತತ 13ನೇ ವರ್ಷದ ಸಹಸ್ರಲಿಂಗಾರ್ಚನೆ.

ಶಿರಾ : ಕಳೆದ ಹನ್ನೆರಡು ವರುಷಗಳಿಂದ ಶಿರಾ ಪಟ್ಟಣದಲ್ಲಿ ಲೋಕ ಕಲ್ಯಾಣಾರ್ಥವಾಗಿ ಪವಿತ್ರ ಶಿವರಾತ್ರಿಯ ದಿನದಂದು ಆಚರಿಸಿಕೊಂಡು ಬರುತ್ತಿರುವ ಸಹಸ್ರಲಿಂಗಾರ್ಚನೆ ಕಾರ್ಯಕ್ರಮ. ಜನ ಮಾನಸದ ಭಾಗವಹಿಸುವಿಕೆ ಹಾಗೂ ಒತ್ತಾಸೆಯಿಂದಾಗಿ ಇದೀಗ ಹದಿಮೂರನೆಯ ವರುಷಕ್ಕೆ ಕಾಲಿಟ್ಟಿದೆ. 



ಆರಂಭಿಕವಾಗಿ ಶಿರಾ ಪಟ್ಟಣದ ನಾಗರಿಕರು ಭಾಗವಹಿಸುತ್ತಿದ್ದ ಈ ಕಾರ್ಯಕ್ರಮ ಇದೀಗ ಹೊರ ಜಿಲ್ಲೆಗಳಿಂದ ಮಾತ್ರವಲ್ಲ. ಹೊರ ರಾಜ್ಯಗಳಿಂದಲೂ ಜನರು ಆಸಕ್ತಿಯಿಂದ ಬಂದು ಶ್ರದ್ದೆಯಿಂದ ಪೂಜಾದಿಗಳಲ್ಲಿ ಭಾಗವಹಿಸುತ್ತಿದ್ದಾರೆ. 


ಭಕ್ತಿ ಶ್ರದ್ದೆಯಿಂದ ಅರ್ಚಿಸಿದ ಪರಿಣಾಮ ಅವರ ಜೀವನದಲ್ಲಿ ಒಳಿತು ಕಾಣುತ್ತಿದ್ದಾರೆ. 



ಅನೇಕ ಸರ್ಕಾರಿ ಉನ್ನತ ಅಧಿಕಾರಿಗಳೂ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ವಿಶೇಷವಾಗಿದೆ.


ಇದೀಗ ಹದಿಮೂರನೆಯ

 ವರುಷದ ಕಾರ್ಯಕ್ರಮ ಪೆಬ್ರವರಿ 18 ರಂದು ಸಂಜೆ 6.33 ಗಂಟೆಗೆ ಶಿರಾ ಪಟ್ಟಣದ ಶ್ರೀಲಕ್ಷ್ಮಿ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಜರುಗಲಿದ್ದು ಆಸಕ್ತ ಸದ್ಭಕ್ತರು ಭಾಗವಹಿಸಬಹುದಾಗಿದೆ. 

       

 ಶ್ರೀ ಶಂಕರ ಸಹಸ್ರಲಿಂಗಾರ್ಚನೆ ಸಮಿತಿಯ

ಡಾ:ಪಿ.ಸುರೇಶ್ ಶಾಸ್ತ್ರಿ ತಮ್ಮ ಪತ್ರಿಕಾ ಪ್ರಕಟಣೆ ತಿಳಿಸಿದ್ದಾರೆ

  ಹಾಗೂ

 ಸಹಸ್ರ ಲಿಂಗಾರ್ಚನೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಹೆಚ್ಚಿನ ಜನಕ್ಕೆ ಅವಕಾಶವಿದೆ ಇದರ ಸದುಪಯೋಗವನ್ನು ಪಡೆದುಕೊಳ್ಳಲು ತಿಳಿಸಿದ್ದಾರೆ...


ವರದಿ : ಶಿರಾ ಶ್ರೀಮಂತ್.

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು