ಶಿರಾ:-ನಗರದಲ್ಲಿ ಬೆಳ್ಳಂಬೆಳಗ್ಗೆ ಖಾಕಿ ಪಡೆ ರಸ್ತೆಗಿಳಿದು ಲೈಸೆನ್ಸ್ ಇಲ್ಲದೆ ದ್ವಿಚಕ್ರ ವಾಹನಗಳನ್ನು ಓಡಿಸುತ್ತಿದ್ದ ಅಪ್ರಾಪ್ತರಿಗೆ ಚುರುಕು ಮುಟ್ಟಿಸಿದರು.
ನಗರ ಠಾಣೆ ಇನ್‍ಸ್ಪೆಕ್ಟರ್ ಪ್ರಕಾಶ್. ಕೆ ನೇತೃತ್ವದಲ್ಲಿ
ನಗರದ ಪ್ರವಾಸಿ ಮಂದಿರ ಸರ್ಕಲ್ ಮಧುಗಿರಿ ತುಮಕೂರು ರಸ್ತೆ, ಸೇರಿದಂತೆ ವಿವಿಧೆಡೆ ಪೊಲೀಸರು ದಾಳಿ ನಡೆಸಿ ಬೈಕ್ ಸವಾರರು ಸೇರಿದಂತೆ
ಶಾಲಾ-ಕಾಲೇಜುಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ಲೈಸೆನ್ಸ್ ಇಲ್ಲದೆ ವಾಹನ ಚಾಲನೆ ಮಾಡಬಾರದೆಂದು
ಪೊಲೀಸರು ಮನವರಿಕೆ ಮಾಡಿಕೊಟ್ಟಿದ್ದರು. ಅವರು ಅಪ್ರಾಪ್ತರಿಗೆ ದ್ವಿಚಕ್ರ ವಾಹನಗಳನ್ನು ಕೊಡಬಾರದೆಂದು ಹಲವಾರು ಮನವಿ ಮಾಡಿದ್ದರು ಆದರೂ ಅಪ್ರಾಪ್ತರು ವಾಹನಗಳನ್ನು ಓಡಿಸುವುದು ನಿಂತಿಲ್ಲ.
ಪೊಲೀಸ್ ರ ಭಯವೇ ಇಲ್ಲದೆ ವಿದ್ಯಾರ್ಥಿಗಳು ಮನಬಂದಂತೆ ವಾಹನ ಚಲಾಯಿಸಿ ಅಪಘಾತಗಳಿಗೆ ಕಾರಣರಾಗುತ್ತಿದ್ದಾರೆ.
ಜೊತೆಗೆ ಕರ್ಕಶ ಹಾರನ್‍ಗಳನ್ನು ಬಳಸಿ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದಾರೆ. ಇದನ್ನೆಲ್ಲ ತಡೆಯಲು ಶಾಲಾ ಕಾಲೇಜು ಮುಖ್ಯಸ್ಥರಿಗೂ ವಿದ್ಯಾರ್ಥಿಗಳಿಗೆ ತಿಳಿ ಹೇಳುವಂತೆ ಮನವಿ ಮಾಡಿದ್ದರು.
ಇಷ್ಟಾದರೂ ವಿದ್ಯಾರ್ಥಿಗಳು ವಾಹನ ಚಲಾಯಿಸುವುದು ಮುಂದುವರೆದ ಕಾರಣ ಇಂದು ಬೆಳ್ಳಂಬೆಳಗ್ಗೆ ದಾಳಿ ನಡೆಸಲಾಯಿತು.
ನಗರ ಠಾಣೆಯ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು..
ಸಾರ್ವಜನಿಕ ಪ್ರಶಂಸೆ ಇಂದು
ಪೊಲೀಸ್ ರ ಭಯವೇ ಇಲ್ಲದೆ ವಿದ್ಯಾರ್ಥಿಗಳು ಮನಬಂದಂತೆ ವಾಹನ ಚಲಾಯಿಸುತ್ತದರು
ಇಂದಿನ ಕಾರ್ಯಚರಣೆ ತಾತ್ಕಾಲಿಕವೆ ಎಂಬುದು ಪ್ರಶ್ನೆ ಮೂಡಿದೆ...?
ವರದಿ : ಶಿರಾ ಶ್ರೀಮಂತ್.
