ವಿನೂತನ ಅಡಿಕೆ ಹಾರ ಹಾಗೂ ಪೇಟ ತಯಾರಕ ನಟರಾಜ್ ಗೆ ತಾಲೂಕು ಆಡಳಿತದಿಂದ ಸನ್ಮಾನ.

 ಫೆ 06 ರಂದು ಕಲ್ಪತರು ನಾಡು ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೋಕಿನ ಬಿದರೆಹಳ್ಳ ಕಾವಲ್ ನಲ್ಲಿ ಸ್ಥಾಪನೆಯಾಗಿರುವ HAL ಘಟಕ ಲೋಕಾರ್ಪಣೆ  ಹಾಗೂ ಜಲಜೀವನ್ ಮಿಷನ್ ನ ಶಂಕುಸ್ಥಾಪನೆಗೆ ಆಗಮಿಸಿದ ವೇಳೆ ವಿಶ್ವನಾಯಕ  ದೇಶದ ಹೆಮ್ಮೆಯ ಪ್ರಧಾನ ಮಂತ್ರಿಗಳಾದ  ಸನ್ಮಾನ್ಯ ಶ್ರೀ ನರೇಂದ್ರ ಮೋದಿಜಿ ರವರಿಗೆ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತವು ವಿನೂತನ ಅಡಿಕೆ ಹಾರ ಹಾಗೂ ಅಡಿಕೆ ಪೇಟಾ ವನ್ನು ಹಾಕುವ ಮೂಲಕ ಕೃತಜ್ಞತೆ ಅರ್ಪಿಸಲಾಗಿತ್ತು.


ವಿನೂತನ  ಅಡಿಕೆ ಹಾರ ಹಾಗೂ ಪೇಟವನ್ನು ತಯಾಯಿಸಿದ್ದು ಗುಬ್ಬಿ ತಾಲೂಕಿನ ನಡುವಲ ಪಾಳ್ಯ ಗ್ರಾಮದ ಯುವಕ ನಟರಾಜ್ ಎಂಬುದು ಮತ್ತೊಂದು ಸಂತಸದ ವಿಷಯ. ಈ ವಿಚಾರ ತಿಳಿದ  ಜಿಲ್ಲಾಧಿಕಾರಿಗಳು  ವಿಡಿಯೋ ಕಾನ್ಫರೆನ್ಸ್ ನಲ್ಲಿ ಅಡಿಕೆ ಹಾರ ಹಾಗೂ ಪೇಟ ತಯಾರಿಸಿದ ವ್ಯಕ್ತಿಯನ್ನು ಗೌರವಿಸುವ ನಿಟ್ಟಿನಲ್ಲಿ ತಮ್ಮ ಕಚೇರಿಗೆ ಕರೆತರುವಂತೆ ತಾಲೂಕು ಆಡಳಿತಕ್ಕೆ ಸೂಚಿಸಿದ್ದು ಅದಕ್ಕೂ ಮುನ್ನ ತಾಲೂಕು ಆಡಳಿತವು  ತಮ್ಮ ಕಚೇರಿಗೆ ಆಹ್ವಾನಿಸಿದ ವೇಳೆ ತಹಶೀಲ್ದಾರ್ ಬಿ. ಆರತಿ ಅವರು ಅಭಿನಂದನೆ ಸಲ್ಲಿಸಿದರು.ದೇಶದ ಪ್ರಧಾನಿಗೆ ಗ್ರಾಮೀಣ ಭಾಗದ ಯುವಕನೊಬ್ಬ ತಯಾರಿಸಿದ  ಹಾರ ಹಾಗೂ ಪೇಟವನ್ನು  ಸ್ವೀಕರಿಸಿದ್ದು ಗ್ರಾಮೀಣ ಪ್ರದೇಶಕ್ಕೆ ಹಿರಿಮೆ ತಂದಂತಾಗಿದೆ.



ಜಿಲ್ಲಾಡಳಿತ ಕಲ್ಪತರು ನಾಡಿಗೆ ಆಗಮಿಸಿದ ಸಂದರ್ಭದಲ್ಲಿ ಯಾವ ರೀತಿಯ ನೆನಪಿನ ಕಾಣಿಕೆಯನ್ನು ದೇಶದ ಪ್ರಧಾನಿಗೆ ನೀಡಬೇಕೆಂದು ಯೋಚಿಸುವ ವೇಳೆ ಗ್ರಾಮೀಣ ಭಾಗದ ಯುವಕನಿಗೆ ಅವಕಾಶ ಒದಗಿಸಿ ಕೊಟ್ಟ ತಾಲೂಕು ಆಡಳಿತಕ್ಕೆ ಎಷ್ಟೇ ಧನ್ಯವಾದ ಹೇಳಿದರು ಕಡಿಮೆಯೇ. ಹಾಗಾಗಿ ಅಡಿಕೆ ಹಾರ  ಹಾಗೂ ಪೇಟವನ್ನು ತಯಾರಿಸಿದ ತಯಾರಕನಿಗೆ ಅಭಿನಂದಿಸುವುದು ಸಂಸ್ಕೃತಿ ಹಾಗಾಗಿ ನಿನ್ನೆ ಸಂಜೆ ತಹಶೀಲ್ದಾರ್ ಬಿ ಆರತಿ ಅವರು  ತಯಾರಕ ನಟರಾಜ್ ಅವರನ್ನು ತಮ್ಮ ಕಚೇರಿಗೆ ಕರೆಸಿ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಪರವಾಗಿ ಅಭಿನಂದಿಸಿದರು.


ಈ ಸಂದರ್ಭದಲ್ಲಿ ಪ್ರೊಬೆಷನರಿ ಮಂಜು ನಾಯಕ್, ಶಿರಸ್ತೇದಾರ್ ಶ್ರೀರಂಗ, ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.


ವರದಿ : ಸಂಜಯ್ ಕೊಪ್ಪ.

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು