ಗುಬ್ಬಿ: ಮಡೇನಹಳ್ಳಿ ಗ್ರಾಮದಲ್ಲಿ ಒಂದೇ ತಿಂಗಳಲ್ಲಿ ಎರಡು ಚಿರತೆ ಸೆರೆ ಆತಂಕದಲ್ಲಿ ರೈತರು.
ಗುಬ್ಬಿ ತಾಲೂಕಿನ ಕಸಬಾ ಹೋಬಳಿ ಮಡೇನಹಳ್ಳಿ ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಅಳವಡಿಸಿದ್ದ ಬೋನಿಗೆ ಒಂದು ವರ್ಷದ ಹೆಣ್ಣು ಚಿರತೆ ಸರಿಯಾಗಿದ್ದು 20 ದಿನಗಳ ಹಿಂದೆ ಗಂಡು ಚಿರತೆಯೊಂದು ಸೆರೆಯಾಗಿತ್ತು ಒಂದು ತಿಂಗಳೊಳಗೆ ಎರಡು ಚಿರತೆಗಳು ಬೋನಿಗೆ ಬಿದ್ದಿದ್ದು ಸುತ್ತಮುತ್ತಲ್ಲ ರೈತರು ಹಾಗೂ ಜನರು ಭಯದಲ್ಲಿ ಬದುಕು ನಡೆಸುವಂತಾಗಿದೆ.
ಕುರಿ ಮೇಕೆ, ಸಾಕು ನಾಯಿಗಳ ಬೇಟೆಯಾಡುತ್ತಾ ಹಲವು ದಿನಗಳಿಂದ ರೈತರ ನಿದ್ದೆಗೆಡಿಸಿದ್ದ ಚಿರತೆಗಳು ಒಂದರ ಹಿಂದೆ ಒಂದು ಬೀಳುತ್ತಿರುವುದನ್ನು ಕಂಡು ಜನರು ನಮ್ಮ ಸುತ್ತಮುತ್ತ ಇನ್ನು ಎಷ್ಟು ಚಿರತೆಗಳು ಇವೆಯೋ ಎಂಬ ಆತಂಕದಲ್ಲಿ ತಮ್ಮ ಸಾಕು ಪ್ರಾಣಿಗಳನ್ನು ರಕ್ಷಿಸಿಕೊಳ್ಳುತ್ತಿದ್ದಾರೆ.
ರೈತರು ರಾತ್ರಿ ವೇಳೆಯಲ್ಲಿ ತೋಟಗಳಿಗೆ ನೀರು ಹಾಯಿಸಲು ಹೋದಾಗ ರಸ್ತೆ ಬದಿ ಹಾಗೂ ತೋಟಗಳಲ್ಲಿ ಚಿರತೆಗಳನ್ನು ಕಂಡು ತಮ್ಮ ಸುತ್ತಮುತ್ತಲ ಜನರಿಗೆ ತಿಲಿಸುತ್ತಿರುವುದರ ಜೊತೆಗೆ ಒಂದೇ ಸಮನೆ ಬೋನಿಗೆ ಬೀಳುತ್ತಿರುವ ಚಿರತೆ ಕಂಡು ನಮ್ಮ ಸುತ್ತಮುತ್ತ ಇನ್ನೆಷ್ಟು ಚಿರತೆಗಳು ಇವೆಯೋ ಇದರಿಂದ ನಮಗೆ ಯಾವಾಗ ಮುಕ್ತಿ ಎಂಬ ಭಯದಲ್ಲಿ ಪ್ರತಿನಿತ್ಯ ಕಾಲ ಕಳೆಯುವಂತಾಗಿದೆ.
ವರದಿ : ನರಸಿಂಹಮೂರ್ತಿ ಗುಬ್ಬಿ
