ಗುಬ್ಬಿ :ಪಟ್ಟಣದ ಸುಭಾಷ್ ನಗರ, ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಮತದಾರರಿಗೆ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ತಹಶೀಲ್ದಾರ್ ಬಿ.ಆರತಿ ಚಾಲನೆ ನೀಡಿದರು.
ಅತಿ ಕಡಿಮೆ ಮತದಾನ ಹಾಕಿರುವ ಮತಕೇಂದ್ರದಲ್ಲಿ ಮತದಾರರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ತಾಲೂಕು ಆಡಳಿತ ತಾಲೂಕು ಪಂಚಾಯತ್ ಹಾಗೂ ಪಟ್ಟಣ ಪಂಚಾಯತ್ ನೇತೃತ್ವದಲ್ಲಿ ಇಂದು ಅರಿವು ಮೂಡಿಸುವ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು.
ಗುಬ್ಬಿ ವಿಧಾನ ಸಭಾ ಕ್ಷೇತ್ರದಲ್ಲಿ ಅತಿ ಕಡಿಮೆ ಮತದಾನ ಆಗಿರುವ ಮತಕೇಂದ್ರಗಳನ್ನು ಗುರ್ತಿಸಿ ಮತದಾರರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಸ್ವೀಪ್ ಸಮಿತಿಯು ಮತದಾರರಲ್ಲಿ ಅತಿ ಕಡಿಮೆ ಮತದಾನ ಆಗಿರುವ ಬಗ್ಗೆ ಮಾಹಿತಿ ಪಡೆದು ಮುಂಬರುವ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಈ ಬಾರಿ ಆ ರೀತಿಯಲ್ಲಿ ಆಗದೇ ಇರುವಂತೆ ನೋಡಿಕೊಂಡು ಪ್ರತಿಯೊಬ್ಬ ಮತದಾರರನ್ನು ಸೆಳೆದು ಮತವನ್ನು ಹಾಕಿಸುವಂತೆ ತಹಶೀಲ್ದಾರ್ ಬಿ. ಆರತಿ ಮನವಿ ಮಾಡಿದರು.
ಸ್ವೀಪ್ ಸಮಿತಿ ಅಧ್ಯಕ್ಷ ಪರಮೇಶ್ವರ್ ಮಾತನಾಡಿ ಯುವ ಮತದಾರರಲ್ಲಿ ಮತದಾನದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಸ್ವೀಪ್ ಸಮಿತಿ ವತಿಯಿಂದ ಪದವಿ ಕಾಲೇಜ್ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಜೊತೆ ಪಟ್ಟಣದಲ್ಲಿ ಅತಿ ಕಡಿಮೆ ಮತವಾಗಿರುವ ಮತಗಟ್ಟೆ ವ್ಯಾಪ್ತಿಯಲ್ಲಿ ಅತಿ ಕಡಿಮೆ ಮತದಾನ ಆಗಿರಲು ಕಾರಣವೇನು ಎಂಬ ಮಾಹಿತಿ ಪಡೆದು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಈ ಬಾರಿ ಮತಗಟ್ಟೆಯಲ್ಲಿ ಮತದಾನ ಆಗುವ ರೀತಿ ಅರಿವು ಮೂಡಿಸುವ ಕೆಲಸವನ್ನು ತಾಲೂಕಿನಲ್ಲಿ ಸ್ವೀಪ್ ಸಮಿತಿ ಮುಂದಾಗಿದೆ ಎಂದು ತಿಳಿಸಿದರು.
ಯುವ ಮತದಾರರಲ್ಲಿ ಮತದಾನದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕೆ ಎಸ್ ಆರ್ ಟಿ ಸಿ ಬಸ್ ನೊಳಗೆ ತೆರಳಿದ ತಹಶೀಲ್ದಾರ್ ಬಿ. ಆರತಿ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷ ಪರಮೇಶ್ವರ್ ತಂಡ ಯಾವುದೇ ಕಾರಣಕ್ಕೂ ಮತದಾನದಿಂದ ದೂರ ಹೋಗದಂತೆ ಅರಿವು ಮೂಡಿಸಿದ್ದು ಮತ್ತೊಂದು ವಿಶೇಷ.
ಈ ಕಾರ್ಯಕ್ರಮದಲ್ಲಿ ಪ.ಪಂ ಮುಖ್ಯಾಧಿಕಾರಿ ಮಂಜುಳಾ ದೇವಿ, ಬಿಇಓ ಸೋಮಶೇಖರ್, ಸರ್ಕಲ್ ಇನ್ಸ್ಪೆಕ್ಟರ್ ಗೋಪಿನಾಥ್, ಕಂದಾಯ ನೀರಿಕ್ಷಕ ರಮೇಶ್ ಮುಖಂಡರಾದ ಶಿವಪ್ಪ ಉಪಸ್ಥಿತರಿದ್ದರು.
ವರದಿ ಸಂಜಯ್ ಕೊಪ್ಪ.
