ದಾಖಲೆ ರಹಿತ ಜನ ವಸತಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಿ ಅಲ್ಲಿಯ ನಿವಾಸಿಗಳಿಗೆ ವಾಸದ ಹಕ್ಕು ದಾಖಲೆಗಳನ್ನು ನೀಡಲಾಯಿತು.

 ಗುಬ್ಬಿ ತಾಲೂಕು ಆಡಳಿತ ವತಿಯಿಂದ ತಹಶೀಲ್ದಾರ್ ಬಿ ಆರತಿ ಅಧ್ಯಕ್ಷತೆಯಲ್ಲಿ ದಾಖಲೆ ರಹಿತ ಜನ ವಸತಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಿ ಅಲ್ಲಿಯ ನಿವಾಸಿಗಳಿಗೆ ವಾಸದ ಹಕ್ಕು ದಾಖಲೆಗಳನ್ನು ನೀಡುವ ಕಾರ್ಯಕ್ರಮವನ್ನು  ಆಯೋಜಿಸಲಾಗಿತ್ತು.


  ದಾಖಲೆ ರಹಿತ ಜನ ವಸತಿ  ಪ್ರದೇಶಗಳನ್ನು ಹೊಸದಾಗಿ 31 ಗ್ರಾಮವನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಿ ಅಲ್ಲಿಯ ನಿವಾಸಿಗಳಿಗೆ ಹಕ್ಕು ದಾಖಲಾತಿ ಪ್ರಮಾಣ ಪತ್ರಗಳನ್ನು  ನೀಡುವ ಕಾರ್ಯಕ್ರಮವನ್ನು ಇಂದು ತಾಲೂಕು ಕಚೇರಿಯ ಕಂದಾಯ ಭವನದಲ್ಲಿ ತಹಶೀಲ್ದಾರ್ ಬಿ ಆರತಿ ಅವರ ಅಧ್ಯಕ್ಷತೆಯಲ್ಲಿ ನೀಡಲಾಯಿತು.


  ಹಲವು ವರ್ಷಗಳಿಂದ ಸರ್ಕಾರಿ ಜಮೀನಿನಲ್ಲಿ ವಾಸವಿರುವ ಪಾಲನುಭವಿಗಳಿಗೆ ಕಂದಾಯ ಗ್ರಾಮದ ಭಾಗವಾಗಿ ಪರಿವರ್ತಿಸಿ ವಾಸದ ಹಕ್ಕು ಪತ್ರ  ನೀಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ರಾಜ್ಯ ಸರ್ಕಾರವು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ಮೂಲ ಉದ್ದೇಶ ದಾಖಲೆ ರಹಿತ ಜನ ವಸತಿಗಳಿಗೆ ಕಾನೂನಿನ ಮಾನ್ಯತೆ ನೀಡಿ ಅಲ್ಲಿ ವಾಸಿಸುವ ಕುಟುಂಬಗಳಿಗೆ ಅವರ ವಾಸದ ಮನೆ ಹಾಗೂ ವಾಸಕ್ಕಾಗಿ ಬಳಕೆಯಾಗುತ್ತಿರುವ ಇತರೆ ಜಾಗಗಳಿಗೆ ಹಕ್ಕು ದಾಖಲೆಗಳನ್ನು ಒದಗಿಸಿ ಕೊಡುವುದಾಗಿದೆ ಎಂದು ತಹಶೀಲ್ದಾರ್ ಬಿ ಆರತಿ ತಿಳಿಸಿದರು.


 ಹಲವು ವರ್ಷಗಳಿಂದ ಸರ್ಕಾರಿ ಜಮೀನಿನಲ್ಲಿ ವಾಸವಿರುವ ರೈತಾಪಿ ವರ್ಗ, ಫಲಾನುಭವಿಗಳು ಯಾವುದೇ ದಾಖಲೆಗಳು ಇಲ್ಲದೇ ಯಾವುದೇ ಪ್ರಯೋಜನವನ್ನು ಪಡೆಯಲು ಸಾಧ್ಯವಾಗದೆ ಇರುವ ಬಗ್ಗೆ ಕಳವಳ ವ್ಯಕ್ತಪಡಿಸುತ್ತಾ ಇದ್ದ ಸಂದರ್ಭದಲ್ಲಿ ರಾಜ್ಯ ಸರ್ಕಾರವು ಕಂದಾಯ ಗ್ರಾಮವನ್ನಾಗಿ ಪರಿವರ್ತಿಸಿ ಕಂದಾಯ ಗ್ರಾಮ ನಿವೇಶನ ಮಂಜೂರಾತಿ ಪ್ರಮಾಣ ಪತ್ರವನ್ನು ಕೊಡುವ ಮೂಲಕ ಫಲಾನುಭವಿಗಳಲ್ಲಿ ಮಂದಹಾಸ ಮೂಡಿಸಿರುವುದು ಸ್ವಾಗತಾರ್ಹ ಸಂಗತಿ.


 ತಾಲೂಕಿನ ಕಡಬ ಹೋಬಳಿಯ  ಕರೆಗೌಡನಹಟ್ಟಿ ಗ್ರಾಮದ 30 ಫಲಾನುಭವಿಗಳಿಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿಗಳು ಸಾಂಕೇತಿಕವಾಗಿ  ವಿತರಣೆ ಮಾಡಿದರು.


 ತಾಲೂಕಿನಲ್ಲಿ ಒಟ್ಟು 989 ಹಕ್ಕು ಪತ್ರಗಳನ್ನು ಇಂದು ವಿತರಣೆ ಮಾಡಲಾಯಿತು.


ಕಸಬಾ - 192

ಕಡಬ - 368

ಚೇಳೂರು -73

ಸಿ ಎಸ್ ಪುರ - 91

ನಿಟ್ಟೂರು -  209

ಹಾಗಲವಾಡಿ - 56 

ಮಂಜೂರಾತಿ ಪ್ರಮಾಣ ಪತ್ರಗಳನ್ನು ಇಂದು ವಿತರಣೆ ಮಾಡಲಾಯಿತು.


ಈ ಕಾರ್ಯಕ್ರಮದಲ್ಲಿ ಶಿರಸ್ತೇದಾರ್ ಶ್ರೀರಂಗ, ಕಸಬಾ ಕಂದಾಯ ನಿರೀಕ್ಷಕ ರಮೇಶ್ ಕುಮಾರ್, ಗ್ರಾಮ ಲೆಕ್ಕಿಗರು, ಹಾಗೂ ಸಿಬ್ಬಂದಿ ಫಲಾನೂಭವಿಗಳು ಉಪಸ್ಥಿತರಿದ್ದರು.


ವರದಿ ಸಂಜಯ್ ಕೊಪ್ಪ ಗುಬ್ಬಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು