ಗಾಂಧಿ ಸರ್ವ ಕಾಲಕ್ಕೂ ಸಲ್ಲುವ ವ್ಯಕ್ತಿತ್ವ:--ನಂದೀಶ್ ಬಟ್ಟೆರಿ.

 ಚಿಕ್ಕನಾಯಕನಹಳ್ಳಿ : ಗಾಂಧಿ ಆಲೋಚನೆಗಳು ಮತ್ತು ಚಿಂತನೆಗಳು ಗಾಂಧಿಯವರನ್ನು ಸಮಕಾಲೀನ ಸಂದರ್ಭದಲ್ಲಿ ಇಂದಿಗೂ ಪ್ರಸ್ತುತವೆನಿಸುತ್ತದೆ. ಎಂದು ತಾಲೂಕು ಮಕ್ಕಳ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಂದೀಶ್ ಬಟ್ಟೆರಿ ನುಡಿದರು.



ಪಟ್ಟಣದ ನವೋದಯ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲೂಕ್ ಕ,ಸಾ ಪ ಮತ್ತು ಸಹಯೋಗದಲ್ಲಿ ನಡೆದ ದಿವಂಗತ ಜಿ ವಿ ನಾರಾಯಣ ಮೂರ್ತಿ ದತ್ತಿ ಉಪನ್ಯಾಸದಲ್ಲಿ ಗಾಂಧಿಯವರ ರಾಜಕೀಯ ಮತ್ತು ಆರ್ಥಿಕ ಚಿಂತನೆಗಳು ವಿಷಯ ಕುರಿತು ಮಾತನಾಡಿದರು.


ಗಾಂಧಿಯ ಸರಳ ವ್ಯಕ್ತಿತ್ವ ಅವರಲ್ಲಿದ್ದಂತಹ ಮೌಲ್ಯಗಳು ಅವರನ್ನು ರಾಜಕೀಯ ಆರ್ಥಿಕ ಚಿಂತಕರನ್ನಾಗಿ ರೂಪಿಸಿತು ಎಂದು ಹೇಳಿದರು.


  ಉದ್ಘಾಟನೆ ನೆರವೇರಿಸಿ ಮಾತನಾಡಿದ ತಾಲೂಕು, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ. ಎಸ್ ರವಿಕುಮಾರ್ ಕಟ್ಟೆಮನೆ ಮಾತನಾಡಿ ಗಾಂಧಿವಾದಿಯಾದ ನಾರಾಯಣ ಮೂರ್ತಿ ಅವರ ಹೆಸರಲ್ಲಿ ದತ್ತಿ ಉಪನ್ಯಾಸ ಮಾಡುತ್ತಿರುವುದು ಸಂತಸ ವಿಷಯ ಎಂದರು.


ವಿದ್ಯಾರ್ಥಿಗಳು ಇದರ ಕಡೆ ಹೆಚ್ಚು ಮಗ್ನರಾದರೆ ಗಾಂಧಿ ತಲುಪುದಸಾಧ್ಯ ಎಂದರು..


 ಆಶಯ ನುಡಿ ಮಾತನಾಡಿದ ನಗರ ಕ.ಸಾ. ಪ. ಕೋಶ್ಯಾಧ್ಯಕ್ಷರಾದ ನವೀನ್ ರಾವತ್ ಇಂದು ಗಾಂಧಿಯ ಕುರಿತಾದ ಉಪನ್ಯಾಸ ಜೊತೆಗೆ ಅನುವಾದ ಸಾಹಿತ್ಯದ ನಡೆಯುತ್ತಿರುವುದು ಸಾಹಿತ್ಯ ಪರಿಷತ್ತಿನ ದಿಕ್ಕನ್ನು ಸೂಚಿಸುತ್ತದೆ ಎಂದರು.


 ಹಿರಿಯ ಸಾಹಿತಿ ಎಂ. ವಿ. ನಾಗರಾಜರಾವ್ ಮಾತನಾಡಿ ನಾರಾಯಣ ಮೂರ್ತಿ ಅಪ್ಪಟ ಗಾಂಧಿ ವಾದಿಯಾಗಿದ್ದು ಅಂತ ಮೌಲ್ಯಗಳನ್ನು ರೂಢಿಸಿಕೊಂಡು ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ ಮಹತ್ವ ಪಡೆದ ಕಾರಣಕ್ಕಾಗಿ ಅವರ ಹೆಸರಿನಲ್ಲಿ ದತ್ತಿ ಉಪನ್ಯಾಸ ನಡೆಯುತ್ತಿದೆ ಎಂದರು. 

ಊರಿನ ಮೇಲೆ ಇದ್ದ ಅಭಿಮಾನ ಅವರನ್ನು ಶಕ್ತಿಯನ್ನಾಗಿ ಬೆಳೆಸಿತು ಎಂದರು.


ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಡಾ.ಸಿ.ರವಿಕುಮಾರ್ ಮಾತನಾಡಿ ಗಾಂಧಿ ವರ್ಣಿಸುವುದು ಹಿಮಾಲಯವನ್ನು ವರ್ಣಿಸಿದಂತೆ, ಅವರ ಚಿಂತನೆಗಳು ಸರ್ವಕಾಲಕ್ಕೂ ಮುಖ್ಯವಾಗಿವೆ ಎಂದರು. ತನ್ನ ಕಾಯಕ ಚಿಂತನೆ, ಗುಡಿ ಕೈಗಾರಿಕೆಗಳ ಪರಿಕಲ್ಪನೆ, ಸಮಾಜದ ಏಳಿಗೆಗೆ ದುಡಿದ ಅವರ ಕಾರ್ಯ ಶ್ಲಾಘನೀಯ ಎಂದರು. ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಹೆಜ್ಜೆ ಇಡಬೇಕು ಎಂದರು.


ಕಾರ್ಯಕ್ರಮದಲ್ಲಿ ತೇಜಸ್ವಿನಿ ನಿರೂಪಿಸಿ, ದೀಪಿಕಾ ಸ್ವಾಗತಿಸಿ, ತೇಜಸ್ ವಂದಿಸಿದರು.


ವರದಿ ಚಿಕ್ಕನಾಯಕನಹಳ್ಳಿ ಚಂದ್ರು

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು